More

    ಖ್ಯಾತ ಕ್ರಿಕೆಟಿಗನಿಗೆ ಹಣ ನೀಡಿದ್ದ ‘ಕಲಿಯುಗದ ಕರ್ಣ ಅಂಬರೀಶ್’, ಮಾಹಿತಿ ಹಂಚಿಕೊಂಡ ಸಂಸದೆ ಸುಮಲತಾ

    ಬೆಂಗಳೂರು: ಚಂದನವನದ ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್‍ರವರು ಕಲಿಯುಗದ ಕರ್ಣ ಎಂದೇ ಖ್ಯಾತಿ ಪಡೆದಿದ್ದರು. ಕೆಲ ವರ್ಷಗಳ ಹಿಂದೆ ಅಂಬರೀಶ್‍ರವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ 2 ಲಕ್ಷ ರೂ. ಹಣ ನೀಡಿರುವ ಬಗ್ಗೆ ಸಂಸದೆ ಸುಮಲತಾರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ‘ಕ್ಯಾಪ್ಟನ್ ಕೂಲ್’ ಎಂದೇ ಖ್ಯಾತಿ ಗಳಿಸಿಕೊಂಡಿದ್ದ ಎಂ.ಎಸ್. ಧೋನಿಗೆ ಈ ಹಿಂದೆ ಅಂಬರೀಶ್ ಸಹಾಯ ಮಾಡಿದ್ದರು ಎನ್ನುವ ವಿಚಾರವೂ ಬೆಳಕಿಗೆ ಬಂದಿತ್ತು. ಕ್ರಿಕೆಟ್ ಆಡಲು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದ ಧೋನಿ ಆಟ ನೋಡಿ ಮನಸೋತ ರೆಬಲ್ ಸ್ಟಾರ್, ಅವರ ಕಷ್ಟದ ಬಗ್ಗೆ ತಿಳಿದು ಹಣ ನೀಡಿದ್ದರಂತೆ. ಈ ವಿಚಾರದ ಬಗ್ಗೆ ಮಂಡ್ಯ ಸುಮಲತಾ ಅಂಬರೀಶ್ ಈಗ ಮಾಹಿತಿ ಹೊರಹಾಕಿದ್ದಾರೆ.

    ಅಂಬರೀಶ್‍ರವರು ಮಾಡಿದ ಮಾನವೀಯ ಕಾರ್ಯಗಳ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಏಕೆಂದರೆ ಅವರು ಮಾಡುವ ದಾನದ ಬಗ್ಗೆ ಎಲ್ಲಿಯೂ ಪ್ರಚಾರ ಮಾಡಿಕೊಳ್ಳುತ್ತಿರಲಿಲ್ಲ. ಅನಿರೀಕ್ಷಿತವಾಗಿ ಈ ಬಗ್ಗೆ ನನಗೆ ತಿಳಿದಾಗ ಸರ್ಪ್ರೈಸ್ ಆಗುತ್ತದೆ. ಅವರನ್ನು ಪ್ರೀತಿಸುವ ಜನರೇ ದಾನ ಕರ್ಣ ಎಂದು ಅಂಬರೀಶ್‍ರನ್ನು ಕರೆಯುತ್ತಾರೆ ಎಂದು ಟ್ವಿಟ್​​ನಲ್ಲಿ ಬರೆದುಕೊಂಡಿದ್ದಾರೆ.

    2004, ಭಾರತ-ಶ್ರೀಲಂಕಾ ಪಂದ್ಯ:

    2004ರಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಏಕದಿನ ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅದ್ಭುತ ಆಟ ಪ್ರದರ್ಶಿಸಿದರು. ಈ ವೇಳೆ ಪಂದ್ಯ ನೋಡಲು ಹೋಗಿದ್ದ ಅಂಬರೀಶ್‌ಗೆ ಧೋನಿ ಆಟ ಗಮನ ಸೆಳೆಯಿತು. ಬಳಿಕ ಧೋನಿಯ ಹಿನ್ನೆಲೆ ಬಗ್ಗೆ ತಿಳಿದುಕೊಂಡು ಅಂಬರೀಶ್, ಧೋನಿ ಭೇಟಿ ಮಾಡಿ 2 ಲಕ್ಷ ರೂಪಾಯಿ ಚೆಕ್ ಕೊಟ್ಟಿದ್ದರಂತೆ. ಈ ಕುರಿತು ಅನೇಕ ಪತ್ರಿಕೆಗಳಲ್ಲಿ ತಡವಾಗಿ ವರದಿಯಾಗಿದೆ.

    ಒಲಿಂಪಿಕ್ಸ್ ಪದಕ ವಿಜೇತನಿಗೆ ಗೌರವ, ಆರ್ಮಿ ಕ್ರೀಡಾಂಗಣಕ್ಕೆ ‘ನೀರಜ್ ಚೋಪ್ರ’ ಹೆಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts