More

    ಹಿರಿಯ ಚಿಂತಕ, ವಿಮರ್ಶಕ, ಪ್ರಗತಿಪರ ಹೋರಾಟಗಾರರ ಜಿ. ರಾಜಶೇಖರ್ ನಿಧನ

    ಉಡುಪಿ : ಪ್ರಗತಿಪರ ಹೋರಾಟಗಾರ, ಲೇಖಕ ಜಿ.ರಾಜಶೇಖರ್ (75) ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾದರು.

    ರಾಜಶೇಖರ್​ ಅವರು 2019 ರಿಂದ ಪ್ರೋಗ್ರೆಸಿವ್ ಸುಪ್ರಾ-ನ್ಯೂಕ್ಲಿಯರ್ ಪಾಲ್ಸಿ (ಪಿಎಸ್‌ಪಿ ಅಥವಾ ಎಟಿಪಿಕಲ್ ಪಾರ್ಕಿನ್ಸನ್) ನಿಂದ ಬಳಲುತ್ತಿದ್ದರು. ಇತ್ತೀಚೆಗೆ ಶ್ವಾಸಕೋಶ ಗಂಭೀರ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ತುರ್ತು ಚಿಕಿತ್ಸೆ ಪಡೆದರೂ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

    ಕೋಮುವಾದದ ವಿರುದ್ಧ ತಮ್ಮ ದೃಢ ನಿಲುವಿಗೆ ಹೆಸರಾಗಿದ್ದ ರಾಜಶೇಖರ್ ಅವರು ಈ ವಿಷಯದ ವಿರುದ್ಧ ಸದಾ ಧ್ವನಿ ಎತ್ತುತ್ತಿದ್ದರು. ಕೋಮುವಾದದ ವಿರುದ್ಧದ ಎಲ್ಲಾ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಕೋಮುಗಲಭೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದರು ಮತ್ತು ಅಲ್ಲಿನ ಜನರೊಂದಿಗೆ ಮಾತನಾಡುತ್ತಿದ್ದರು ಮತ್ತು ಈ ನಿದರ್ಶನಗಳಿಗೆ ಸಂಬಂಧಿಸಿದಂತೆ ಸತ್ಯಶೋಧನಾ ವರದಿಗಳನ್ನು ಬರೆಯುತ್ತಿದ್ದರು. ಅಲ್ಪಸಂಖ್ಯಾತರು, ದಲಿತರು ಮತ್ತು ಸಮಾಜದ ಇತರ ತುಳಿತಕ್ಕೊಳಗಾದ ವರ್ಗಗಳ ಹಕ್ಕುಗಳ ಹೋರಾಟಗಳಲ್ಲಿ ಭಾಗವಹಿಸಲು ಅವರು ಯಾವಾಗಲೂ ಸಿದ್ಧರಾಗಿದ್ದರು.

    ರಾಜಶೇಖರ್​ ಅವರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನೆರವೇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts