More

    ಗುಣಮಟ್ಟದ ಆಹಾರ ನೀಡದಿದ್ದಲ್ಲಿ ಕ್ರಮ

    ಎಚ್.ಡಿ.ಕೋಟೆ: ಗ್ರಾಹಕರಿಗೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡಬೇಕು. ತಪ್ಪಿದಲ್ಲಿ ಅಂತಹ ಹೊಟೇಲ್‌ಗಳ ವಿರುದ್ಧ ಕ್ರಮ ವಹಿಸಲಾಗುವುದು ಎಂದು ತಹಸೀಲ್ದಾರ್ ಶ್ರೀನಿವಾಸ್ ಎಚ್ಚರಿಸಿದರು.

    ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ಕೇಂದ್ರದ ಸಹಯೋಗದಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಂಗಡಿ ಮತ್ತು ಬೇಕರಿ, ಹೋಟೆಲ್ ಮಾಲೀಕರಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

    ಎಲ್ಲ ರೀತಿಯ ಆಹಾರ ಉದ್ಯಮಿಗಳು ಕಡ್ಡಾಯವಾಗಿ ತರಬೇತಿ ಪಡೆದು ಎಫ್‌ಎಸ್‌ಎಸ್‌ಎಐ ಪರವಾನಗಿ ಪಡೆದಿರಬೇಕು ಎಂದು ಹೇಳಿದರು.
    ತಾಲೂಕು ಆರೋಗ್ಯ ಅಧಿಕಾರಿ ಡಾ.ಟಿ.ರವಿಕುಮಾರ್ ಮಾತನಾಡಿ, ಆಹಾರ ಸುರಕ್ಷತಾ ಕಾಯ್ದೆ 2006 ಅಡಿಯಲ್ಲಿ ಎಲ್ಲ ಮಾಲೀಕರು ಕಡ್ಡಾಯವಾಗಿ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಪರವಾನಗಿ ಪಡೆಯಬೇಕು ಎಂದು ಹೇಳಿದರು.

    ಅಂಗಡಿ, ಬೇಕರಿಗಳಲ್ಲಿ ಶುಚಿತ್ವ ಕಾಪಾಡಬೇಕು, ಗ್ರಾಹಕರಿಗೆ ಉತ್ತಮ ಆಹಾರ ಪದಾರ್ಥಗಳನ್ನು ನೀಡಬೇಕು ಎಂದು ಹೇಳಿದರು.

    ಅಂಗಡಿ-ಹೊಟೇಲ್ ಮಾಲೀಕರಿಗೆ ಯಶವಂತ್ ಮೂರ್ತಿ ತರಬೇತಿ ನೀಡಿದರು. ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ಕೇಂದ್ರದ ಜಿಲ್ಲಾ ಸಂಯೋಜಕಿ ರಶ್ಮಿ, ಕೇಂದ್ರದ ಮುಖ್ಯಸ್ಥ ರಾಘವೇಂದ್ರಶೆಟ್ಟಿ, ನಂದಿನಿ, ರಾಜಶೇಖರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts