More

    ಉದ್ಯಾನಗಳ ಅಭಿವೃದ್ಧಿಗೆ ಕ್ರಮ

    ಕೆ.ಆರ್.ನಗರ: ಪಟ್ಟಣದ ಬಡಾವಣೆ ನಿವಾಸಿಗಳ ಆರೋಗ್ಯದ ದೃಷ್ಟಿಯಿಂದ ಸ್ಥಳೀಯ ಉದ್ಯಾನಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

    ಪಟ್ಟಣದ ವಿಜಯನಗರ ಬಡಾವಣೆಯ 3ನೇ ವಾರ್ಡ್‌ನಲ್ಲಿ 59 ಲಕ್ಷ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ಥಳೀಯ ಪಾರ್ಕ್‌ಗಳನ್ನು ಅಭಿವೃದ್ಧಿ ಮಾಡಿದರೆ ನಾಗರಿಕರ ವಾಯುವಿಹಾರಕ್ಕೆ, ಮಕ್ಕಳು ಆಟವಾಡಲು ಅನುಕೂಲವಾಗಲಿದೆ. ಪಟ್ಟಣದ ವಿವಿಧ ವಾರ್ಡ್‌ಗಳ ಪಾರ್ಕ್ ಅಭಿವೃದ್ಧಿ, ಆಂಜನೇಯ ಸ್ವಾಮಿ ದೇವಾಲಯದ ಆವರಣಕ್ಕೆ ಗ್ರಿಲ್ ಅಳವಡಿಕೆ, ತರಕಾರಿ ಮಾರುಕಟ್ಟೆ ದುರಸ್ತಿ ಮತ್ತು ಮುಸ್ಲಿಂ ಬಡಾವಣೆಯ ಮಿಲಾದ್ ಪಾರ್ಕ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

    ಬಜಾರ್ ರಸ್ತೆಯಲ್ಲಿ ಬೀದಿಬದಿ ವ್ಯಾಪಾರಸ್ಥರ ಸಂಖ್ಯೆ ಹೆಚ್ಚಾಗಿದ್ದು ಇದರಿಂದ ಪಾದಚಾರಿಗಳು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಇದಕ್ಕೆ ಶೀಘ್ರದಲ್ಲೇ ಶಾಶ್ವತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

    ಪುರಸಭಾ ಸದಸ್ಯರಾದ ಪ್ರಕಾಶ್, ಕೆ.ಎಲ್.ಜಗದೀಶ್, ಶಂಕರ್, ನಟರಾಜು, ಶಿವುನಾಯಕ್, ಶಂಕರ್‌ಸ್ವಾಮಿ, ಜಾವೀದ್ ಪಾಷಾ, ಸೈಯದ್ ಸಿದ್ಧಿಕ್, ಮಾಜಿ ಸದಸ್ಯರಾದ ಪದ್ಮಮ್ಮ ಶಂಕರೇಗೌಡ, ಕೆ.ವಿನಯ್, ಮುಖ್ಯಾಧಿಕಾರಿ ಡಾ.ಜಯಣ್ಣ, ಇಂಜಿನಿಯರ್ ಕೆ.ಆರ್.ಚಂದ್ರಶೇಖರ್, ಕಾಂಗ್ರೆಸ್ ನಗರಾಧ್ಯಕ್ಷ ಎಂ.ಜೆ.ರಮೇಶ್, ಆರೋಗ್ಯ ರಕ್ಷಾ ಕಮಿಟಿ ಸದಸ್ಯರಾದ ಲೋಕೇಶ್, ಕೆಂಚಿ ಮಂಜು, ಮುಖಂಡರಾದ ಮೂಡಲಕೊಪ್ಪಲು ಕೃಷ್ಣೇಗೌಡ, ಚಂದ್ರು, ತಿಮ್ಮಶೆಟ್ಟಿ, ಮಹದೇವ್, ಕೆ.ಎಲ್.ಜಯರಾಮು, ನಂಜುಂಡಸ್ವಾಮಿ ಇನ್ನಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts