More

    ಪ್ರತಿಯೊಬ್ಬ ಮತದಾರ ತಪ್ಪದೆ ಮತ ಚಲಾಯಿಸಿ

    ಕೆ.ಆರ್.ನಗರ: ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರ ತಪ್ಪದೆ ಮತ ಚಲಾಯಿಸುವ ಮೂಲಕ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತಾಲೂಕು ಸಂಯೋಜಕ ಕಾಟ್ನಾಳು ಎಲ್.ಹೇಮಂತ್‌ಕುಮಾರ್ ಹೇಳಿದರು.

    ಪಟ್ಟಣದಲ್ಲಿ ಶುಕ್ರವಾರ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ವತಿಯಿಂದ ಪಟ್ಟಣಾದ್ಯಂತ ಶುಕ್ರವಾರ ಆಯೋಜಿಸಿದ್ದ ಸ್ವೀಪ್ ಮತದಾನ ಅರಿವಿನ ಜಾಗೃತಿ ಜಾಥಾ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎಂಬುದು ಪ್ರತಿಯೊಬ್ಬ ಜವಾಬ್ದಾರಿ ಪ್ರಜೆಯ ಆದ್ಯ ಕರ್ತವ್ಯವಾಗಿದೆ ಎಂದರು.

    ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ನಿಮಗೆ ಸೂಕ್ತವೆನಿಸಿದ ವ್ಯಕ್ತಿಗೆ ಮತ ಚಲಾಯಿಸಬೇಕು. ಯಾವುದೇ ಕಾರಣಗಳನ್ನು ಮುಂದಿಟ್ಟುಕೊಂಡು ಬೇಜವಾಬ್ದಾರಿ ತೋರಿ ಮತದಾನ ಮಾಡದೆ ನಿರ್ಲಕ್ಷ್ಯ ವಹಿಸಿದರೆ ನಾವು ನಮ್ಮ ನಾಗರಿಕ ಹಕ್ಕನ್ನು ಕಳೆದು ಕೊಂಡಂತಾಗುತ್ತದೆ. ಅದಕ್ಷ, ಅಪ್ರಾಮಾಣಿಕ ವ್ಯಕ್ತಿಗಳು ಆಯ್ಕೆಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾವು ದ್ರೋಹ ಎಸಗಿದಂತಾಗುತ್ತದೆ ಎಂದು ಎಚ್ಚರಿಸಿದರು.

    ತಾಲೂಕು ಪಂಚಾಯಿತಿ ಇಒ ಜಿ.ಕೆ.ಹರೀಶ್, ಅಂಗವಿಕಲರಾದ ಬಸವಪಟ್ಟಣದ ಗಿರೀಶ್, ಹೊಸಅಗ್ರಹಾರದ ವಸಂತ, ಚೌಕಹಳ್ಳಿ ರವಿ ಮಾತನಾಡಿದರು. ಪುರಸಭಾ ಆರೋಗ್ಯ ನಿರೀಕ್ಷಕ ರಾಜೇಂದ್ರ, ಸಿಬ್ಬಂದಿ ಯೋಗೇಶ್, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಮತ್ತು ತಾಲೂಕಿನ ಅಂಗವಿಕಲರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts