More

    ಪುರಸಭೆಗೆ ನಷ್ಟ ಉಂಟಾಗಲು ಮುಖ್ಯಾಧಿಕಾರಿಯೇ ನೇರ ಹೊಣೆ

    ಕೆ.ಆರ್.ನಗರ: ಪುರಸಭೆಯ 72 ವಾಣಿಜ್ಯ ಮಳಿಗೆಗಳಿಂದ ಲಕ್ಷಾಂತರ ರೂ. ಬಾಡಿಗೆ ನಷ್ಟವುಂಟಾಗಿದ್ದು ಇದಕ್ಕೆ ಪುರಸಭಾ ಆಡಳಿತ ಮಂಡಳಿ ಹಾಗೂ ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ ಅವರೇ ನೇರ ಹೊಣೆಗಾರರಾಗಿದ್ದು ಅವರೇ ನಷ್ಟ ಭರಿಸಬೇಕೆಂದು ಎಂದು ನಗರ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರುದ್ರೇಶ್ ಆಗ್ರಹಿಸಿದರು.

    ಆನ್‌ಲೈನ್ ಮೂಲಕ ಟೆಂಡರ್ ಆಗಿ ಒಂದು ತಿಂಗಳೇ ಕಳೆದರೂ ಬಿಡ್‌ದಾರರಿಗೆ ಮಳಿಗೆಗಳನ್ನು ಹಸ್ತಾಂತರ ಮಾಡದೇ ಇರುವುದರಿಂದ ಪುರಸಭೆಗೆ 24 ಲಕ್ಷ ರೂ. ನಷ್ಟವುಂಟಾಗಿದ್ದು ಈ ನಷ್ಟವನ್ನು ಮುಖ್ಯಾಧಿಕಾರಿಯೇ ದಂಡದ ರೂಪದಲ್ಲಿ ಪುರಸಭೆಗೆ ಕಟ್ಟಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

    ಹಳೇ ಹರಾಜಿನಿಂದ ಮಳಿಗೆಗಳಿಂದ ಪ್ರತಿ ತಿಂಗಳು 3 ರಿಂದ 4 ಲಕ್ಷ ರೂ. ಮಾತ್ರ ಆದಾಯ ಬರುತ್ತಿತ್ತು. ಆದರೆ ಈಗಿನ ಹರಾಜಿನಿಂದ ಉತ್ತಮ ಲಾಭ ಬರುವುದಿದ್ದರೂ ಹಳೇ ಮಳಿಗೆಯವರ ಮೇಲೆ ಯಾಕೆ ಅತಿಯಾದ ಪ್ರೀತಿ ತೋರಿಸುತ್ತಿದ್ದಾರೆ ಎಂದು ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ ಎಂದರು.
    ಶಾಸಕ ಡಿ.ರವಿಶಂಕರ್ ಅವರು ಈ ಪುರಸಭಾ ಮಳಿಗೆಗಳ ವಿಚಾರವಾಗಿ ಹಣ ಪಡೆದಿಲ್ಲ ಎಂದು ಹೇಳಿದ್ದಾರೆ ಹೊರತು, ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಿಲ್ಲ. ಅಲ್ಲದೆ ನಮ್ಮ ನಾಯಕರಾದ ಸಾ.ರಾ.ಮಹೇಶ್ ಅವರು 20 ವರ್ಷಗಳಲ್ಲಿ ಸಾರ್ವಜನಿಕರಿಗೆ 400 ಕೋಟಿ ರೂ. ಖರ್ಚು ಮಾಡಿದ್ದೇನೆ ಎಂದು ಹೇಳಿರುವ ಬಗ್ಗೆ ರವಿಶಂಕರ್ ಅವರು ಈ ಬಗ್ಗೆ ಜನರಿಗೆ ಲೆಕ್ಕ ಕೊಡಿ ಅಂತ ಕೇಳಿದ್ದಾರೆ ಇದು ಸರಿಯೇ? ಎಂದು ಪ್ರಶ್ನಿಸಿದರು.

    ಅಲ್ಲದೆ ಕ್ಷೇತ್ರದ ಜನತೆಗೆ ಮಹಿಳೆಯರಿಗೆ ಹೊಲಿಗೆ ಯಂತ್ರ, ಪುರುಷರಿಗೆ ತಳ್ಳುವ ಗಾಡಿ, ವಿದ್ಯಾರ್ಥಿಗಳಿಗೆ ಬಸ್‌ಪಾಸ್, ಆಂಬುಲೆನ್ಸ್, ಬಡವರ ಮದುವೆಗೆ ಸಹಾಯ, ವಿದ್ಯಾರ್ಥಿಗಳಿಗೆ ನೋಟ್ ಬುಕ್, ಶಿಕ್ಷಕರಿಗೆ ಉಡುಗೊರೆ, ಅನಾರೋಗ್ಯದಿಂದ ಬಂದವರಿಗೆ ಧನ ಸಹಾಯ, ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆ, ಮೃತಪಟ್ಟವರ ಕುಟುಂಬಕ್ಕೆ ಹಣದ ನೆರವು, ತರಕಾರಿ ಮತ್ತು ಪುಡ್ ಕಿಟ್ ವಿತರಣೆ, ಅಂಗವಿಕಲ ಮಕ್ಕಳಿಗೆ ವಿಮಾ ಸೌಲಭ್ಯ ಹೀಗೆ ಖರ್ಚು ಮಾಡಿರುವುದು ನಿಮಗೆ ಗೊತ್ತಿಲ್ಲವೇ? ಎಂದು ವ್ಯಂಗವಾಡಿದರು.

    ಜೆಡಿಎಸ್ ಜಿಲ್ಲಾ ಮಹಿಳಾ ಅಧ್ಯಕ್ಷೆ ದಾಕ್ಷಾಯಿಣಿ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಧರ್ಮ, ಪುರಸಭಾ ಮಾಜಿ ಸದಸ್ಯರಾದ ರಂಗಸ್ವಾಮಿ, ಜಿ.ಪಿ.ಮಂಜು, ಬಂಗಾರಿ ತಮ್ಮೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

    12 ರುದ್ರೇಶ್-2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts