More

    ರಿಯಲ್​ ಲೈಫ್​ನಲ್ಲಿ ವಿಶಾಲ್​ ಹೀರೋ ಅಲ್ಲ, ವಿಲನ್​ : ರಮ್ಯಾ

    ತಮಿಳಿನ ಜನಪ್ರಿಯ ನಟ ವಿಶಾಲ್​, ಇತ್ತೀಚಿನ ಕೆಲವು ವರ್ಷಗಳಲ್ಲಿ ಸಾಕಷ್ಟು ವಿವಾದಗಳನ್ನು ಕಂಡಿದ್ದಾರೆ. ಅಷ್ಟೇ ಅಲ್ಲ, ಈ ವಿವಾದಗಳಿಂದ ಸಾಕಷ್ಟು ಹೆಸರು ಕೆಡಿಸಿಕೊಂಡಿದ್ದಾರೆ. ಈಗ ಅವರ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿದ್ದ ಒಬ್ಬ ಉದ್ಯೋಗಿಯು, ‘ರಿಯಲ್​ ಲೈಫ್​ನಲ್ಲಿ ವಿಶಾಲ್​ ಒಬ್ಬ ದೊಡ್ಡ ವಿಲನ್​’ ಎಂದು ಆರೋಪ ಮಾಡಿದ್ದಾರೆ.

    ಇದನ್ನೂ ಓದಿ: PHOTOS: ಚಾಲೆಂಜಿಂಗ್​ ಸ್ಟಾರ್ ದರ್ಶನ್​ಗೆ ನಾಯಕಿ ಆಗಿದ್ದ ಶೆರಿನ್​ ಹೇಗಿದ್ದರು, ಈಗ ಹೇಗಾಗಿದ್ದಾರೆ?

    ಕೆಲವು ವರ್ಷಗಳ ಹಿಂದೆ, ವಿಶಾಲ್​ ಅವರ ನಿರ್ಮಾಣ ಸಂಸ್ಥೆಯಾದ ವಿಶಾಲ್​ ಫಿಲ್ಮ್​ ಫ್ಯಾಕ್ಟರಿಯ ಮ್ಯಾನೇಜರ್​, ಆ ಸಂಸ್ಥೆಯ ಅಕೌಂಟೆಂಟ್​ ಮೇಲೆ ಪೊಲೀಸರಿಗೆ ದೂರು ನೀಡಿದ್ದರು. ಆ ಅಕೌಂಟೆಂಟ್​, ಸಂಸ್ಥೆಗೆ 45 ಲಕ್ಷ ರೂಪಾಯಿಗಳನ್ನು ಟೋಪಿ ಹಾಕಿದ್ದಾರೆ ಎಂದು ಆರೋಪಿಸಿದ್ದರು.

    ಈಗ ಈ ಕುರಿತು ಅಕೌಂಟೆಂಟ್​ ರಮ್ಯಾ ಮಾತನಾಡಿದ್ದಾರೆ, ತಮಗೆ ಈ ಎಲ್ಲಾ ವಿಷಯಗಳು ಮೊದಲೇ ಗೊತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿಶಾಲ್​ ನಿಜಜೀವನದಲ್ಲಿ ಒಬ್ಬ ವಿಲನ್​ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: ಬಾಹುಬಲಿ ಚಿತ್ರದ ಮೊದಲ ದಿನದ ಶೂಟಿಂಗ್ ಹೇಗಿತ್ತು ಒಮ್ಮೆ ನೋಡಿ…

    ಈ ಕುರಿತು ಮಾತನಾಡಿರುವ ಅವರು, ‘ನನಗೆ ಹೀಗಾಗುತ್ತದೆ ಎಂದು ಮೊದಲೇ ಗೊತ್ತಿತ್ತು. ಆದರೆ, ನಾನು ಮಾತಾಡುವ ಹಾಗಿರಲಿಲ್ಲ. ಎಷ್ಟೋ ಬಾರಿ, ನನ್ನ ಕಣ್ಣೆದುರೇ ಗೋಲ್ಮಾಲ್​ ಆಗುತ್ತಿತ್ತು. ಸಿನಿಮಾಗಳಲ್ಲಿ ನೋಡುವಂತೆ ವಿಶಾಲ್​ ಒಬ್ಬ ಹೀರೋ ಅಲ್ಲ. ಅವರೊಬ್ಬ ವಿಲನ್​. ಯಾರನ್ನು ಬೇಕಾದರೂ ಹೆದರಿಸಿ, ಮಾಡಿಸಿಕೊಳ್ಳಬಲ್ಲ ಒಬ್ಬ ವಿಲನ್​. ಅದರ ಬಗ್ಗೆ ನನ್ನ ಬಳಿ ಸಾಕಷ್ಟು ಸಾಕ್ಷಿಗಳಿವೆ. ಹಾಗೆಯೇ, ನಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ಸಂಸ್ಥೆಯ ಹಣ ಕಬಳಿಸಿಲ್ಲ’ ಎಂದು ರಮ್ಯಾ ಹೇಳಿಕೊಂಡಿದ್ದಾರೆ.

    ಬರೀ ರಮ್ಯಾ ಅಷ್ಟೇ ಅಲ್ಲ, ಆಕೆಯ ಸಹೋದರ ರಾಜೇಶ್ ಸಹ ಮಾತನಾಡಿದ್ದಾರೆ. ‘ವಿಷಯ ಗೊತ್ತಿದ್ದರೂ ನಾವು ಮಾತನಾಡಿರಲಿಲ್ಲ. ಕಾರಣ, ಪೊಲೀಸ್​ ಸ್ಟೇಷನ್​ ಮೆಟ್ಟಿಲು ಹತ್ತಿದರೆ, ಅದೇ ಸ್ಟೇಷನ್​ ಒಳಗೆ ನನ್ನನ್ನು ಕೊಲ್ಲುವುದಾಗಿ ಬೆದರಿಸಿದ್ದರು. ಹಾಗಾಗಿ, ಈ ವಿಷಯವಾಗಿ ನಾವು ಮಾತನಾಡಿರಲಿಲ್ಲ’ ಎಂದು ಹೇಳಿದ್ದಾರೆ.

    ಸಲ್ಮಾನ್​ ವಾರದ ಸಂಭಾವನೆ ಎಷ್ಟು ಗೊತ್ತಾ? … ಕೇಳಿದ್ರೆ ಶಾಕ್​ ಆಗೋದು ಗ್ಯಾರಂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts