More

    ರಸ್ತೆ ಅಪಘಾತಗಳು ಏರುಮುಖ: ಸಚಿವ ರಾಮಲಿಂಗಾರೆಡ್ಡಿ ಆತಂಕ

    ಬೆಂಗಳೂರು: ರಾಜ್ಯದಲ್ಲಿ ರಸ್ತೆ ಅಪಘಾತಗಳು ನಿಯಂತ್ರಣಕ್ಕೆ ಬರುವ ಬದಲು ವರ್ಷಕ್ಕಿಷ್ಟು ಏರಿಕೆಯಾಗುತ್ತಲಿವೆ ಎಂಬ ಅಂಕಿ-ಅಂಶಗಳನ್ನು ವಿಧಾನ ಪರಿಷತ್‌ನಲ್ಲಿ ಬುಧವಾರ ವಿವರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯಕ್ತಪಡಿಸಿದರು.

    2023ನೇ ಸಾಲಿನ ‘ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ ಅಂಗೀಕಾರಕ್ಕೆ ಮುನ್ನ ನಡೆದ ಚರ್ಚೆಗೆ ಉತ್ತರಿಸುವ ವೇಳೆ, ಕಳೆದ ಮೂರು ವರ್ಷಗಳ ಅಪಘಾತ ಪ್ರಕರಣಗಳ ಅಂಕಿ-ಅಂಶಗಳನ್ನು ಸದನದ ಮುಂದಿಟ್ಟರು.
    ದಾಖಲಾದ ಮಾಹಿತಿ ಪ್ರಕಾರ 2020ರಲ್ಲಿ ಅಪಘಾತಗಳು ಸಂಭವಿಸಿದ್ದು, 10,238 ಜನರು ಮೃತಪಟ್ಟಿದ್ದಾರೆ. 42 ಸಾವಿರ ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

    2021ರಲ್ಲಿ 34,647 ಅಪಘಾತಗಳು, 10 ಸಾವಿರ ಜನರ ಸಾವು ಹಾಗೂ 39,292 ಜನರಿಗೆ ತೀವ್ರ ಗಾಯಗಳಾಗಿವೆ. 2022ರಲ್ಲಿ 39 ಸಾವಿರಕ್ಕೂ ಹೆಚ್ಚು ಅಪಘಾತಗಳಾಗಿದ್ದು, 11,700 ಜನರು ಮೃತಪಟ್ಟಿದ್ದರೆ, 48 ಸಾವಿರ ಜನರು ಗಾಯಗೊಂಡಿದ್ದಾರೆ.
    ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಸಂಚಾರಕ್ಕೆ ಮುಕ್ತವಾದ ನಂತರ ಈವರೆಗೆ 150 ಜನರು ಬಲಿಯಾಗಿದ್ದಾರೆ ಎಂಬ ಕಳವಳ ತೋಡಿಕೊಂಡರು.

    ರಸ್ತೆ ಅಪಘಾತಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ, ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಸುವವರ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂಬ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts