More

    ರಸ್ತೆ ಕಾಮಗಾರಿ ತ್ವರಿತಗೊಳಿಸಿ

    ಹುಬ್ಬಳ್ಳಿ: ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಹಾಗೂ ತ್ವರಿತವಾಗಿ ರಸ್ತೆ ಕಾಮಗಾರಿ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
    ಇಲ್ಲಿನ ಸಿದ್ದೇಶ್ವರ ನಗರದಲ್ಲಿ ಪಾಲಿಕೆ ಸಾಮಾನ್ಯ ಅನುದಾನದಡಿ 40 ಲಕ್ಷ ರೂ. ವೆಚ್ಚದಲ್ಲಿ ನಿಮಾಣವಾಗಲಿರುವ ದಾನಮ್ಮ ಗುಡಿ ರಸ್ತೆಯ ಕಾಂಕ್ರೀಟ್ ಹಾಗೂ ಒಳಚರಂಡಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.
    ನಗರದ ವಿವಿಧೆಡೆ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ರೈಲ್ವೆ ಆಸ್ಪತ್ರೆ ಬಳಿ ನಿರ್ವಿುಸುತ್ತಿರುವ ಸಿಮೆಂಟ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಸೂಚಿಸಲಾಗಿದೆ. ಸ್ಮಾರ್ಟ್​ಸಿಟಿ ಯೋಜನೆಯಡಿ ಕೈಗೊಂಡಿರುವ ಸ್ಟೇಷನ್ ರಸ್ತೆ ಕಾಮಗಾರಿ 10 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
    ವಿಜಯಪುರ ಹಾಗೂ ಗದಗ ರಸ್ತೆಯ ನಡುವಿನ ವರ್ತಲ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಗದಗ ರಸ್ತೆಯಿಂದ ಬಿಡನಾಳದ ಸೇತುವೆವರೆಗೆ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಸಂಚಾರ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.
    ಕೈಗಾರಿಕೆಗಳಿಗೆ ಆಕ್ಸಿಜನ್ : ರಾಜ್ಯಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಕೋಟಾ ನಿಗದಿಯಾಗಿದೆ. ಇದರಲ್ಲಿ 500 ಮೆಟ್ರಿಕ್ ಟನ್ ಆಕ್ಸಿಜನ್ ಕೋವಿಡ್ ನಿರ್ವಹಣೆಗೆ ಇಟ್ಟುಕೊಂಡು, 400 ಮೆಟ್ರಿಕ್ ಟನ್ ಆಕ್ಸಿಜನ್ ಕೈಗಾರಿಕೆಗಳಿಗೆ ನೀಡಲು ಆದೇಶಿಸಲಾಗಿದೆ. ಇದುವರೆಗೆ ಯಾವುದೇ ಕೈಗಾರಿಕೆ ಆಕ್ಸಿಜನ್ ಕೊರತೆ ಕುರಿತು ದೂರು ನೀಡಿಲ್ಲ. ಎಲ್ಲ ಕೈಗಾರಿಕೆಗಳಿಗೆ ಆಕ್ಸಿಜನ್ ಸರಬರಾಜು ಆಗುತ್ತಿದೆ ಎಂದರು.
    ಇನ್ವೆಸ್ಟ್ ಕರ್ನಾಟಕ ಸಮೆ್ಮೕಳನದ ನಿರ್ಣಯದಂತೆ ಯಪ್ಲೇಕ್ಸ್ ಕಂಪನಿಗೆ ಮಮ್ಮಿಗಟ್ಟಿ ಬಳಿ 50 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಕಂಪನಿಯು ತನ್ನ ಕಾರ್ಯುಚರಣೆಯನ್ನು ಶೀಘ್ರ ಆರಂಭಿಸಲಿದೆ ಎಂದು ತಿಳಿಸಿದರು. ಮಲ್ಲಿಕಾರ್ಜುನ ಸಾವುಕಾರ, ಸಂತೋಷ ಚವ್ಹಾಣ, ತಿಪ್ಪಣ್ಣ ಮಜ್ಜಗಿ, ಅಶ್ವಿನಿ ಮಜ್ಜಗಿ, ರಾಜಣ್ಣ ಕೊರವಿ, ಬಸಣ್ಣ ಹೆಬ್ಬಳ್ಳಿ, ನಂದೀಶ ವದ್ದಟ್ಟಿ ಇತರರಿದ್ದರು.
    ವಿನಾಯಿತಿಗೆ ನಡೆದಿದೆ ಚರ್ಚೆ
    ಏಕಸ್ ಸಂಸ್ಥೆಗೆ 358 ಎಕರೆ ಜಮೀನು ನೀಡಲಾಗಿದೆ. ರಾಜೇಶ್ ಎಕ್ಸ್​ಪೋರ್ಟ್​ಗೆ 150 ಎಕರೆ ಜಮೀನನ್ನು ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಮಂಜೂರು ಮಾಡಲಾಗಿದೆ. ಈ ಕಂಪನಿಗಳಿಂದ 25 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಆಗಲಿದೆ. ಇದಕ್ಕೆ ಪೂರಕವಾಗಿ ಹಲವು ಕೈಗಾರಿಕೆಗಳು ಪ್ರಾರಂಭಗೊಳ್ಳಲಿವೆ. ಎಫ್​ಎಂಸಿಜಿ ನೀಡಬೇಕಾದ ವಿನಾಯಿತಿಗಳ ಕುರಿತು ಹಣಕಾಸು ಇಲಾಖೆಯೊಂದಿಗೆ ರ್ಚಚಿಸಲಾಗುತ್ತಿದೆ. ಇನೊ್ಪೕಸಿಸ್ 230 ಕೋಟಿ ರೂ. ವೆಚ್ಚದಲ್ಲಿ ಕ್ಯಾಂಪಸ್ ಅಭಿವೃದ್ಧಿ ಪಡಿಸಿದ್ದು, ಕಾರ್ಯುಚರಣೆ ಆರಂಭಿಸಿದರೆ ಹುಬ್ಬಳ್ಳಿಯಲ್ಲಿ ಐಟಿ ಕಂಪನಿಗಳ ಹೂಡಿಕೆ ಹೆಚ್ಚಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts