More

    ‘ದೇಶದಲ್ಲಿ ಲಾರ್ಡ್ ಮೆಕಾಲೆ ಶಿಕ್ಷಣ ನೀತಿ ರದ್ದಾಗಲಿ’ ಎಬಿವಿಪಿ ರಾಜ್ಯ ಸಮ್ಮೇಳನದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮತ

    ಬೆಂಗಳೂರು: ದೇಶದಲ್ಲಿ ಲಾರ್ಡ್ ಮೆಕಾಲೆ ಶಿಕ್ಷಣ ನೀತಿ ರದ್ದಾಗಿ ಕೌಶಲಯುತ ಶಿಕ್ಷಣ ಜಾರಿಯಾಗಬೇಕು ಎಂದು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ.

    ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್( ಎಬಿವಿಪಿ) ಅರಮನೆಯ ರಸ್ತೆಯ ಕೊಂಡಜ್ಜಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿರುವ 2 ದಿನಗಳ ಪ್ರಾಂತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಲಾರ್ಡ್ ಮೆಖಾಲೆ ಶಿಕ್ಷಣ ನೀತಿ ರದ್ದುಗೊಂಡು ಯುವ ಸಮದಾಯಕ್ಕೆ ಅಗತ್ಯವಿರುವ ಕೌಶಲಯುತ ಶಿಕ್ಷಣ ಜಾರಿಬೇಕು. ಯುವ ಸಮುದಾಯ ನೀತ ನೀರಾಗಬಾರದು. ಅದು ಮುಂದೆ ಸಾಗುತ್ತಿರಬೇಕು ಎಂದರು.

    ಎಬಿವಿಪಿ ಕಾರಣ: ವಿಧಾನಸಭೆ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿರುವುದಕ್ಕೆ ಎಬಿವಿಪಿ ಕಾರಣ. ಸಂಘಟನೆಯ ತತ್ವ ಸಿದ್ಧಂತಗಳು ಶ್ರೇಷ್ಠವಾದವು. ಇಂದು ಅದೇ ವಿಚಾರಧಾರೆಯಲ್ಲಿ ಬೆಳೆದು ಬಂದಿದ್ದೇನೆ. ವಿದ್ಯಾರ್ಥಿ ಪರಿಷತ್ ನಿರಂತರವಾದ ಆಂದೋಲನವಾಗಿದೆ. ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸೋಣ. ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕಂತೆ ಶಿಕ್ಷಣ ಸಿಗಬೇಕು. ಆಗ ಮಾತ್ರ ನಿರುದ್ಯೋಗ ನಿರ್ಮೂಲನೆ ಆಗುತ್ತದೆ. ಯುವಕರಲ್ಲಿ ಗ್ರಾಮೀಣಾಭಿವೃದ್ಧಿ ಬಗ್ಗೆ ಅರಿವು ಮೂಡಿಸಬೇಕಿದೆ. ಆತ್ಮನಿರ್ಭರತೆ, ವೋಕಲ್ ಫಾರ್ ಲೋಕಲ್, ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕು ಎಂದು ಕಾಗೇರಿ ಸಲಹೆ ನೀಡಿದರು.

    2020ರಲ್ಲಿ ಮಹಾಮಾರಿ ಕರೊನಾ ದೇಶಕ್ಕೆ ಮಾರಕವಾಗಿತ್ತು. ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಸಲವಾಗಿದೆ. 2021ರ ಪ್ರಾಂತ ಸಮ್ಮೇಳನ ಹೊಸತನದಿಂದ ಕೂಡಿದೆ. ಪರಿಷತ್ ಸದಸ್ಯರ ಕನಸಿನಂತೆ ಭಾರತ ವಿಶ್ವಗುರುವಾತ್ತ ಮುನ್ನಡೆದಿದೆ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ ತಿಳಿಸಿದರು.

    ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಕೆ.ವೈ.ವೆಂಕಟೇಶ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಎಬಿವಿಪಿ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಈ ಸಂಘಟನೆಯ ಕೆಲಸ ಹೀಗೆ ಮುಂದುವರಿಯಲಿ ಎಂದು ಆಶಿಸಿದರು. ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿ ಜಿ.ಲಕ್ಷ್ಮಣ್, ಗಾಂಧಿ ಕೃಷಿ ವಿಜ್ಞಾನ ವಿವಿ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts