ಉಡುಪಿಯ ಯುವತಿ ಈಗ ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ! ದಾಖಲೆ ಬರೆದ ಕನ್ನಡತಿ

ಉಡುಪಿ: ಕರ್ನಾಟಕದ ಉಡುಪಿ ಮೂಲದ ರಶ್ಮಿ ಸಾಮಂತ್​ ಇದೀಗ ವಿಶ್ವದ ಮಟ್ಟದಲ್ಲಿ ಭಾರತದ ಹೆಸರನ್ನು ಎತ್ತಿ ಹಿಡಿದಿದ್ದಾರೆ. ಪ್ರತಿಷ್ಠಿತ ವಿದ್ಯಾಲಯವಾಗಿರುವ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಅಧ್ಯಕ್ಷೆ ಸ್ಥಾನಕ್ಕೇರಿದ್ದಾರೆ. ರಶ್ಮಿ ಮಣಿಪಾಲದ ವತ್ಸಲಾ ಸಾಮಂತ್ ಹಾಗೂ ದಿನೇಶ್ ಸಾಮಂತ್ ಅವರ ಮಗಳು. ಉಡುಪಿಯಲ್ಲಿ ಆರಂಭಿಕ ಶಿಕ್ಷಣ ಪಡೆದು, ಮಣಿಪಾಲ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯಲ್ಲಿ 2016ರಿಂದ 2020ರವರೆಗೆ ಮೆಕಾನಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು. ಅಲ್ಲಿ ವ್ಯಾಸಂಗ ಪೂರ್ತಿಯಾದ ನಂತರ ಇಂಗ್ಲೆಂಡ್​ಗೆ ಹಾರಿದ ಆಕೆ … Continue reading ಉಡುಪಿಯ ಯುವತಿ ಈಗ ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ! ದಾಖಲೆ ಬರೆದ ಕನ್ನಡತಿ