More

    ‘ಮನೆ ಎದುರು ಮೂತ್ರವಿಸರ್ಜನೆ ಮಾಡಿದ್ದಾರೆ’- ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷರ ವಿರುದ್ಧ ದೂರು ನೀಡಿದ ಹಿರಿಯ ಮಹಿಳೆ

    ಚೆನ್ನೈ: ಎಬಿವಿಪಿಯ ರಾಷ್ಟ್ರೀಯ ಅಧ್ಯಕ್ಷ ಡಾ. ಸುಬ್ಬಯ್ಯ ಷಣ್ಮುಗಂ ವಿರುದ್ಧ 62 ವರ್ಷದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಸುಬ್ಬಯ್ಯ ಅವರು ಪಾರ್ಕಿಂಗ್​ ಸ್ಥಳದ ವಿಚಾರವಾಗಿ ನನ್ನೊಂದಿಗೆ ಜಗಳ ಮಾಡಿದ್ದಲ್ಲದೆ, ನಂತರ ನಮ್ಮ ಮನೆಯ ಬಾಗಿಲಿನ ಬಳಿ ಮೂತ್ರವಿಸರ್ಜನೆ ಮಾಡಿದ್ದಾರೆ. ಅವರು ಬಳಸಿದ ಮಾಸ್ಕ್​ನ್ನು ನಮ್ಮನೆಯ ಎದುರು ಎಸೆದಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ತಮ್ಮ ಮನೆಯ ಎದುರು ಇರುವ ಸಿಸಿಟಿವಿಯ ಫೂಟೇಜ್​ನ್ನೂ ಕೂಡ ಮಹಿಳೆ ಪೊಲಿಸರಿಗೆ ನೀಡಿದ್ದಾರೆ. ಅಡಂಬಕ್ಕಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಬ್ಬಯ್ಯ ಅವರಿಂದ 62 ವರ್ಷದ ಮಹಿಳೆ ಅನುಭವಿಸುತ್ತಿರುವ ಅವಸ್ಥೆಯ ಬಗ್ಗೆ ಅವರ ಸಂಬಂಧಿ, ಕಾಮಿಡಿಯನ್ ಬಾಲಾಜಿ ವಿಜಯರಾಘವನ್​ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೋವಿಡ್ -19 ಶೀಘ್ರ ಪತ್ತೆ ಹಚ್ಚಲು ಬರಲಿದೆ ಮದ್ರಾಸ್ ಐಐಟಿಯ ರಿಸ್ಟ್ ಟ್ರ್ಯಾಕರ್

    ನನ್ನ ವಾಹನವನ್ನು ನಿಮ್ಮ ಮನೆಯ ಪಾರ್ಕಿಂಗ್​ ಸ್ಥಳದಲ್ಲಿ ನಿಲ್ಲಿಸಲು ಅವಕಾಶ ಕೊಡಿ ಎಂದು ಷಣ್ಮುಗಂ ಅವರು ಮಹಿಳೆಯ ಬಳಿ ಅನುಮತಿ ಕೇಳಿದರು. ಆಗ ನನ್ನ ಆಂಟಿ, ಖಂಡಿತ ಕೊಡುತ್ತೇನೆ. ಆದರೆ ಅದಕ್ಕಾಗಿ 1500 ರೂ.ಬಾಡಿಗೆ ನೀಡಿ ಎಂದು ಕೇಳಿದರು. ಅಷ್ಟಕ್ಕೇ ಸಿಟ್ಟಿಗೆದ್ದ ಸುಬ್ಬಯ್ಯ ಅವರು ತಾನು ಧರಿಸಿದ್ದ ಮಾಸ್ಕ್​ನ್ನು ಆಂಟಿ ಮನೆಯ ಕಡೆಗೆ ಎಸೆದರು ಎಂದು ಬರೆದುಕೊಂಡಿದ್ದಾರೆ.
    ಷಣ್ಮುಗಂ ಅವರು ಕೇವಲ ಎಬಿವಿಪಿಯ ರಾಷ್ಟ್ರೀಯ ಅಧ್ಯಕ್ಷರಷ್ಟೇ ಅಲ್ಲ. ಕಿಲ್ಪೌಕ್​ ಮೆಡಿಕಲ್​ ಕಾಲೇಜು ಮತ್ತು ರಾಯ್​ಪೇಟ್​ ಸರ್ಕಾರಿ ಕಾಲೇಜಿನ ಸರ್ಜಿಕಲ್​ ಅಂಕೊಲಜಿ ಡಿಪಾರ್ಟ್​​ಮೆಂಟ್​ನ ಹೆಡ್​ ಹಾಗೂ ಪ್ರಾಧ್ಯಾಪಕ.  ಇದನ್ನೂ ಓದಿ: ಬಾಯ್​ಫ್ರೆಂಡ್​ ಇದ್ದರೂ ಒಮ್ಮೆಯೂ ಸೆಕ್ಸ್ ಮಾಡಿರಲಿಲ್ಲ…ಆದ್ರೂ ಗರ್ಭಿಣಿಯಾದೆ: ಯುಎಸ್​ ಮಹಿಳೆಯ ವಿಭಿನ್ನ ಕತೆ

    ಆದರೆ ಎಬಿವಿಪಿ ಈ ಆರೋಪವನ್ನು ಅಲ್ಲಗಳೆದಿದೆ. ಸಿಸಿಟಿವಿ ಫೂಟೇಜ್​ನ ಫೋಟೋಗಳು ಸತ್ಯವಲ್ಲ. ಅದನ್ನು ಫೋಟೋಶಾಪ್​ ಮಾಡಲಾಗಿದೆ. ಸುಬ್ಬಯ್ಯ ಅವರಿಗೆ ಅಪಕೀರ್ತಿ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದೆ. ಅಷ್ಟೇ ಅಲ್ಲ ಇದು ಎನ್​ಎಸ್​ಯುಐನ ಕೆಲಸ. NSUI ಸುಬ್ಬಯ್ಯ ವಿರುದ್ಧ ವಿಡಿಯೋ, ಫೋಟೋಗಳನ್ನು ಸೃಷ್ಟಿಸಿದೆ ಎಂದು ಎಬಿವಿಪಿ ನ್ಯಾಷನಲ್​ ಜನರಲ್​ ಸೆಕ್ರೆಟರಿ ನಿಧಿ ತ್ರಿಪಾಠಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ಕರೊನಾ ಪರೀಕ್ಷೆ ಬಳಿಕ ತನ್ನ ನಂಬರ್ ಬದಲು ಡಿಸಿ ನಂಬರ್ ಕೊಟ್ಟ ಭೂಪ: ಮುಂದೇನಾಯ್ತು ನೀವೇ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts