More

    ಕೃಷಿ ಕ್ಷೇತ್ರದಲ್ಲಿ ಸಾಧನೆಗೆ ವಿಫುಲ ಅವಕಾಶ, ಇಫ್ಕೋ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಪುರಸ್ಕಾರ

    ಹಿರೇಕೆರೂರ: ವಿದ್ಯಾರ್ಥಿಗಳು ಮನಸು ಮಾಡಿದರೆ ಕೃಷಿ ರಂಗದಲ್ಲಿ ಅಸಾಧ್ಯವಾದುದನ್ನು ಸಾಧಿಸಬಹುದು. ಇಂದಿನ ವಿದ್ಯಾರ್ಥಿಗಳು ಹೆಚ್ಚಿನದಾಗಿ ಪಾಶ್ಚಾತ್ಯ ಶಿಕ್ಷಣದತ್ತ ಮುಖ ಮಾಡಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದು ಇಫ್ಕೋ ಸಂಸ್ಥೆಯ ರಾಜ್ಯ ಮಾರಾಟ ವ್ಯವಸ್ಥಾಪಕ ಡಾ.ನಾರಾಯಣಸ್ವಾಮಿ ಸಿ. ಹೇಳಿದರು.

    ಪಟ್ಟಣದ ಸಿಇಎಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಂಸ್ಥೆಯ ವಿವಿಧ ಶಾಲಾ- ಕಾಲೇಜ್​ಗಳಲ್ಲಿ ಪ್ರಾಥಮಿಕ ಶಾಲೆ, ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಬಿ.ಇಡಿ ತರಗತಿಗಳಲ್ಲಿ ಅತ್ಯುನ್ನತ ಸ್ಥಾನ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಕೃಷಿಕರ ಮಕ್ಕಳನ್ನು ನಮ್ಮ ಸಂಸ್ಥೆಯ ವತಿಯಿಂದ ಸನ್ಮಾನಿಸಲು ಅತ್ಯಂತ ಸಂತೋಷವೆನಿಸುತ್ತದೆ. ದೇಶದ ರೈತರ ಜೀವನಾಡಿಯಾದ ಹಾಗೂ ಕೃಷಿಕರ ಮಾತೃಸಂಸ್ಥೆಯಾದ ಇಫ್ಕೋ ಸಂಸ್ಥೆಯು ಗ್ರಾಮೀಣ ಭಾಗದ ಪ್ರತಿಭೆಗಳನ್ನು ಪುರಸ್ಕರಿಸಿ ಗೌರವಿಸಿದೆ. ಕೃಷಿ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ. ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಂಡು ಆದರ್ಶ ಪ್ರಗತಿಪರ ರೈತರಾಗಿ ದೇಶದ ಆರ್ಥಿಕ ಸುಧಾರಣೆಗೆ ತಮ್ಮದೆ ಆದ ಕೊಡುಗೆ ಕೊಡಲು ಸಾಧ್ಯವಿದೆ ಎಂದರು.

    ಸಹಕಾರಿ ರತ್ನ ಎಸ್.ಎಸ್. ಪಾಟೀಲ ಮಾತನಾಡಿ, ನಮ್ಮ ಸಂಸ್ಥೆ ಗ್ರಾಮೀಣ ಪ್ರದೇಶದಲ್ಲಿ ಎಲ್​ಕೆಜಿಯಿಂದ ಪಿಜಿವರೆಗೆ ಶಿಕ್ಷಣ ಪ್ರಾರಂಭಿಸಿದೆ. ಸಂಸ್ಥೆಯಲ್ಲಿ ಕೃಷಿಕರ ಮಕ್ಕಳು ಶಿಕ್ಷಣ ಪಡೆಯುತ್ತಿರುವುದು, ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅಧ್ಯಯನ ಮಾಡುತ್ತಿರುವುದು ವಿಶೇಷವಾಗಿದೆ ಎಂದರು.

    ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ವಿ. ಹೊಂಬರಡಿ, ಆಡಳಿತಾಧಿಕಾರಿ ಎಸ್.ವೀರಭದ್ರಯ್ಯ ಮಾತನಾಡಿದರು.

    ದ್ವಿತೀಯ ಪಿಯುನ 95ಕ್ಕಿಂತ ಹೆಚ್ಚು ಅಂಕ ಪಡೆದ 6 ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ., 85ಕ್ಕಿಂತ ಹೆಚ್ಚು ಅಂಕ ಪಡೆದ 44 ವಿದ್ಯಾರ್ಥಿಗಳಿಗೆ ತಲಾ 4 ಸಾವಿರ ರೂ., ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುನ್ನತ ಸ್ಥಾನ ಪಡೆದ 2 ವಿದ್ಯಾರ್ಥಿಗಳಿಗೆ 5 ಸಾವಿರ ರೂ., 38 ವಿದ್ಯಾರ್ಥಿಗಳಿಗೆ 1 ಸಾವಿರ ರೂ., ಪ್ರಾಥಮಿಕ ಶಾಲೆಯ 5 ವಿದ್ಯಾರ್ಥಿಗಳಿಗೆ 1 ಸಾವಿರ ರೂ., 20 ವಿದ್ಯಾರ್ಥಿಗಳಿಗೆ 500 ರೂ., ಶಿಕ್ಷಣ ಮಹಾವಿದ್ಯಾಲದ ಅತ್ಯುನ್ನತ ಸ್ಥಾನ ಪಡೆದ 3 ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರೂ. ಸೇರಿ 95 ವಿದ್ಯಾರ್ಥಿಗಳಿಗೆ ಹಾಗೂ ಪ್ರತಿ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಬ್ಲಾಕೆಟ್ ನೀಡಲಾಯಿತು.

    ಏಕೇಶಣ್ಣ ಬಣಕಾರ, ಜೆ.ವಿ. ಅಂಗಡಿ, ದುರ್ಗಪ್ಪ ನೀರಲಗಿ, ಆನಂದಪ್ಪ ಹಾದಿಮನಿ, ಯು.ಎಸ್. ಕಳಗೊಂಡರ, ರಮೇಶಣ್ಣ ಮಡಿವಾಳರ, ಮಂಜುಳಾ ಬಾಳಿಕಾಯಿ, ಅಧೀನ ಶಾಲಾ ಕಾಲೇಜಿನ ಮುಖ್ಯಸ್ಥರು ಬೋಧಕರು ಹಾಗೂ ಸಹಸ್ರಾರು ವಿದ್ಯಾರ್ಥಿಗಳು ಇದ್ದರು. ಕೆ.ಆರ್. ಲಮಾಣಿ, ಆರ್.ಎಂ. ಕರೇಗೌಡ್ರ, ತನುಜಾ ಉಪ್ಪಾರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts