More

    ತುರ್ತಪರಿಸ್ಥಿತಿ ಹೇರಿದ್ದು, ಆ ಸಂದರ್ಭದಲ್ಲಿ ನಡೆದಿದ್ದೆಲ್ಲ ತಪ್ಪೆಂದ ರಾಹುಲ್ ಗಾಂಧಿ

    ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ 1975-77ರ ಅವಧಿಯಲ್ಲಿ 21 ತಿಂಗಳು ತುರ್ತು ಪರಿಸ್ಥಿತಿ ಹೇರಿದ್ದು ತಪ್ಪು. ಆ ಅವಧಿಯಲ್ಲಿ ಅದೇನೆಲ್ಲ ನಡೆಯಿತೋ ಅವೆಲ್ಲವೂ ಖಚಿತವಾಗಿಯೂ ತಪ್ಪೇ ಹೌದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಒಪ್ಪಿಕೊಂಡಿದ್ದಾರೆ.

    ಪ್ರಸಿದ್ಧ ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ಜತೆಗೆ ವರ್ಚುವಲ್ ಆಗಿ ಮಾತುಕತೆ ನಡೆಸುತ್ತಿರುವಾಗ ರಾಹುಲ್, ‘ಅದೊಂದು ತಪು್ಪ ಎಂದು ನನಗನ್ನಿಸುತ್ತಿದೆ. ಖಚಿತವಾಗಿಯೂ ಅದು ತಪ್ಪು. ನನ್ನ ಅಜ್ಜಿ (ಇಂದಿರಾ ಗಾಂಧಿ) ಅದನ್ನು ಹೇಳಿದ್ದರು ಕೂಡ. (ಆದರೆ) ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತನ್ನ ಅಧೀನ ಇಟ್ಟುಕೊಳ್ಳಬೇಕೆಂದು ಕಾಂಗ್ರೆಸ್ ಯಾವುದೇ ಸಂದರ್ಭದಲ್ಲೂ ಪ್ರಯತ್ನಿಸಿಲ್ಲ. ಅಷ್ಟು ಸಾಮರ್ಥ್ಯವೂ ಅದಕ್ಕೆ ಇಲ್ಲ ಎಂದು ಹೇಳಿಕೊಂಡಿದ್ದಾರೆ.

    ತುರ್ತಪರಿಸ್ಥಿತಿ ವಿಚಾರವಾಗಿ ಸೆರೆವಾಸ ಅನುಭವಿಸಿದ್ದ ಬಿಜೆಪಿ ನಾಯಕರು ಸಂದರ್ಭ ಸಿಕ್ಕಾಗಲೆಲ್ಲ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ಈ ವಿಚಾರವಾಗಿ ಟೀಕಿಸುತ್ತಿರುತ್ತಾರೆ. ಹೀಗಾಗಿ ರಾಹುಲ್ ಗಾಂಧಿ ಅವರ ಈ ಹೇಳಿಕೆ ಈಗ ಮಹತ್ವ ಪಡೆದುಕೊಂಡಿದೆ. (ಏಜೆನ್ಸೀಸ್​)

    ಬಿಜೆಪಿ ಸಂಸದನ ಮಗನ ಮೇಲೆ ಗುಂಡಿನ ದಾಳಿ: ಪೊಲೀಸರ ಅನುಮಾನವೇ ಬೇರೆ!

    ದೇಶದಲ್ಲಿ ಅತಿಯಾದ ಲಿಂಗ ತಾರತಮ್ಯ; ಏಷ್ಯಾ-ಪೆಸಿಫಿಕ್ ವಲಯದಲ್ಲಿ ಭಾರತದಲ್ಲೇ ಹೆಚ್ಚು ಪಕ್ಷಪಾತ

    ದೆಹಲಿಗೆ ಹೋಗ್ತೇನೆಂದು ಹೊರಟ ಸಚಿವ ರಮೇಶ್​ ಜಾರಕಿಹೊಳಿ ರಾತ್ರೋರಾತ್ರಿ ಹೋಗಿದ್ದು ಎಲ್ಲಿಗೆ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts