ಯಾವುದಕ್ಕೂ ಕೊರತೆ ಇಲ್ಲ; ಕಲ್ಲಿದ್ದಲು ಕುರಿತ ವರದಿ ಆಧಾರರಹಿತ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​

nirmala seetaraman
nirmala seetaraman
Published on

ದೆಹಲಿ: ದೇಶಾದ್ಯಂತ ಕಲ್ಲಿದ್ದಲು ಕೊರತೆ ಉಂಟಾಗಿದ್ದು, ಅಂಧಾಕಾರದ ಆತಂಕ ಮೂಡಿದೆ ಎಂಬ ನಿಟ್ಟಿನಲ್ಲಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿರುವ ಸುದ್ದಿಗಳಿಗೆ ಸಂಬಂಧಿಸಿದಂತೆ ಇದೀಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಪ್ರತಿಕ್ರಿಯಿಸಿದ್ದು, ಆ ಕುರಿತ ಎಲ್ಲ ವಿಷಯವನ್ನು ನಿರಾಕರಿಸಿದ್ದಾರೆ.

ಕಲ್ಲಿದ್ದಲು ಕೊರತೆ ಇದೆ ಎಂಬ ವರದಿಯೇ ಆಧಾರರಹಿತ ಎಂದು ಹೇಳಿರುವ ನಿರ್ಮಲಾ ಸೀತಾರಾಮನ್​, ಯಾವುದಕ್ಕೂ ಕೊರತೆ ಇಲ್ಲ ಎಂಬುದನ್ನು ಖಡಾಖಂಡಿತವಾಗಿ ಹೇಳಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವೆ ಈ ಸ್ಪಷ್ಟನೆಯನ್ನು ನೀಡಿದರು.

ಇಂಧನ ಉತ್ಪಾದಿಸುವ ಪ್ರತಿ ಸ್ಥಾವರದಲ್ಲೂ ಮುಂದಿನ ನಾಲ್ಕು ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ. ಮಾತ್ರವಲ್ಲ, ಅವುಗಳಿಗೆ ಕಲ್ಲಿದ್ದಲು ಪೂರೈಕೆ ಕೂಡ ಅಬಾಧಿತವಾಗಿ ಇದೆ ಎಂಬ ಇಂಧನ ಸಚಿವರ ಹೇಳಿಕೆಯನ್ನು ವಿತ್ತ ಸಚಿವೆ ಪುನರುಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net