More

    ಈ ಫೋಟೋ ಮೂಲಕ ಅಭಿಷೇಕ್ ಏನು ಹೇಳೋಕೆ ಹೊರಟಿದ್ದಾರೆ?

    ಅಭಿಷೇಕ್ ಬಚ್ಚನ್ ಇಂದು ಒಂದು ಫೋಟೋ ಶೇರ್ ಮಾಡಿದ್ದಾರೆ. ಆ ಫೋಟೋದಲ್ಲಿ ಒಂದು ಮುಖವಾಡ ಚೂರಾಗಿ ಬಿದ್ದಿದೆ. ಅದರ ಮಧ್ಯೆ ಪುಟ್ಟ ಹುಡುಗಿಯೊಬ್ಬಳು ಮಲಗಿದ್ದಾಳೆ. ಇಷ್ಟಕ್ಕೂ ಈ ಫೋಟೋ ಹಾಕಿ, ಅಭಿಷೇಕ್ ಏನು ಹೇಳೋಕೆ ಹೊರಟಿದ್ದಾರೆ ಎಂದು ಎಲ್ಲರೂ ತಲೆ ಕೆರೆದುಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಪತ್ನಿ ಗರ್ಭಿಣಿ ಎಂದು ತಿಳಿದಾಗ ಚಿರು ಕೊಟ್ಟ ಉಡುಗೊರೆ ನೋಡಿ ಭಾವುಕರಾಗಿದ್ರು ಮೇಘನಾ

    ಅಭಿಷೇಕ್ ಒಂದು ವೆಬ್ ಸೀರೀಸ್‌ನಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಓದಿದ್ದು ನೆನಪಿರಬೇಕು. ‘ಬ್ರೀಥ್​ – ಇನ್‌ಟು ದಿ ಶ್ಯಾಡೋಸ್’ ಎಂಬ ಹೆಸರಿನ ಆ ವೆಬ್ ಸೀರೀಸ್, ಜುಲೈ 10ರಿಂದ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುವುದಕ್ಕೆ ಸಜ್ಜಾಗುತ್ತಿದೆ. ಅಭಿಷೇಕ್ ಶೇರ್ ಮಾಡಿರುವ ೆಟೋ ಇದೆಯಲ್ಲಾ? ಅದು ಅದೇ ವೆಬ್ ಸೀರೀಸ್‌ನದ್ದೇ. ಈ ‘ಬ್ರೀಥ್​ – ಇನ್‌ಟು ದಿ ಶ್ಯಾಡೋಸ್’ ಪ್ರಾರಂಭವಾಗುತ್ತಿರುವುದನ್ನು ಅಧಿಕೃತವಾಗಿ ತಿಳಿಸುವುದಕ್ಕೆ ಅಭಿಷೇಕ್ ಇಂದು ಸೋಷಿಯಲ್ ಮೀಡಿಯಾ ಮೂಲಕ ಈ ವೆಬ್ ಸೀರೀಸ್‌ನ ಪೋಸ್ಟರ್ ಹಂಚಿಕೊಂಡಿದ್ದಾರೆ.

    ಅಂದಹಾಗೆ ‘ಬ್ರೀಥ್​ – ಇನ್‌ಟು ದಿ ಶ್ಯಾಡೋಸ್’ ಮೂಲಕ ಅಭಿಷೇಕ್ ಬಚ್ಚನ್ ಮಾತ್ರವಲ್ಲ, ನಿತ್ಯಾ ಮೆನನ್ ಸಹ ಓವರ್ ದಿ ಟಾಪ್ (ಓಟಿಟಿ)ಗೆ ಕಾಲಿಡುತ್ತಿದ್ದಾರೆ. ಇದು ‘ಬ್ರಿಥ್’ ಸೀರೀಸ್‌ನ ಎರಡನೆಯ ಸೀಸನ್ ಆಗಿದ್ದು, ಮೊದಲ ಸೀಸನ್ ಎರಡು ವರ್ಷಗಳ ಹಿಂದೆ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿ ಸಾಕಷ್ಟು ಹಿಟ್ ಆಗಿತ್ತು. ಆರ್. ಮಾಧವನ್ ನಟನೆಯ ಈ ವೆಬ್ ಸೀರೀಸ್ ಜನಪ್ರಿಯವಾದ ನಂತರವಷ್ಟೇ, ಎರಡನೆಯ ಸೀಸನ್ ಪ್ರಾರಂಭಿಸುವುದಕ್ಕೆ ಅಮೇಜಾನ್‌ನವರು ಯೋಚಿಸಿದ್ದು ಮತ್ತು ಈ ಬಾರಿ ಅಭಿಷೇಕ್ ಬಚ್ಚನ್ ಅವರನ್ನು ಕರೆತಂದಿದ್ದಾರೆ.

    ಇದನ್ನೂ ಓದಿ: ಚಿರು ಯಾವತ್ತೂ ಚಿರಂಜೀವಿನೇ!; ಹರಿಪ್ರಿಯಾ ಬರೆದರು ಸುದೀರ್ಘ ಪತ್ರ …

    ‘ಬ್ರೀಥ್​ – ಇನ್‌ಟು ದಿ ಶ್ಯಾಡೋಸ್’ ಒಂದು ಹುಡುಗಿಯ ಕಿಡ್ನಾಪ್ ಕುರಿತಾದ ಕಥೆಯಂತೆ. ಮಾಯಂಕ್ ಶರ್ಮಾ ಈ ಸೀರೀಸ್ ನಿರ್ದೇಶಿಸಿದ್ದು, ಅಭಿಷೇಕ್ ಮತ್ತು ನಿತ್ಯಾ ಮೆನನ್ ಜತೆಗೆ ಅಮಿತ್ ಸಾಧ್, ಸಯಾಮಿ ಖೇರ್ ಮುಂತಾದವರು ನಟಿಸಿದ್ದಾರೆ.

    ಭಿಕ್ಷುಕ ನಾಳೆ ರಾಜನಾಗಬಹುದು … ಹಾಗಂತ ‘ದುನಿಯಾ’ ವಿಜಯ್ ಹೇಳಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts