More

    ಚಿತ್ರದುರ್ಗದ ಬಳಿಕ, ಶಿವಮೊಗ್ಗ ಜಿಲ್ಲೆಯ ನಾಲ್ಕು ಶಾಲೆ ದತ್ತು ಪಡೆದ ಕಿಚ್ಚ ಸುದೀಪ್​!

    ಬೆಂಗಳೂರು: ಮಹಾಮಾರಿ ಕರೊನಾ ಸಂಕಷ್ಟ ಕಾಲದಲ್ಲಿ ಮಾನವೀಯ ಕಾರ್ಯಗಳಲ್ಲಿ ತೊಡಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಇತ್ತೀಚೆಗಷ್ಟೇ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಸುದ್ದಿಯಾಗಿದ್ದರು. ಇದೀಗ ಇನ್ನೂ ನಾಲ್ಕು ಶಾಲೆಗಳನ್ನು ದತ್ತು ಪಡೆಯುವ ಮೂಲಕ ಸಮಾಜಮುಖಿ ಕೆಲಸಕ್ಕೆ ಮುಂದಾಗಿದ್ದಾರೆ.​

    ಇದನ್ನೂ ಓದಿ: ಮತ್ತೆ ಕೆಜಿಎಫ್​ನತ್ತ: ಮುಂದಿನ ವಾರದಿಂದ ಕೊನೆಯ ಹಂತದ ಚಿತ್ರೀಕರಣ

    ಸರ್ಕಾರಿ ಶಾಲೆಗಳ ಮೇಲೆ ಕಣ್ಣಿಟ್ಟಿರುವ ಸುದೀಪ್​, ಅವುಗಳ ಅಭಿವೃದ್ಧಿಗೆ ಕಿಚ್ಚ ಪಣ ತೊಟ್ಟಿದ್ದಾರೆ. ಕಿಚ್ಚ ಸುದೀಪ್ ಚಾರಿಟೆಬೆಲ್ ಸೊಸೈಟಿ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿನ ನಾಲ್ಕು ಶಾಲೆಗಳನ್ನು ದತ್ತು ಪಡೆದಿದ್ದಾರೆ. ಆವಿಗೆ ಹಳ್ಳಿ, ಹಾಳಸಸಿ, ಎಸ್​.ಎನ್​ ಬಡಾವಣೆ ಸಾಗರ, ಎಲ್​.ಎಲ್​ ಹಳ್ಳಿ ಸಾಗರ ಸೇರಿ ಒಟ್ಟು 4 ಕನ್ನಡ ಶಾಲೆಗಳನ್ನು ದತ್ತು ಪಡೆಯಲಾಗಿದೆ.

    ಸರ್ಕಾರಿ ಶಾಲಾ ಶಿಕ್ಷಕರ ಸಂಬಳ ಹಾಗೂ ಮಕ್ಕಳ ಸ್ಕಾಲರ್​ಶಿಪ್ ಬಿಟ್ಟು ಶಾಲೆ ಅಭಿವೃದ್ಧಿಯ ಜವಾಬ್ದಾರಿಯನ್ನು ಕಿಚ್ಚ ವಹಿಸಿಕೊಂಡಿದ್ದು, ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣ ಕೆಲಸ. ಪೇಂಟಿಂಗ್​, ಶೌಚಾಲಯ ನಿರ್ಮಾಣ ಸೇರಿ ಶಾಲೆಗೆ ಬೇಕಾದ ಮೂಲ ಸೌಕರ್ಯವನ್ನು ಕಿಚ್ಚ ತಮ್ಮ ಟ್ರಸ್ಟ್​ ಮೂಲಕ ಒದಗಿಸಲಿದ್ದಾರೆ.

    ಇದನ್ನೂ ಓದಿ: ಅಭಯಾರಣ್ಯದಲ್ಲಿ ದರ್ಶನ್ ಸಫಾರಿ

    ಮಾರ್ಚ್​ ತಿಂಗಳಲ್ಲೇ ಶಾಲೆಗಳನ್ನು ದತ್ತು ಪಡೆಯಲು ತೀರ್ಮಾನಿಸಲಾಗಿತ್ತು. ಆದರೆ, ಕರೊನಾ ಬಂದಿದ್ದರಿಂದ ದತ್ತು ಪಡೆಯುವ ಕೆಲಸ ಆಗಿರಲಿಲ್ಲ. ಇದೀಗ ಇನ್ನೇನು ಸೆಪ್ಟಂಬರ್​ನಲ್ಲಿ ಶಾಲೆಗಳು ಪುನಾರಾಂಭ ಆಗೋ ಸಾಧ್ಯತೆ ಇರುವುದರಿಂ ದತ್ತು ಪಡೆಯಲಾಗಿದೆ.

    ಒಂದೇ ಸಿನಿಮಾದಲ್ಲಿ ಸಮಂತಾ ರಶ್ಮಿಕಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts