More

    ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ – ಸಿಸ್ಟರ್ ಅಭಯಾ ಕೊಲೆ ಪ್ರಕರಣ

    ಕಾಸರಗೋಡು: ಸಿಸ್ಟರ್ ಅಭಯಾ ಕೊಲೆ ಪ್ರಕರಣದ ಅಪರಾಧಿಗಳಾದ ಫಾದರ್ ಥಾಮಸ್ ಎಂ. ಕೊಟ್ಟೂರ್, ಸಿಸ್ಟರ್ ಸೆಫಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಜತೆಗೆ ಇಬ್ಬರಿಗೆ ತಲಾ 5 ಲಕ್ಷ ರೂಪಾಯಿ ಜುಲ್ಮಾನೆ ಹಾಕಿದೆ.

    ಆರೋಪಿಗಳು ಅನೈತಿಕ ಲೈಂಗಿಕ ಸಂಪರ್ಕ ಹೊಂದಿರುವುದನ್ನು ಸಿಸ್ಟರ್ ಅಭಯಾ ಕಣ್ಣಾರೆ ಕಂಡ ಹಿನ್ನೆಲೆ ಇಬ್ಬರೂ ಸೇರಿ ಅಭಯಾ ಅವರನ್ನು ಕೊಡಲಿಯಿಂದ ಕೊಲೆ ನಡೆಸಿರುವುದಾಗಿ ಸಿಬಿಐ ಪತ್ತೆ ಹಚ್ಚಿತ್ತು. 1992 ಮಾರ್ಚ್ 27ರಂದು ಕೊಟ್ಟಾಯಂ ಪಿಯೂಸ್ ಟೆಂಥ್ ಕಾನ್ವೆಂಟ್​ನ ಬಾವಿಯಲ್ಲಿ ಸಿಸ್ಟರ್ ಅಭಯಾ ಮೃತದೇಹ ಪತ್ತೆಯಾಗಿತ್ತು. ಪ್ರಕರಣದ ತನಿಖೆಯನ್ನು ಮೊದಲು ಕೋಟ್ಟಾಯಂ ಪಶ್ಚಿಮ ಠಾಣೆ ಪೊಲೀಸರು ನಡೆಸಿದ್ದು, ನಂತರ ಕ್ರೈಂ ಬ್ರಾಂಚ್​ಗೆ ವಹಿಸಿಕೊಡಲಾಗಿತ್ತು. ಆರಂಭದಲ್ಲಿ ಆತ್ಮಹತ್ಯೆ ಎಂದು ಪರಿಗಣಿಸಿ ಪ್ರಕರಣಕ್ಕೆ ಮಂಗಳ ಹಾಡಲಾಗಿತ್ತು.

    1993 ಮಾರ್ಚ್ 23ರಂದು ಪ್ರಕರಣವನ್ನು ಸಿಬಿಐಗೆ ವಹಿಸಿಕೊಡಲಾಗಿತ್ತು. ಮೂರು ಬಾರಿ ಸಿಬಿಐ ವರದಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. 2008ರಲ್ಲಿ ಸಿಬಿಐ ಕೊಚ್ಚಿ ಘಟಕ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. 2008 ನ.19ರಂದು ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಸಾಕ್ಷ್ಯಾಧಾರದ ಕೊರತೆ ಹಿನ್ನೆಲೆ ಫಾದರ್ ಜೋಸ್ ಅವರನ್ನು ಕಳೆದ ವರ್ಷ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಪ್ರಕರಣದಲ್ಲಿ ಮೊದಲು ತನಿಖೆ ನಡೆಸಿದ್ದ ಕೋಟ್ಟಾಯಂ ಪಶ್ಚಿಮ ಠಾಣೆ ಎ.ಎಸ್.ಐ ಆಗಸ್ಟಿನ್ ಅವರನ್ನು ನಾಲ್ಕನೇ ಆರೋಪಿಯಾಗಿ ಸೇರಿಸಲಾಗಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದ.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಡಿಟಿಎಚ್​ ಪರಿಷ್ಕೃತ ಮಾರ್ಗದರ್ಶಿಗೆ ಸಚಿವ ಸಂಪುಟ ಒಪ್ಪಿಗೆ – ಪರವಾನಗಿ 20 ವರ್ಷಕ್ಕೆ, ಎಫ್​ಡಿಐ 100%

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts