More

    VIDEO: ಅಭ್ಯಾಸ ಪಂದ್ಯದಲ್ಲಿ ಎಬಿಡಿ ಶತಕ, 10 ಸಿಕ್ಸರ್ ಸಿಡಿಸಿದ ಸ್ಟಾರ್ ಬ್ಯಾಟ್ಸ್ ಮನ್

    ದುಬೈ: 14ನೇ ಐಪಿಎಲ್‌ನ 2ನೇ ಭಾಗಕ್ಕೆ ದಿನಗಣನೆ ಆರಂಭಗೊಂಡಿದೆ. ಈಗಾಗಲೇ ತಂಡಗಳು ಕಠಿಣ ತಾಲೀಮಿನಲ್ಲಿ ತೊಡಗಿವೆ. ಆರ್‌ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ ಅಭ್ಯಾಸ ಪಂದ್ಯದಲ್ಲಿ ಬಿರುಸಿನ ಶತಕ ಸಿಡಿಸುವ ಮೂಲಕ ಭರ್ಜರಿ ಫಾರ್ಮ್ ಕಂಡುಕೊಂಡಿದ್ದಾರೆ. ಆರ್‌ಸಿಬಿ ಎ ಮತ್ತು ಬಿ ತಂಡಗಳ ನಡುವೆ ಬುಧವಾರ ಅಭ್ಯಾಸ ನಡೆಯಿತು. ಈ ವೇಳೆ ಸ್ಫೋಟಕ ಬ್ಯಾಟಿಂಗ್‌ನಿಂದ ಗಮನಸೆಳೆದಿದ್ದಾರೆ. ಆರ್‌ಸಿಬಿ ತಂಡ ಸೋಮವಾರ (ಸೆ.21) ಕೆಕೆಆರ್ ಎದುರು ಕಣಕ್ಕಿಳಿಯಲಿದೆ.

    ಇದನ್ನೂ ಓದಿ: VIDEO: ಪಂಜಾಬ್ ಪಾಳಯದಲ್ಲಿ ಅನಿಲ್ ಕುಂಬ್ಳೆ ಕನ್ನಡ ಹಾಡು, ಅಭಿಮಾನಿಗಳು ಫುಲ್ ಖುಷ್

    ದ.ಆಫ್ರಿಕಾದ ಡೈನಾಮಿಕ್ ಬ್ಯಾಟ್ಸ್‌ಮನ್ ಎಬಿಡಿ, 10 ಸಿಕ್ಸರ್, 7 ಬೌಂಡರಿ ಒಳಗೊಂಡಂತೆ ಕೇವಲ 46 ಎಸೆತಗಳಲ್ಲಿ 104 ರನ್ ಸಿಡಿಸಿದ್ದಾರೆ. ಮತ್ತೋರ್ವ ಬ್ಯಾಟ್ಸ್‌ಮನ್ ಮೊಹಮದ್ ಅಜರುದ್ದೀನ್ 3 ಸಿಕ್ಸರ್, 4 ಬೌಂಡರಿ ಒಳಗೊಂಡಂತೆ 43 ಎಸೆತಗಳಲ್ಲಿ 66 ರನ್ ಬಾರಿಸಿದ್ದಾರೆ. ಈ ಜೋಡಿ ಅದ್ಭುತ ನಿರ್ವಹಣೆ ಫಲವಾಗಿ ಆರ್‌ಸಿಬಿ ಎ ತಂಡ, ಆರ್‌ಸಿಬಿ ಬಿ ತಂಡಕ್ಕೆ 213 ರನ್ ಟಾರ್ಗೆಟ್ ನೀಡಿತು. ಪ್ರತಿಯಾಗಿ ನಾಯಕ ದೇವದತ್ ಪಡಿಕಲ್, ಕೆಎಸ್ ಭರತ್ ಜೋಡಿ ಉತ್ತಮ ಆರಂಭ ನೀಡಿದ ಫಲವಾಗಿ 7 ವಿಕೆಟ್ ಜಯ ದಾಖಲಿಸಿತು. ಈ ಜೋಡಿ ಮೊದಲ ವಿಕೆಟ್‌ಗೆ 47 ಎಸೆತಗಳಲ್ಲಿ 95 ರನ್ ಗಳಿಸಿತು. ಬಿ ತಂಡಕ್ಕೆ ಜಯ ದಾಖಲಿಸಲು ಕಡೇ ಎರಡು ಎಸೆತಗಳಲ್ಲಿ ಮೂರು ರನ್ ಅವಶ್ಯಕತೆಯಿದ್ದಾಗ ಬೌಂಡರಿಯೊಂದಿಗೆ ಗೆಲುವಿನ ದಡ ಸೇರಿತು.

    ಇದನ್ನೂ ಓದಿ: ಕರೊನಾ ವಾರಿಯರ್ಸ್‌ಗೆ ಗೌರವ ಸಲ್ಲಿಸಲು ಆರ್‌ಸಿಬಿ ಸಿದ್ಧತೆ ಹೇಗಿದೆ ಗೊತ್ತೇ?

    ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, ವೇಗಿ ಮೊಹಮದ್ ಸಿರಾಜ್, ಡೇನಿಯಲ್ ಕ್ರಿಶ್ಚಿಯನ್ ಸದ್ಯ ಕ್ವಾರಂಟೈನ್‌ನಲ್ಲಿದ್ದು, ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದರು. ಆರ್‌ಸಿಬಿ ಎ ತಂಡವನ್ನು ಹರ್ಷಲ್ ಪಟೇಲ್ ಮುನ್ನಡೆಸಿದ್ದರೆ, ಬಿ ತಂಡಕ್ಕೆ ಪಡಿಕಲ್ ಸಾರಥ್ಯವಹಿಸಿದ್ದರು. ‘ಮಧ್ಯಾಹ್ನದ ವೇಳೆ ಕ್ರಿಕೆಟ್ ಆಡುವುದು ಕ್ರೇಜಿ ಎನಿಸಿತು. ಪಿಚ್ ಪ್ಲಾಟ್ ಆಗಿದ್ದರಿಂದ ಅಜರುದ್ದೀನ್‌ಗೆ ಬಿರುಸಾಗಿ ಬ್ಯಾಟಿಂಗ್ ಮಾಡುವಂತೆ ಹೇಳಿದೆ. ಆರಂಭಿಕ 20 ಎಸೆತಗಳು ರನ್‌ಗಳಿಸಲು ಪರದಾಡಿದವು, ಬಳಿಕ ಉತ್ತಮ ಇನಿಂಗ್ಸ್ ಕಟ್ಟಿದೇವು’ ಎಂದು ಎಬಿ ಡಿವಿಲಿಯರ್ಸ್‌ ಪ್ರತಿಕ್ರಿಯಿಸಿದ್ದಾರೆ.

    https://www.instagram.com/tv/CT08OKbhKyx/?utm_source=ig_web_button_share_sheet

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts