More

    ಜೋಗ-ಮಾವಿನಗುಂಡಿವರೆಗೆ ಎಬಿಸಿ ಲೈನ್

    ರಮೇಶ ಹಾರ್ಸಿಮನೆ ಸಿದ್ದಾಪುರ
    ತಾಲೂಕಿನ ಜೋಗ-ಮಾವಿನಗುಂಡಿ ಕಿಲಾರವರೆಗೆ (2.5 ಕಿಮೀ) ಏರಿಯಲ್ ಬಂಚ್ಡ್ ಕೇಬಲ್(ಎಬಿಸಿ) ದುಬಾರಿ ವೆಚ್ಚದ ವಿದ್ಯುತ್ ಲೈನ್ ಅನ್ನು ಹೆಸ್ಕಾಂ ಪ್ರಾಯೋಗಿಕವಾಗಿ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಿದೆ.
    ಸಿದ್ದಾಪುರ ತಾಲೂಕು ವ್ಯಾಪ್ತಿಯ ಜೋಗ ಹಾಗೂ ಮಾವಿನಗುಂಡಿಗೆ ಮೆಸ್ಕಾಂ ವಿಭಾಗದ ಬಚ್ಚಗಾರ್ ಫೀಡರ್​ನಿಂದ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಆದರೆ, ಈಗ ಹೆಸ್ಕಾಂ ಸಿದ್ದಾಪುರ ತಾಲೂಕು ವ್ಯಾಪ್ತಿಯ ಜೋಗದವರೆಗೂ ಹೊಸದಾಗಿ ಆರಂಭಗೊಂಡಿರುವ ಹಲಗೇರಿ ಫೀಡರ್​ನಿಂದ ಪ್ರಾಯೋಗಿಕವಾಗಿ ದುಬಾರಿ ವೆಚ್ಚದ ಕೇಬಲ್ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಿದೆ.
    ಒಮ್ಮೆ ಹೆಸ್ಕಾಂ ವಿಭಾಗದಲ್ಲಿ ವಿದ್ಯುತ್ ವ್ಯತ್ಯಯವಾದರೆ ಮೆಸ್ಕಾಂ ವಿಭಾಗದಿಂದಲೂ ವಿದ್ಯುತ್ ಸಂಪರ್ಕ ನೀಡಲು(ಜೋಗ-ಮಾವಿನಗುಂಡಿಯವರೆಗೆ) ವ್ಯವಸ್ಥೆ ಮಾಡಲಾಗಿದೆ. ಈ ದುಬಾರಿ ವೆಚ್ಚದ ಕೇಬಲ್ ಅಳವಡಿಸುವುದರಿಂದ ಅರಣ್ಯ ನಾಶವಾಗಲಿ, ಪರಿಸರಕ್ಕೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ ಹಾಗೂ ಕಾಡುಪ್ರಾಣಿಗಳಿಗೂ ಇದರಿಂದ ಯಾವುದೇ ಅಪಾಯ ಇಲ್ಲ. ಮಲೆನಾಡಿನಲ್ಲಿ ವಿದ್ಯುತ್ ಸಂಪರ್ಕ ನೀಡಬೇಕಾದರೆ ಸಾಮಾನ್ಯವಾಗಿ ನೂರಾರು ಮರಗಳು ನಾಶವಾಗುವುದರ ಜತೆಗೆ ಪರಿಸರಕ್ಕೂ ಹಾನಿ ಉಂಟಾಗುತ್ತಿರುವ ಈ ಸಂದರ್ಭದಲ್ಲಿ ಹಾಗೂ ಮಳೆ-ಗಾಳಿಯಿಂದ ವಿದ್ಯುತ್ ಸಂಪರ್ಕ ಕಡಿತವಾಗುವುದು, ಇನ್ಸುಲೇಟರ್ ಪಂಚರ್ ಆಗುವುದು ತಪ್ಪುವುದರಿಂದ ದುಬಾರಿ ವೆಚ್ಚದ ವಿದ್ಯುತ್ ತಂತಿ ಅಳವಡಿಸಿ ನಿರಂತರ ವಿದ್ಯುತ್ ಸಂಪರ್ಕ ನೀಡುವುದು ಉತ್ತಮ ಎನ್ನುವ ಮಾತು ಕೇಳಿಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts