More

    ದೆಹಲಿ ಪಾಲಿಕೆ ಮೇಯರ್​ ಆಗಿ ಆಪ್​ ಅಭ್ಯರ್ಥಿ​ ಪುನರಾಯ್ಕೆ; ಕಡೇ ಕ್ಷಣದಲ್ಲಿ ನಾಮಪತ್ರ ಹಿಂಪಡೆದ ಬಿಜೆಪಿ

    ನವದೆಹಲಿ: ದೆಹಲಿ ಪಾಲಿಕೆಯ ಮೇಯರ್​ ಹಾಗೂ ಉಪಮೇಯರ್​ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಎಪಿಯ ಶೆಲ್ಲಿ ಓಬೆರಾಯ್​ ಮತ್ತು ಆಲೆ ಮೊಹಮ್ಮದ್​ ಇಕ್ಬಾಲ್ ಜಯಗಳಿಸಿದ್ದಾರೆ.

    ಈ ಮೂಲಕ ಈ ಇಬ್ಬರು ನಾಯಕರು ಎರಡನೇ ಬಾರಿಗೆ ಮೇಯರ್​-ಉಪಮೇಯರ್​​ ಆಗಿ ಮುಂದುವರೆದಿದ್ದಾರೆ.

    ಇದನ್ನೂ ಓದಿ: ಶೂನ್ಯದಿಂದ ಪಕ್ಷ ಕಟ್ಟಿ ಬೆಳೆಸಿದ್ದೇವೆ, ನಾವು ಏನೆಂದು ಚುನಾವಣೆ ನಂತರ ತಿಳಿಯಲಿದೆ: ಜಗದೀಶ್​ ಶೆಟ್ಟರ್​​

    ನಾಮಪತ್ರ ವಾಪಸ್​

    ಇನ್ನು ಶೆಲ್ಲಿ ಓಬೆರಾಯ್​ ಎದುರು ಮೇಯರ್​ ಸ್ಥಾನಕ್ಕೆ ಬಿಜೆಪಿಯ ಶಿಖಾ ರೈ ನಾಮಪತ್ರ ಸಲ್ಲಿಸಿದ್ದರು. ಕಡೇ ಕ್ಷಣದಲ್ಲಿ ಶಿಖಾ ನಾಮಪತ್ರ ಹಿಂಪಡೆದ ಕಾರಣ ಮೇಯರ್​ ಸ್ಥಾನಕ್ಕೆ ಶೆಲ್ಲಿ ಒಬೆರಾಯ್​ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಈ ಕುರಿತು ಮಾತನಾಡಿರುವ ಶಿಖಾ ರೈ ಸ್ಥಾಯಿ ಸಮಿತಿ ಸ್ಥಾನಗಳಿಗೆ ಚುನಾವಣೆ ನಡೆಯದ ಕಾರಣ ನಾನು ನನ್ನ ನಾಮಪತ್ರವನ್ನು ಹಿಂಪಡೆಯುತ್ತಿದ್ದೇನೆ ಎಂದು ತಿಳಿಸಿದ್ಧಾರೆ.

    ಇನ್ನು ಉಪಮೇಯರ್​ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸೋನಿ ಪಾಲ್​ ತಮ್ಮ ನಾಮಪತ್ರವನ್ನು ಹಿಂಪಡೆದ ಕಾರಣ ಎಎಪಿಯ ಆಲೆ ಮೊಹಮ್ಮದ್​ ಇಕ್ಬಾಲ್​ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts