More

    ವೈಎಸ್​ವಿ ದತ್ತ ಜೆಡಿಎಸ್ ಬಿಡ್ತಾರಾ?: ಎಎಪಿ ಮುಖಂಡ ಭಾಟಿ ಜತೆಗೆ 2 ಗಂಟೆ ಮಾತುಕತೆ!

    ಬೆಂಗಳೂರು: ಜೆಡಿಎಸ್​ನ ಚಾಣಕ್ಯ ಎಂದೇ ಗುರುತಿಸಿಕೊಂಡಿರುವ ವೈಎಸ್​ವಿ ದತ್ತಾ ಪಕ್ಷ ಬಿಡ್ತಾರಾ? ಪ್ರಸಕ್ತ ವಿದ್ಯಮಾನಗಳು ಅವರನ್ನು ಜೆಡಿಎಸ್ ಬಿಡುವಂತೆ ಮಾಡಿದೆಯಾ? ಅವರೇಕೆ ಎಎಪಿ ಮುಖಂಡ ರೋಮಿ ಭಾಟಿ ಜತೆಗೆ ಸುದೀರ್ಘ 2 ಗಂಟೆ ಚರ್ಚೆ ಮಾಡಿದ್ರು? ದೇವೇಗೌಡರು ಇರೋತನಕ ಮಾತ್ರ ಜೆಡಿಎಸ್​ನಲ್ಲಿ ಇರೋದಾ? ಏನು ಹೇಳಿದ್ದಾರೆ ವೈಎಸ್​ವಿ ದತ್ತ?

    ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಣತಿಯಂತೆ ಆಮ್ ಆದ್ಮಿ ಕರ್ನಾಟಕ ನೂತನ ಉಸ್ತುವಾರಿ ರೋಮಿ ಭಾಟಿ ಅವರು ಜೆಡಿಎಸ್ ಹಿರಿಯ ಮುಖಂಡ ವೈಎಸ್‌ವಿ ದತ್ತ ಅವರನ್ನು ಭೇಟಿ ಮಾಡಿ 2 ಗಂಟೆ ಕಾಲ ಸುದೀರ್ಘ ಚರ್ಚೆ ಮಾಡಿದರು. ಪ್ರಸ್ತುತ ರಾಜಕೀಯ ಸನ್ನಿವೇಶಗಳು ಮತ್ತು ಮುಂದಿನ ರಾಜಕೀಯ ಸ್ಥಿತ್ಯಂತರಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದರು. ಅಲ್ಲದೆ, ದತ್ತ ಅವರನ್ನು ಆಮ್ ಆದ್ಮಿ ಪಕ್ಷ ಸೇರಿ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಮನವಿ ಮಾಡಿದರು. ಕೇಜ್ರಿವಾಲ್ ಅವರು ತಮ್ಮನ್ನು ಪಕ್ಷಕ್ಕೆ ಆಹ್ವಾನಿಸುವಂತೆ ಸೂಚಿಸಿದ್ದಾರೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

    ಇದನ್ನೂ ಓದಿ: ಅ.2ರಂದು ‘ಪ್ರತಿಭಟನಾ ಉಪನ್ಯಾಸ ಸತ್ಯಗ್ರಹ’ಕ್ಕೆ ಎಐಕೆಎಸ್‌ಸಿಸಿ ಕರೆ

    ಅದಕ್ಕೆ ಪ್ರತಿಕ್ರಿಯಿಸಿದ ವೈ.ಎಸ್.ವಿ.ದತ್ತ, ನಾನು ಜೆಡಿಎಸ್ ಬಿಟ್ಟು ಬರಲು ಆಗುವುದಿಲ್ಲ. ಬೇರೆ ಪಕ್ಷ ಸೇರುವ ಕುರಿತು ನಾನು ಆಲೋಚನೆಯನ್ನೂ ಮಾಡಿಲ್ಲ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಇರುವವರೆಗೂ ಪಕ್ಷದಲ್ಲಿ ಇರುತ್ತೇನೆ ಎಂದು ತಿಳಿಸಿರುವುದಾಗಿ ಮೂಲಗಳು ಸ್ಪಷ್ಟಪಡಿಸಿವೆ. ಎಎಪಿ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಹಾಗೂ ರಾಜ್ಯ ಕಾರ್ಯದರ್ಶಿ ಸಂಚಿತ್ ಸಹಾನಿ ಅವರು ಉಪಸ್ಥಿತರಿದ್ದರು.

    1997ರಲ್ಲಿ ಪ್ಯಾರಾಗ್ಲೈಡಿಂಗ್ ಸಾಹಸ ಮಾಡಿದ್ದ ಮೋದಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts