More

    ಅ.2ರಂದು ‘ಪ್ರತಿಭಟನಾ ಉಪನ್ಯಾಸ ಸತ್ಯಗ್ರಹ’ಕ್ಕೆ ಎಐಕೆಎಸ್‌ಸಿಸಿ ಕರೆ

    ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಕಾಯ್ದೆಯನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿ ಅ.2ರ ಗಾಂಧಿ ಜಯಂತಿ ಕಾರ್ಯಕ್ರಮವನ್ನು ರಾಷ್ಟ್ರವ್ಯಾಪಿ ‘ಪ್ರತಿಭಟನಾ ಉಪವಾಸ ಸತ್ಯಾಗ್ರಹ’ವಾಗಿ ಸಂಘಟಿಸಬೇಕು ಎಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಕರೆ ನೀಡಿದೆ.

    ಅ.2ರಂದು ಪ್ರತಿಭಟನಾ ಉಪವಾಸ ಸತ್ಯಾಗ್ರಹವನ್ನು ರಾಜ್ಯಾದ್ಯಂತ ಎಲ್ಲ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಎಐಕೆಎಸ್‌ಸಿಸಿ ಸಂಘಟಿಸುತ್ತಿದೆ. ರಾಜ್ಯದ ರೈತರು, ಕೃಷಿ ಕೂಲಿಕಾರರು, ಕಾರ್ಮಿಕರು, ದಲಿತರು, ಮಹಿಳಾ, ವಿದ್ಯಾರ್ಥಿ, ಯುವಜನ ಸಂಘಟನೆಗಳು, ನಾಗರೀಕ ಬಂಧುಗಳು ಬೆಂಬಲ ಸೂಚಿಸುವಂತೆ ಎಐಕೆಎಸ್‌ಸಿಸಿ ಸಮಿತಿ ಸದಸ್ಯರು ಕೋರಿಕೊಂಡಿದ್ದಾರೆ.

    ಈ ಕುರಿತು ಮಾತನಾಡಿದ ಎಐಕೆಎಸ್‌ಸಿಸಿ ಕೇಂದ್ರ ಸಮಿತಿ ಸದಸ್ಯೆ ಕವಿತಾ ಕುರುಗಂಟಿ, ದೇಶದ ಸ್ವಾತಂತ್ರ್ಯಕ್ಕಾಗಿ, ಸ್ವಾವಲಂಬನೆಗಾಗಿ ಪ್ರಾಣವನ್ನೇ ಅರ್ಪಿಸಿದ ರಾಷ್ಟ್ರಪಿತ ಗಾಂಧೀಜಿ ಜನ್ಮ ದಿನವನ್ನು ಸಾಮ್ರಾಜ್ಯಶಾಹಿಗಳು, ಜಾಗತೀಕ ಬಂಡವಾಳಗಾರರು, ಕಾರ್ಪೊರೇಟ್ ಕಂಪನಿಗಳಿಗೆ ಈ ದೇಶವನ್ನು ಮತ್ತೆ ಗುಲಾಮರನ್ನಾಗಿ ಮಾಡುವುದಕ್ಕೆ ಬಿಡುವುದಿಲ್ಲ. ಅಂತಹ ನೀತಿಗಳನ್ನು ಹಿಂಪಡೆಯುವವರೆಗೆ ಈ ಸಂಘರ್ಷ ನಿಲ್ಲುವುದಿಲ್ಲ ಎನ್ನುವ ಪ್ರತಿಜ್ಞೆಯನ್ನು ಮಾಡುವ ಹೋರಾಟವಾಗಿ ಅ.2ರಂದು ಪತ್ರಿಭಟನಾ ಉಪ ಸತ್ಯಾಗ್ರಹವನ್ನು ಸಂಘಟಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts