More

    ಹಿಂದುತ್ವ ಕಾರ್ಡ್ ಬಳಸಿ ಗುಜರಾತ್‌ನಲ್ಲಿ ಆಪ್ – ಬಿಜೆಪಿ ಕದನ

    ಅಹಮದಾಬಾದ್: ‘ಆಪ್ ವಿರೋಧಿ ಪೋಸ್ಟರ್​ಗಳನ್ನು ಪ್ರದರ್ಶಿಸಿದ ಬಿಜೆಪಿ ಸರ್ಕಾರ ಹಿಂದುತ್ವ ಕಾರ್ಡ್ ಬಳಸಿ ಜನರ ಗಮನವನ್ನು ಅವರ ವೈಫಲ್ಯಗಳಿಂದ ದೂರಕ್ಕೆ ಒಯ್ಯುತ್ತಿದ್ದಾರೆ’ ಎಂದು ಆಮ್ ಆದ್ಮಿ ಪಕ್ಷ ಶನಿವಾರ ಆರೋಪಿಸಿದೆ.

    ‘ಬಿಜೆಪಿ ಸರ್ಕಾರ ಒಳ್ಳೆಯ ಶಿಕ್ಷಣ, ಆರೋಗ್ಯ ವ್ಯವಸ್ಥೆ, ಉದ್ಯೋಗ ಸೃಷ್ಟಿ ಮುಂತಾದ ಸೇವೆಗಳನ್ನು ಜನರಿಗೆ ನೀಡುತ್ತಿಲ್ಲ. ಜನರಿಗೆ ಆಪ್​ ಸೇವೆ ಇಷ್ಟ ಆಗುತ್ತಿರಲಿಲ್ಲ ಎಂದಾದರೆ ಅವರು ಪಕ್ಷಕ್ಕೆ ಬೆಂಬಲ ಸೂಚಿಸುತ್ತಿರಲಿಲ್ಲ. ಬೇರೆ ಪಕ್ಷದವರು ಬಿಜೆಪಿ ವಿರುದ್ಧ ಪೋಸ್ಟರ್​​ಗಳನ್ನು ಹಾಕಿದ್ದರೆ ಕೂಡಲೆ ತೆರವುಗೊಳಿಸಲಾಗುತ್ತಿತ್ತು. ಆದರೆ ರಾಜ್​ಕೋಟ್​ನಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತ ಇರುವ ಕಾರಣ ಕೇಜ್ರಿವಾಲ್‌ರ ಅವಹೇಳನ ಇರುವ ಚಿತ್ರವನ್ನು ತೆಗೆದುಹಾಕುತ್ತಿಲ್ಲ’ ಎಂದು ಆಪ್​ ನಾಯಕ ಇಂದ್ರಾನಿಲ್ ರಾಜಗುರು ಆರೋಪಿಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಭರತ್ ಬೋಗ್ರಾ ‘ಗುಜರಾತಿನ ಜನ ಹಿಂದು ವಿರೋಧಿ ಆಲೋಚನೆಗಳನ್ನು ಹಾಗೂ ನಂಬಿಕೆಗಳನ್ನು ಒಪ್ಪುವುದಿಲ್ಲ’ ಎಂದು ಹೇಳಿದರು.

    ಇಂದು (ಅಕ್ಟೋಬರ್ 8) ಗುಜರಾತ್​ ಪ್ರವಾಸ ಕೈಗೊಂಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಹಾಗೂ ಪಂಜಾಬ್ ಸಿಎಂ ಭಗವಂತ್ ಮಾನ್, ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುಣಾವಣೆಗಾಗಿ ಕಾರ್ಯತಂತ್ರವನ್ನು ರೂಪಿಸಲು ಆಗಮಿಸಿದ್ದಾರೆ. ಕೇಜ್ರಿವಾಲ್ ಹಾಗೂ ಭಗವಂತ್ ಮಾನ್ ವಿವಿಧ ಸಮುದಾಯಗಳ ನಾಯಕರೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಮನೋಜ್ ಸೊರಾಥಿಯಾ ಮಾಹಿತಿ ನೀಡಿದರು.

    https://www.vijayavani.net/a-bjp-janasnkalpa-yatre-on-october-11th/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts