More

    ‘ಸಂಜು’ ಚಿತ್ರದಲ್ಲಿ ಸುನೀಲ್​ ದತ್​ ಪಾತ್ರ ಮಾಡಬೇಕಿತ್ತಂತೆ ಆಮೀರ್​ ಖಾನ್​ …

    ಮುಂಬೈ: ರಣಬೀರ್​ ಕಪೂರ್​ ಅಭಿನಯದ ಬಾಲಿವುಡ್​ ನಟ ಸಂಜಯ್​ ದತ್​ ಅವರ ಬಯೋಪಿಕ್ ‘ಸಂಜು’ ಚಿತ್ರವು ಬಿಡುಗಡೆಯಾಗಿ ಮೂರು ವರ್ಷಗಳಾಗಿವೆ. 2018ರ ಜೂನ್​ 29ರಂದು ಈ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಿ ಹಿಟ್​ ಆಗಿತ್ತು. ಈ ಚಿತ್ರದಲ್ಲಿ ಸಂಜಯ್​ ದತ್​ ಅವರನ್ನು ತೀರಾ ಸಾಚಾ ಎಂದು ತೋರಿಸಲಾಗಿದೆ ಎಂಬ ಅಪಸ್ವರಗಳ ನಡುವೆಯೂ, ಚಿತ್ರ ಬೇರೆಬೇರೆ ಕಾರಣಗಳಿಗಾಗಿ ಹಿಟ್​ ಆಗಿತ್ತು.

    ಇದನ್ನೂ ಓದಿ: ಮಂದಿರಾ ಬೇಡಿ ಪತಿ ರಾಜ್​ ಕೌಶಲ್​ ಹೃದಯಾಘಾತದಿಂದ ನಿಧನ

    ಚಿತ್ರ ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ, ಚಿತ್ರತಂಡದಿಂದ ಒಂದು ಹೊಸ ವಿಷಯ ಬೆಳಕಿಗೆ ಬಂದಿದೆ. ಅದೇನೆಂದರೆ, ಚಿತ್ರದಲ್ಲಿ ಸಂಜಯ್​ ದತ್​ ಅವರ ಪಾತ್ರವನ್ನು ನಟ ಪರೇಶ್​ ರಾವಲ್​ ಮಾಡಿದ್ದರು. ಮುಂಚೆ ಆ ಪಾತ್ರಕ್ಕೆ ಪರೇಶ್​ ಬದಲು ಆಮೀರ್​ ಖಾನ್​ ಅವರಿಗೆ ಆಫರ್​ ಮಾಡಲಾಗಿತ್ತಂತೆ. ಆದರೆ, ಆಮೀರ್​ ಆ ಪಾತ್ರವನ್ನು ನಿರಾಕರಿಸಿದ್ದರಿಂದ ಪರೇಶ್​ ರಾವಲ್​ ಅವರಿಗೆ ನೀಡಲಾಯಿತು ಎಂದು ನಿರ್ದೇಶಕ ರಾಜಕುಮಾರ್​ ಹಿರಾನಿ ಹೇಳಿಕೊಂಡಿದ್ದಾರೆ.

    ‘ಸಂಜು’ ಚಿತ್ರಕ್ಕೂ ಮುನ್ನ ಆಮೀರ್​ ಖಾನ್​ ಮತ್ತು ರಾಜಕುಮಾರ್​ ಹಿರಾನಿ ಇಬ್ಬರೂ ‘3 ಈಡಿಯಟ್ಸ್​’ ಮತ್ತು ‘ಪಿಕೆ’ ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಈ ಚಿತ್ರದಲ್ಲೂ ಆಮೀರ್​ ಇದ್ದರೆ ಚೆನ್ನ ಎಂದು ಹಿರಾನಿ ಅವರಿಗೆ ಅನಿಸಿತ್ತಂತೆ. ಆದರೆ, ಅದಾಗಲೇ ಸಂಜು ಪಾತ್ರಕ್ಕೆ ರಣಬೀರ್​ ಕಪೂರ್​ ಗೊತ್ತಾಗಿದ್ದರು. ಇನ್ನು, ಚಿತ್ರದಲ್ಲಿರುವ ಇನ್ನೊಂದು ಮುಖ್ಯ ಪಾತ್ರವೆಂದರೆ ಅದು ಸಂಜು ತಂದೆ ಸುನೀಲ್​ ದತ್​ ಅವರದ್ದು. ಈ ಪಾತ್ರವನ್ನು ಮಾಡುವುದಕ್ಕೆ ಆಮೀರ್​ ಖಾನ್​ಗೆ ಆಫರ್​ ನೀಡಲಾಯಿತಂತೆ. ಆದರೆ, ಆ ಪಾತ್ರವನ್ನು ಆಮೀರ್​ ನಿರಾಕರಿಸಿದ್ದಾರೆ.

    ಇದನ್ನೂ ಓದಿ: ಸುಳ್ಳು ರೇಪ್‌ ಕೇಸ್‌ನಲ್ಲಿ ಸಿಲುಕಿರೋ ಖ್ಯಾತ ನಟನ ಬದುಕು ಛಿದ್ರ ಛಿದ್ರ- ಕುಟುಂಬದಲ್ಲಿ ಸಾಲು ಸಾಲು ದುರಂತ

    ಅದಕ್ಕೆ ಕಾರಣವೂ ಇದೆ. ಆಮೀರ್​ಗೆ ಸಂಜು ಪಾತ್ರವನ್ನು ಮಾಡುವುದಕ್ಕೆ ಬಹಳ ಆಸೆ ಇತ್ತಂತೆ. ಆದರೆ, ಅಷ್ಟರಲ್ಲಾಗಲೇ ಆ ಪಾತ್ರ ರಣಬೀರ್​ ಅವರದ್ದಾಗಿತ್ತು. ಸುನೀಲ್​ ದತ್​ ಅವರ ಪಾತ್ರ ಮಾಡುವುದಕ್ಕೆ ಆಸೆ ಇದ್ದರೂ, ಮುಂದೆ ಬರೀ ಹಿರಿಯನ ಪಾತ್ರಕ್ಕೆ ಬ್ರಾಂಡ್​ ಆಗುವ ಭಯ ಅವರಿಗಿತ್ತಂತೆ. ಅಷ್ಟರಲ್ಲಾಗಲೇ, ‘ದಂಗಲ್​’ ಚಿತ್ರದಲ್ಲಿ ಇಬ್ಬರು ಹೆಣ್ಮಕ್ಕಳ ತಂದೆಯ ಪಾತ್ರದಲ್ಲಿ ಆಮೀರ್​ ನಟಿಸಿದ್ದರು. ಪುನಃ ‘ಸಂಜು’ ಚಿತ್ರದಲ್ಲೂ ತಂದೆಯ ಪಾತ್ರವನ್ನೇ ನಿರ್ವಹಿಸಿದರೆ, ಆ ತರಹದ ಪಾತ್ರಗಳಿಗೆ ಬ್ರಾಂಡ್​ ಆಗುವ ಭಯವಿದ್ದರಿಂದ ಆಮೀರ್​ ನಿರಾಕರಿಸಿದ್ದಾರೆ. ಆಮೀರ್​ ನೋ ಎಂದ ಮೇಲೆ, ಆ ಪಾತ್ರ ಪರೇಶ್​ ರಾವಲ್​ ಒಪ್ಪಿಕೊಂಡಿದ್ದರು. ಆ ಪಾತ್ರವು ಅವರಿಗೆ ಇನ್ನಷ್ಟು ಹೆಸರು ತಂದುಕೊಟ್ಟಿತ್ತು ಎನ್ನುವುದು ವಿಶೇಷ.

    ‘ಅವರು ದೊಡ್ಡವರು, ಕ್ಷಮಿಸಿಬಿಟ್ಟರು..’ ರಾಹುಲ್​ ಗಾಂಧಿ ವಿಚಾರದಲ್ಲಿ ತಾನು ಮಾಡಿದ ದೊಡ್ಡ ತಪ್ಪನ್ನು ಬಿಚ್ಚಿಟ್ಟ ರಮ್ಯಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts