More

    ಲಾಲ್​ ಸಿಂಗ್​ ಛಡ್ಡಾ ಶೂಟಿಂಗ್​ನಲ್ಲಿ ಆಮೀರ್ ಖಾನ್​ ಹೊಸ ಅವತಾರ

    ದೆಹಲಿ: ಆಮೀರ್ ಖಾನ್ ನಟಿಸುತ್ತಿರುವ ಲಾಲ್​ಸಿಂಗ್​ ಛಡ್ಡಾ ಸಿನಿಮಾ ಇದೀಗ ಮತ್ತೆ ಸುದ್ದಿಯಲ್ಲಿದೆ. ಕಳೆದ ಆರು ತಿಂಗಳಿಂದ ಶೂಟಿಂಗ್​ ಕೈಬಿಟ್ಟಿದ್ದ ತಂಡ, ಇದೀಗ ಮತ್ತೆ ಚಿತ್ರೀಕರಣಕ್ಕೆ ಚಾಲನೆ ನೀಡಿದೆ.

    ಇದನ್ನೂ ಓದಿ: ಡ್ಯಾನ್ಸ್ ಕ್ಲಾಸ್ ಉದ್ಘಾಟನೆಯಲ್ಲಷ್ಟೇ ಭಾಗವಹಿಸಿದ್ದು, ಡ್ರಗ್ಸ್ ಪಾರ್ಟಿಯಲ್ಲಲ್ಲ ಅಂದ್ರು ಅನುಶ್ರೀ

    ದೆಹಲಿಯಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಚಿತ್ರದ ನಾಯಕ ಆಮೀರ್​ ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಯಂಗ್​ ಅವತಾರದಲ್ಲಿ ಕಾಣಿಸಿಕೊಂಡಿರುವ ಅವರ ಕಿರು ವಿಡಿಯೋ ತುಣುಕೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಅಂದಹಾಗೆ, 1994ರಲ್ಲಿ ತೆರೆಕಂಡಿದ್ದ ಫಾರೆಸ್ಟ್ ಗಂಪ್​ ಚಿತ್ರದ ರಿಮೇಕ್​ ಇದಾಗಿದ್ದು, ಮೂಲ ಸಿನಿಮಾದಲ್ಲಿ ಟಾಮ್​ ಹಾಂಕ್ಸ್ ಮಾಡಿದ ಪಾತ್ರವನ್ನು ಹಿಂದಿಯಲ್ಲಿ ಆಮೀರ್​ ಖಾನ್ ಮಾಡುತ್ತಿದ್ದಾರೆ. ಆಮೀರ್​ ಜತೆಗೆ ಕರೀನಾ ಕಪೂರ್​ ಸಹ ಶೂಟಿಂಗ್​ನಲ್ಲಿ ಭಾಗಿಯಾಗಿದ್ದು, ಕಳೆದ ವಾರವೇ ದೆಹಲಿ ತಲುಪಿದ್ದಾರೆ.

    ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ವರ್ಷಾಂತ್ಯಕ್ಕೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಇದೀಗ 2021ರ ಕ್ರಿಸ್ಮಸ್​ಗೆ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಅದ್ವೈತ್​ ಚಂದನ್​ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ವಯಾಕಾಮ್​ 18 ಬಂಡವಾಳ ಹೂಡುತ್ತಿದೆ.

    ಇಂದು ವಿಶ್ವ ಪುತ್ರಿಯರ ದಿನ: ಬಾಳಿನ ಕಣ್ಣು ಹೆಣ್ಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts