More

    ‘ಆಡಿಸಿದಾತ’ನ ಕೈಚಳಕದಲಿ ಮೂಡಿ ಬಂತು ಟೀಸರ್​ …

    ಕಳೆದ ವರ್ಷ ಬಿಡುಗಡೆಯಾದ ‘ಅಮ್ಮನ ಮನೆ’ ಚಿತ್ರದ ನಂತರ, ನಟನೆಯನ್ನು ಮುಂದುವರೆಸಿದ್ದಾರೆ ರಾಘವೇಂದ್ರ ರಾಜಕುಮಾರ್​. ‘ಅಮ್ಮನ ಮನೆ’ ನಂತರ ‘ತ್ರಯಂಬಕಂ’, ‘ಪೊಗರು’, ‘ವಾರ್ಡ್​ ನಂಬರ್​ 11’, ‘ಆಡಿಸಿದಾತ’ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

    ಇದನ್ನೂ ಓದಿ: ಮಾಸ್​ ಅವತಾರದಲ್ಲಿ ಧೂಳೆಬ್ಬಿಸಲಿದ್ದಾರೆ ವಿಕ್ರಮ್​ ರವಿಚಂದ್ರನ್​…

    ಈ ಮಧ್ಯೆ, ‘ಆಡಿಸಿದಾತ’ ಚಿತ್ರವು ಅವರ 25ನೇ ಚಿತ್ರವಾಗಿ ಬಿಡಗುಡೆಯಾಗಲಿದೆ. ಈಗಾಗಲೇ ಚಿತ್ರದ ಕೆಲಸಗಳು ಬಹುತೇಕ ಮುಗಿದಿದ್ದು, ಬಹುಶಃ ಲಾಕ್​ಡೌನ್​ ಮತ್ತು ಕರೊನಾ ಹಾವಳಿ ಇಲ್ಲದೆ ಹೋದರೆ, ಚಿತ್ರ ಇಷ್ಟರಲ್ಲಿ ಬಿಡುಗಡೆಯಾಗಿರಬೇಕಿತ್ತು.

    ಈಗ ‘ಆಡಿಸಿದಾತ’ ಚಿತ್ರದ ಟೀಸರ್​ನ್ನು ಪುನೀತ್​ ರಾಜಕುಮಾರ್ ಇತ್ತೀಚೆಗೆಗೆ ಬಿಡುಗಡೆ ಮಾಡಿದ್ದಾರೆ. ವಿ. ಹರಿಕೃಷ್ಣ ಅವರ ಡಿ ಬೀಟ್ಸ್ ಮ್ಯೂಸಿಕ್ ವರ್ಲ್ಡ್​ ಸಂಸ್ಥೆ ಮೂಲಕ ಚಿತ್ರದ ಟೀಸರ್ ಲೋಕಾರ್ಪಣೆಯಾಗಿದೆ.

    ಇದನ್ನೂ ಓದಿ‘ಮಿಸ್​ ಇಂಡಿಯಾ’ ಚಿತ್ರದ ಓಟಿಟಿ ರೈಟ್ಸ್​ ಎಷ್ಟಕ್ಕೆ ಮಾರಾಟವಾಯ್ತು ಹೇಳಿ?

    ‘ಆಡಿಸಿದಾತ’ ಚಿತ್ರದ ಟೀಸರ್ ವೀಕ್ಷಿಸಿದ ಪುನೀತ್ ರಾಜಕುಮಾರ್, ‘ಟೀಸರ್ ತುಂಬಾ ಚೆನ್ನಾಗಿದೆ’ ಎಂದು ಹೇಳಿದ್ದಷ್ಟೇ ಅಲ್ಲ, ಚಿತ್ರ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಹಾರೈಸಿದ್ದಾರೆ.

    ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ ಫಣೀಶ್​ ಭಾರದ್ವಾಜ್​. ಚಿತ್ರಕ್ಕೆ ಮಣಿಕಾಂತ್​ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದು, ಆನಂದ್​ ಇಳಯರಾಜ ಛಾಯಾಗ್ರಹಣ ಮಾಡಿದ್ದಾರೆ.

    ಸಮೀರಾ ರೆಡ್ಡಿ ಯಾಕೆ ಬಾಲಿವುಡ್​ನಲ್ಲಿ ಮಿಂಚಲಿಲ್ಲ? ಕಾರಣ ಹೇಳ್ತಾರೆ ಕೇಳಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts