More

    ಮದುವೆಯ ಆಮಂತ್ರಣದಲ್ಲೂ ಆಧಾರ್ ಜಾಗೃತಿ; ಹೇಗಿದೆ ನೋಡಿ ಕರೆಯೋಲೆ!

    ಬೆಳಗಾವಿ: ದೇಶಾದ್ಯಂತ ಪ್ರತಿಯೊಬ್ಬರೂ ದಿನನಿತ್ಯದ ಅನೇಕ ಸೌಲಭ್ಯಗಳಿಗಾಗಿ ಆಧಾರ ಕಾರ್ಡ್‌ ಬಳಸುತ್ತಿದ್ದಾರೆ. ಅಲ್ಲದೆ ಆಧಾರ ಕಾರ್ಡ್ ಮೂಲಕ ತಮ್ಮ ತಮ್ಮ ಬ್ಯಾಂಕಿಂಗ್​ ಮತ್ತಿತರ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳುತ್ತಿದ್ದಾರೆ.

    ಇಂತಹ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಗರನಾಳ ಗ್ರಾಮದಲ್ಲಿನ ವಧು-ವರರು ಮದುವೆಯ ಆಮಂತ್ರಣ ಪತ್ರಿಕೆಯನ್ನೇ ಆಧಾರ ಕಾರ್ಡ್ ಮಾದರಿಯಲ್ಲಿ ಮುದ್ರಣ ಮಾಡಿಸಿದ್ದಾರೆ. ಇಷ್ಟು ದಿನ ಫೇಸ್ಬುಕ್-ವಾಟ್ಸ್ಆಪ್ ಮಾದರಿಯಲ್ಲಿ ಕಾಣಿಸಿಕೊಂಡಿದ್ದ ಆಮಂತ್ರಣ ಪ್ರತಿಕೆ ಈಗ ಆಧಾರ ಕಾರ್ಡ್ ರೂಪದಲ್ಲಿ ಕಂಡಿದ್ದು ವಿಶೇಷ.

    ಆಧಾರ ನೋಂದಣಿ ಕುರಿತು ಜಾಗೃತಿ ಮೂಡಿಸಲು ಯುಡಿಐ ಆಯೋಗ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಬೆಳಗಾವಿಯ ಜೋಡಿ ತಮ್ಮ ಮದುವೆಯ ಮೂಲಕವೂ ಆಧಾರ ಕಾರ್ಡ್ ನೋಂದಣಿ ಮಾಡಿಸುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದು, ಇದಕ್ಕಾಗಿ ವಿಭಿನ್ನವಾಗಿ ಮದುವೆಯ ಆಮಂತ್ರಣ ಪತ್ರಿಕೆಯನ್ನೇ ಆಧಾರ ಕಾರ್ಡ್​​ನಂತೆ ವಿನ್ಯಾಸ ಮಾಡಿರುವುದು ವಿಶೇಷ.

    ಬಸಯ್ಯ ಪವಿತ್ರಾ ಮತ್ತು ಈಶ್ವರಯ್ಯ ಕಾವೇರಿ ಜೋಡಿಯು ಇದೇ ಏ.21ರಂದು ಹಸೆಮಣೆ ಏರಲಿದ್ದು, ತಮ್ಮ ವಿವಾಹದ ಮೂಲಕ ಆಧಾರ್ ಕಾರ್ಡ್ ಮಾಡಿಸುವ ಮೂಲಕ ಆಗುವ ಉಪಯೋಗಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ.

    ಆಹ್ವಾನ ಪತ್ರಿಕೆ ಹೀಗಿದೆ: ಆಧಾರ ಕಾರ್ಡ್ ಮಾದರಿಯ ಆಮಂತ್ರಣ ಪತ್ರಿಕೆಯಲ್ಲಿ ಭಾರತ ಸರ್ಕಾರದ ಹೆಸರಿನ ಬದಲಿಗೆ ’ಮದುವೆಯ ಮಮತೆಯ ಕರೆಯೋಲೆ’ ಎಂಬ ಬರಹ ಹಾಕಿದ್ದಾರೆ. ಆಧಾರ ಕಾರ್ಡ್ ನಂಬರ್ ಜಾಗದಲ್ಲಿ ’ವಧುವಿನ ಮೊಬೈಲ್ ನಂಬರ್ +917892178184 ಎಂದು ಹಾಕಿದ್ದು ವಿಶೇಷ.
    ಭಿನ್ನವಾಗಿದೆ: ಆಧಾರ ನೋಂದಣಿದಾರರ ಹೆಸರು ಬರುವ ಸ್ಥಳದಲ್ಲಿ ದಂಪತಿಗಳ ಹೆಸರು ಎಂದು ಹಾಕಿ ಚಿ.ಬಸಯ್ಯ ಮತ್ತು ಚಿ.ಕು.ಸೌ.ಪವಿತ್ರಾ ಎಂದು ಮುದ್ರಿಸಿದ್ದಾರೆ. ಜನ್ಮ ದಿನಾಂಕದ ಬದಲಿಗೆ ಮದುವೆ ದಿನಾಂಕ ಎಂದು ಹಾಕಿದ್ದಾರೆ. 27-4-2022, ಜೊತೆಗೆ ಧಾರೆ ಮುಹೂರ್ತ ಸಮಯ 12.28 ನಮೂದಿಸಿದ್ದಾರೆ.

    ಆಗಮನ: ನಂತರದಲ್ಲಿ ಮದುವೆ ನಡೆಯುವ ಸ್ಥಳ ಹಾಗೂ ಕುಟುಂಬದ ಹೆಸರು ಮತ್ತು ತಮ್ಮ ಆಗಮನಾಭಿಲಾಷಿಗಳು ಎಂದು ನಮೂದಿಸಿದ್ದಾರೆ. ಮತ್ತೆ ಮದುವೆಗೆ ಎಲ್ಲರೂ ಬನ್ನಿ ಎಂದು ಆಹ್ವಾನ ನೀಡಿದ್ದಾರೆ.

    ಸಂದೇಶ: ಇದಲ್ಲದೇ ಆಧಾರ ನೋಂದಣಿ ಮಾಡಿಸಲು ಕರೆ ನೀಡಿದ್ದು, ಆಧಾರ ಕಾರ್ಡ್​ನಿಂದಾಗುವ ಉಪಯೋಗಗಳ ಬಗ್ಗೆ ತಿಳಿಸಿದ್ದಾರೆ. ಮದುವೆಗೆ ತಪ್ಪದೇ ಬನ್ನಿ, ತಪ್ಪದೆ ಆಧಾರ ನೋಂದಣಿ ಮಾಡಿಸಿ ಎಂದು ಹೇಳಿದ್ದಾರೆ.

    ಮದುವೆಯ ಆಮಂತ್ರಣದಲ್ಲೂ ಆಧಾರ್ ಜಾಗೃತಿ; ಹೇಗಿದೆ ನೋಡಿ ಕರೆಯೋಲೆ!
    ಆಧಾರ್ ಕಾರ್ಡ್ ರೀತಿ ವಿನ್ಯಾಸ ಮಾಡಿಸಿರುವ ಮದುವೆ ಆಮಂತ್ರಣ ಪತ್ರ

    ಪೊಲೀಸರ ಸಮ್ಮುಖದಲ್ಲೇ ಪ್ರೇಮಿಗಳನ್ನು ಬೇರೆ ಮಾಡಿದ ಸಂಬಂಧಿಕರು: ಮದ್ವೆಯಾಗಿದ್ರೂ ಬಿಡಲಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts