More

    ಇನ್ನೊಂದು ತೆಲುಗು ಚಿತ್ರದಲ್ಲಿ ‘ಆ ದಿನಗಳು’ ಚೇತನ್ …

    ಹೈದರಾಬಾದ್​: ಇಂದು ‘ಆ ದಿನಗಳು’ ಖ್ಯಾತಿಯ ಚೇತನ್​ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಹೊಸ ಚಿತ್ರವೊಂದು ಸೆಟ್ಟೇರಿದೆ. ಅದೇ ‘ಡಿಟಿಎಸ್​’.

    ಚಿತ್ರಮಂದಿರಗಳಲ್ಲಿ ಡಿಟಿಎಸ್ ಎಂಬ ಪದ ಕೇಳಿರುವುದರಿಂದ, ಚಿತ್ರ ಸಹ ಇದೇ ವಿಷಯದ ಕುರಿತದ್ದಾಗಿರಬಹುದು ಎಂದನಿಸಬಹುದು. ಹಾಗೇನಿಲ್ಲ. ಇದೊಂದು ಪಕ್ಕಾ ಆಕ್ಷನ್​ ಚಿತ್ರವಾಗಿದ್ದು, ಡಿಟಿಎಸ್ ಎಂದರೆ ‘ಡೇರ್ ಟು ಸ್ಲೀಪ್​’ ಎಂಬುದು ಇದರರ್ಥ.

    ಇದನ್ನೂ ಓದಿ: ಪೊಗರು ಸಿನಿಮಾ ವಿವಾದ ಸುಖಾಂತ್ಯದ ಬಳಿಕ ಲಿಖಿತ ರೂಪದಲ್ಲಿ ಕ್ಷಮೆ ಕೇಳಿದ ಧ್ರುವ ಸರ್ಜಾ

    ಈಗಾಗಲೇ ಚೇತನ್​ ಅಭಿನಯದ ‘ಹಂಡ್ರೆಡ್​ CRORES’ ಸಿನಿಮಾ ನಿರ್ಮಾಣ ಮಾಡಿದ್ದ ತಂಡವೇ ‘ಡಿಟಿಎಸ್’ ಚಿತ್ರವನ್ನೂ ನಿರ್ಮಾಣ ಮಾಡುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಈ ಚಿತ್ರ ನಿರ್ಮಾಣವಾಗುತ್ತಿದೆ.

    ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕ ಸಾಯಿಕಾರ್ತಿಕ್ ಮತ್ತು ಶ್ರೀಕಾಂತ್ ದೀಪಾಲ ‘ಡಿಟಿಎಸ್’ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಅಭಿರಾಮ್ ಫಿಲ್ಲ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಚೇತನ್​ ಜತೆಗೆ ತೆಲುಗಿನ ಖ್ಯಾತ ಹಾಸ್ಯ ನಟ ಸುನೀಲ್​, ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸುನೀಲ್​ ಖಡಕ್ ಪೊಲೀಸ್ ಅಧಿಕಾರಿಯಾದರೆ, ಚೇತನ್​ ಅಷ್ಟೇ ಪ್ರಧಾನವಾದ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ. ನಾಲ್ಕು ಸಾಹಸ ದೃಶ್ಯಗಳಿರುವ ಈ ಸಿನಿಮಾದ ಬಹುತೇಕ ಶೂಟಿಂಗ್​ ದುಬೈ, ಥಾಯ್ಲೆಂಡ್​ ಸೇರಿ ಹಲವೆಡೆ ನಡೆಯಲಿದೆ. ಬೆಂಗಳೂರು ಮತ್ತು ಹೈದರಬಾದ್​ನಲ್ಲಿಯೂ ನಡೆಯಲಿದೆ.

    ಇದನ್ನೂ ಓದಿ: ಅಂದು ಪೊಲೀಸರು ಅವನನ್ನ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರು, ಆಗ ಸಹಾಯಕ್ಕೆ ನಾನೇ ಬಂದೆ… ಇದನ್ನ ದರ್ಶನ್​ ನೆನೆಯಲಿ

    ಇನ್ನು, ಈ ಚಿತ್ರಕ್ಕೆ ಬಾಲಿವುಡ್​ ನಟಿಯರನ್ನು ಚಿತ್ರತಂಡ ಕರೆತಂದಿದೆ. ಡೋನಲ್ ಮತ್ತು ನತಾಶಾ ನಾಯಕಿಯರಾಗಿ ನಟಿಸುತ್ತಿದ್ದು, ಈಗಾಗಲೇ ಇವರೂ ಸಹ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ.

    ಇನ್ನುಳಿದಂತೆ ಕಬೀರ್ ಸಿಂಗ್, ಕೃಷ್ಣ ಮುರಳಿ, ಚರಣ್, ಶಕಲಕಾ ಶಂಕರ್, ಚಿತ್ರಂ ಶ್ರೀನು, ಗೆಟಪ್​ ಸೀನು, ರವಿ ವರ್ಮಾ, ರಕೇಂದು ಮೌಳಿ ತಾರಾಗಣದಲ್ಲಿದ್ದಾರೆ. ಸಾಯಿ ಕಾರ್ತಿಕ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

    ಅಭಿಮಾನಿಗಳ ವರ್ತನೆಗೆ ಕ್ಷಮೆ ಕೋರಿದ ‘ಡಿ ಬಾಸ್​’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts