More

    ಸ್ನೇಹಿತೆಯ ಫೋಟೋವನ್ನೇ ಅಶ್ಲೀಲಗೊಳಿಸಿ, ಮಾಜಿ ಬಾಯ್​ಫ್ರೆಂಡ್​ ಹೆಸರಿನಲ್ಲಿ ಹಣ ಪೀಕಿದ​ ಯುವತಿ

    ಬೆಂಗಳೂರು: ಸ್ನೇಹಿತರು ಪ್ರಾಣಕ್ಕೆ ಪ್ರಾಣ ಕೊಡುತ್ತಾರೆ ಎನ್ನುತ್ತಾರೆ. ಆದರೆ ಕೆಲವು ಸ್ನೇಹಿತರು ಪ್ರಾಣ ತೆಗೆಯುವಂತವರೂ ಇರುತ್ತಾರೆ. ಇಲ್ಲೊಬ್ಬ ಯುವತಿ ತನ್ನ ಸ್ನೇಹಿತೆಯ ಮಾಜಿ ಬಾಯ್​ಫ್ರೆಂಡ್​ ಹೆಸರಿನಲ್ಲಿ ಸ್ನೇಹಿತೆಗೇ ಮೋಸ ಮಾಡಿ ಹಣ ಪೀಕಿದ್ದಾಳೆ.

    ಬೆಂಗಳೂರಿನಲ್ಲಿ ತನ್ನ ಗಂಡನ ಜತೆ ಸುಖಸಂಸಾರ ನಡೆಸುತ್ತಿರುವ ಮಹಿಳೆಯೊಬ್ಬಳು ಮದುವೆಗೂ ಮೊದಲು ಯುವಕನೊಬ್ಬನನ್ನು ಪ್ರೀತಿಸಿದ್ದಳು. ಈ ವಿಚಾರ ತಿಳಿದಿದ್ದ ಆಕೆಯ ಸ್ನೇಹಿತೆ ಅರ್ಪಣಾ, ಹಣಕ್ಕಾಗಿ ಒಂದು ಮಾಸ್ಟರ್​ ಪ್ಲಾನ್​ ಮಾಡಿದ್ದಾಳೆ. ಎರಡು ವರ್ಷಗಳ ಹಿಂದೆ ತನ್ನ ಸ್ನೇಹಿತೆಗೆ ಅನ್​ನೌನ್​ ನಂಬರ್​ನಿಂದ ಮಾಜಿ ಬಾಯ್​ಫ್ರೆಂಡ್​ ಹೆಸರಿನಲ್ಲಿ ಮೆಸೇಜ್​ ಮಾಡಿದ್ದಾಳೆ. ಅದಾಗಲೇ ಮದುವೆಯಾಗಿದ್ದ ಆಕೆ ಹೆಚ್ಚು ತಲೆ ಕೆಡಿಸಿಕೊಳ್ಳದೆ, ಮಾಮೂಲಿ ಮಾತನ್ನಾಡಿದ್ದಾಳೆ. ಇದಾದ ಕೆಲ ದಿನಗಳ ಬಳಿಕ ಅರ್ಪಣಾ ಆಕೆಗೆ ಮೆಸೇಜ್​ ಮಾಡಿದ್ದಾಳೆ. ‘ನೀನು ನಿನ್ನ ಮಾಜಿ ಬಾಯ್​ಫ್ರೆಂಡ್​ ಜತೆ ಮಾತಾಡುತ್ತಿದ್ದೀಯಾ? ನಾನು ಕೂಡ ಅವನನ್ನು ಪ್ರೀತಿಸಿದ್ದೆ’ ಎಂದು ಹೇಳಿ ತಮ್ಮ ಸ್ನೇಹವನ್ನು ಗಟ್ಟಿ ಮಾಡಿಕೊಂಡಿದ್ದಾಳೆ.

    ಇದನ್ನೂ ಓದಿ: ಅರ್ಜುನ್​ ಟ್ಯಾಂಕ್​ನಲ್ಲಿ ಪ್ರಧಾನಿ ಸವಾರಿ – ಸುಧಾರಿತ ಸ್ವದೇಶಿ ಟ್ಯಾಂಕ್​ ಆರ್ಡರ್​ ನಿರೀಕ್ಷೆಯಲ್ಲಿದೆ ಡಿಆರ್​ಡಿಒ

    ಇದೆಲ್ಲ ಹೀಗೆ ನಡೆಯುತ್ತಿರುವಾಗ ಅರ್ಪಣಾ, ತನ್ನ ಸ್ನೇಹಿತೆಗೆ ಆಕೆಯ ಬಾಯ್​ಫ್ರೆಂಡ್​ ಹೆಸರಿನಲ್ಲಿ ಬ್ಲಾಕ್​ಮೇಲ್​ ಮಾಡಲು ಆರಂಭಿಸಿದ್ದಾಳೆ. ನಿನ್ನ ಖಾಸಗಿ ಫೋಟೋಗಳು ನನ್ನ ಬಳಿ ಇವೆ. ನನಗೆ ಹಣ ಕೊಡು. ಇಲ್ಲದಿದ್ದರೆ ಈ ಫೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಾಕಿಬಿಡುತ್ತೇನೆ. ನಿನ್ನ ಗಂಡ, ಅಪ್ಪ ಅಮ್ಮನಿಗೂ ಕಳುಹಿಸಿಕೊಡುತ್ತೇನೆ ಎಂದು ಹೆದರಿಸಿದ್ದಾಳೆ. ನನಗೆ ಕೊಡಬೇಕಾದ ಹಣವನ್ನು ನಿನ್ನ ಸ್ನೇಹಿತೆ ಅರ್ಪಣಾ ಅಕೌಂಟ್​ಗೆ ಹಾಕು ಎಂದೂ ಹೇಳಿದ್ದಾಳೆ. ಯಾವುದೋ ಅಶ್ಲೀಲ ಫೋಟೋಗಳಿಗೆ ಸ್ನೇಹಿತೆಯ ಫೋಟೋವನ್ನು ಎಡಿಟ್​ ಮಾಡಿ ಅವಳಿಗೆ ಕಳುಹಿಸಿಕೊಟ್ಟಿದ್ದಾಳೆ ಕೂಡ.

    ಇದನ್ನೂ ಓದಿ: ಸಿಡ್ನಿ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ ಆಟಗಾರರು

    ತನ್ನ ಹಳೆಯ ಬಾಯ್​ಫ್ರೆಂಡ್​ ಬಳಿ ನನ್ನ ಖಾಸಗಿ ಫೋಟೊಗಳಿವೆ ಎಂದು ಹೆದರಿದ ಮಹಿಳೆ, ಅರ್ಪಣಾ ಬ್ಯಾಂಕ್​ ಖಾತೆಗೆ ಹಣ ಹಾಕಿದ್ದಾಳೆ. ಇದೇ ರೀತಿಯಲ್ಲಿ ಎರಡು ವರ್ಷಗಳ ಕಾಲ ಬ್ಲಾಕ್​ಮೇಲ್​ ಮಾಡಿದ್ದು, 1.25 ಕೋಟಿ ರೂಪಾಯಿ ಹಣವನ್ನು ಅಪರ್ಣಾ ಖಾತೆಗೆ ವರ್ಗಾಯಿಸಿಕೊಳ್ಳಲಾಗಿದೆ. ಆದರೆ ಇತ್ತೀಚೆಗೆ ಮತ್ತೊಮ್ಮೆ 15 ಲಕ್ಷ ಹಾಕುವಂತೆ ಕೇಳಿ ಮೆಸೇಜ್​ ಮಾಡಿದ್ದಾಗ, ಮಹಿಳೆ ಖಿನ್ನತೆಗೆ ತೆರಳಿದ್ದಾಳೆ.

    ತನ್ನ ಪತ್ನಿಗೆ ಆಗುತ್ತಿರುವ ಮೋಸದ ಬಗ್ಗೆ ಆಕೆಯಿಂದ ಮಾಹಿತಿ ಪಡೆದ ಪತಿ ಪೊಲೀಸ್​ ದೂರು ನೀಡಿದ್ದಾನೆ. ವೈಟ್​ ಫೀಲ್ಡ್​ನ ಪೊಲೀಸ್​ ಅಧಿಕಾರಿಗಳು ತನಿಖೆ ನಡೆಸಿದಾಗ ಅರ್ಪಣಾಳ ನಿಜ ರೂಪ ಬಯಲಾಗಿದೆ. (ದಿಗ್ವಿಜಯ ನ್ಯೂಸ್​)

    15 ವರ್ಷದ ಹಿಂದೆ ಕಾಣೆಯಾಗಿದ್ದ ಪೊಲೀಸ್​ ಅಧಿಕಾರಿ ಭಿಕ್ಷುಕನಾಗಿ ರಸ್ತೆಯಲ್ಲಿ ಸಿಕ್ಕಿದ

    ಅಪ್ಪನನ್ನು ಅರೆಸ್ಟ್ ಮಾಡಬೇಡಿ ಪೊಲೀಸ್​ ಗಾಡಿಗೇ ತಲೆ ಚಚ್ಚಿಕೊಂಡ ಮಗಳು; ಮಗಳ ಪ್ರೀತಿಗೆ ಕರಗಿದ ಸಿಎಂ ಯೋಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts