More

    ತೃತೀಯ ಲಿಂಗಿಯಾಗಿ ಬದಲಾಗಿದ್ದಕ್ಕೆ ವೈದ್ಯ ಕೆಲಸವನ್ನೇ ಕಳೆದುಕೊಂಡು, ಭಿಕ್ಷೆ ಬೇಡಿದ ಮಹಿಳೆ; ಆಸ್ಪತ್ರೆ ನಿರ್ಮಿಸಿಕೊಡಲು ಮುಂದಾದ ಪೊಲೀಸರು

    ಮಧುರೈ: ನಮ್ಮ ಸಮಾಜದಲ್ಲಿ ತೃತೀಯ ಲಿಂಗಿಯರಿಗೆ ಕಾನೂನಾತ್ಮಕವಾಗಿ ಸ್ಥಾನಮಾನವಿದೆಯಾದರೂ ಸಾಮಾಜಿಕವಾಗಿ ನಾವು ಅವರನ್ನು ನೋಡುವ ಬಗೆಯೇ ಬೇರೆ. ಅದೇ ಕಾರಣಕ್ಕೆ ಇಂದಿಗೂ ಸಾವಿರಾರು ತೃತೀಯ ಲಿಂಗಿಯರು ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹುಡುಗನಾಗಿ ಹುಟ್ಟಿ ವೈದ್ಯಕೀಯ ಪದವಿ ಪಡೆದು, ವೈದ್ಯನಾಗಿ ಸೇವೆ ಸಲ್ಲಿಸುವಾಗ ತೃತೀಯ ಲಿಂಗಿಯಾಗಿ ಬದಲಾಗಿದ್ದಕ್ಕೆ ಕೆಲಸವನ್ನೇ ಕಳೆದುಕೊಂಡ ವ್ಯಕ್ತಿಯೊಬ್ಬರು ಇದೀಗ ಪೊಲೀಸ್​ ಇಲಾಖೆಯ ದಯೆಯಿಂದ ಮತ್ತೊಮ್ಮೆ ವೈದ್ಯೆಯಾಗಿ ಸೇವೆ ಸಲ್ಲಿಸಲು ಅವಕಾಶ ಪಡೆದಿದ್ದಾರೆ.

    ಇದನ್ನೂ ಓದಿ: ಓರ್ವ ಯುವತಿಯಿಂದಾಗಿ ಒಬ್ಬನ ಕೊಲೆ, ಓರ್ವನ ಸೆರೆ, ಇನ್ನಿಬ್ಬರು ನಾಪತ್ತೆ

    ಮಧುರೈ ಮೂಲದ ಆತ ಹುಡುಗನಾಗಿಯೇ ಹುಟ್ಟಿದ್ದ. 2018ರಲ್ಲಿ ವೈದ್ಯಕೀಯ ಪದವಿ ಪಡೆಯುವ ಸಮಯದಲ್ಲೂ ಆತನಲ್ಲಿ ಮಹತ್ತರ ಬದಲಾವಣೆಯೇನು ಆಗಿರಲಿಲ್ಲ. ಆದರೆ ಒಂದು ವರ್ಷ ವೈದ್ಯಕೀಯ ವಲಯದಲ್ಲಿ ಸೇವೆ ಸಲ್ಲಿಸುವಷ್ಟರಲ್ಲಿ ಆತನಲ್ಲಿ ಸಾಕಷ್ಟು ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗಿವೆ. ಅದೇ ಹಿನ್ನೆಲೆಯಲ್ಲಿ ಆತ ಲಿಂಗ ಬದಲಾವಣೆ ಆಪರೇಷನ್​ ಮಾಡಿಸಿಕೊಂಡಿದ್ದು, ಮಹಿಳೆಯಾಗಿ ಬದಲಾಗಿದ್ದಾನೆ. ಆದರೆ ಅದನ್ನು ಅಪರಾಧವೆನ್ನುವಂತೆ ನೋಡಿದ ಆಸ್ಪತ್ರೆ ಆಕೆಯನ್ನು ಕೆಲಸದಿಂದ ತೆಗೆದುಹಾಕಿದೆ.

    ಇದನ್ನೂ ಓದಿ: ಗೋಮಾತಾ ಉಲರ್ಥ್​ ಮಾಡಿ ಸವಿದಿದ್ದ ಕೇರಳ ಯುವತಿಗೆ ಎದುರಾಯ್ತು ಸಂಕಷ್ಟ

    ಲಾಕ್​ಡೌನ್​ ಸಮಯದಲ್ಲಿ ಊಟಕ್ಕೂ ಗತಿ ಇಲ್ಲದ ಕಾರಣ ಆಕೆ ಭಿಕ್ಷಾಟನೆ ಆರಂಭಿಸಿದ್ದಾಳೆ. ತನ್ನಂತಿದ್ದ ಅನೇಕರ ಗುಂಪನ್ನು ಸೇರಿಕೊಂಡು ಅವರೊಡನೆ ಪ್ರತಿದಿನ ಭಿಕ್ಷಾಟನೆ ಮಾಡಿದ್ದಾಳೆ. ಇತ್ತೀಚೆಗೆ ಮಧುರೈನಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ತೃತೀಯ ಲಿಂಗಿಯರನ್ನು ಬಂಧಿಸಲಾಗಿದ್ದು, ಆ ಸಮಯದಲ್ಲಿ ಆಕೆಯ ವಿಚಾರ ಮಧುರೈ ಪೊಲೀಸರಿಗೆ ತಿಳಿದುಬಂದಿದೆ. ಆಕೆಯ ಬಗ್ಗೆ ದೃಢೀಕರಣ ಪಡೆದ ನಂತರ ಇಲಾಖೆಯ ವತಿಯಿಂದ ಕ್ಲಿನಿಕ್​ ಒಂದನ್ನು ತೆರೆದುಕೊಡುವುದಾಗಿ ತಿಳಿಸಲಾಗಿದೆ. ಅದರೆ ಅದಕ್ಕೂ ಮೊದಲು ಆಕೆಯ ಹೆಸರು ಬದಲಾವಣೆಯಿಂದ ಹಿಡಿದು, ವೈದ್ಯಕೀಯ ಪದವಿ ಪತ್ರದವರೆಗೆ ಪ್ರತಿಯೊಂದರಲ್ಲೂ ಆಕೆಯನ್ನು ಗಂಡಿನ ಬದಲು ಹೆಣ್ಣಾಗಿ ಬದಲಾಯಿಸಬೇಕಿದೆ. ಈ ಬದಲಾವಣೆಗೆ ಮೆಡಿಕಲ್​ ಕೌನ್ಸಿಲ್​ ಆಫ್​ ಇಂಡಿಯಾ ಅನುಮತಿ ಕೊಟ್ಟಿದೆ. (ಏಜೆನ್ಸೀಸ್​)

    ಮಾಟ ಮಂತ್ರ ಮಾಡಿದ್ದಾನೆಂದು ಶಂಕಿಸಿ, ಟೆಕ್ಕಿಯನ್ನು ಜೀವಂತ ದಹನ ಮಾಡಿದ ಸಂಬಂಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts