More

    ಅಂಬೆಗಾಲಿಡುವ ಮಗನ ಬಯೋಡೇಟಾ ಹಿಡಿದುಕೊಂಡು ಸಂದರ್ಶನಕ್ಕೆ ಹೋದ ಅಮ್ಮ; ಅಂಥದ್ದೇನಿತ್ತು ಅದರಲ್ಲಿ!?

    ನವದೆಹಲಿ: ದೊಡ್ಡವರಿಂದಾಗಿ ಚಿಕ್ಕವರಿಗೆ ಉದ್ಯೋಗಾವಕಾಶ ಸಿಗುವುದನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ ಇಲ್ಲೊಂದು ಕಡೆ ಅಂಬೆಗಾಲಿಡುವ ಮಗನಿಂದಾಗಿ ಅಮ್ಮನಿಗೆ ಜಾಬ್​ ಆಫರ್ ಸಿಕ್ಕಿದೆ ಎಂದರೂ ಅಚ್ಚರಿ ಏನಲ್ಲ. ಏಕೆಂದರೆ ಇಲ್ಲೊಬ್ಬಳು ಮಹಿಳೆ ತಾನು ಸಂದರ್ಶನಕ್ಕೆ ಹೋಗುವಾಗ ಪುಟ್ಟಪೋರನನ್ನೂ ತನ್ನೊಂದಿಗೆ ಕರೆದೊಯ್ದಿದ್ದು, ಆತನ ಬಯೋಡೇಟಾ ಉದ್ಯೋಗದಾತರ ಗಮನ ಸೆಳೆದಿದ್ದಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಮೆಚ್ಚುಗೆಗೂ ಪಾತ್ರವಾಗಿದೆ.

    ಯುಎಸ್​ನ ಸೇಂಟ್​ ಲೂಯಿಸ್​ನ ಮ್ಯಾಗೀ ಎಂಬಾಕೆ ಕರೊನಾ ಸಾಂಕ್ರಾಮಿಕ ಪಿಡುಗಿನಿಂದಾಗಿ ಉದ್ಯೋಗ ಕಳೆದುಕೊಂಡಿದ್ದು, ಇನ್ನೊಂದೆಡೆಗೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದಳು. ಆದರೆ ಅಲ್ಲಿಂದ ಸಂದರ್ಶನಕ್ಕಾಗಿ ಕರೆ ಬಂದಾಗ, ಅಂಬೆಗಾಲಿಡುವ ಮಗನನ್ನು ಮನೆಯಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲದಿದ್ದಾಗ, ಆತನನ್ನೂ ಇಂಟರ್​ವ್ಯೂಗೆ ಕರೆದೊಯ್ದಿದ್ದಾಳೆ.

    ಇದನ್ನೂ ಓದಿ: ನೀವು ಡುಮ್ಮಗಿದ್ದೀರಾ?; ಹಾಗಿದ್ದರೆ ಇದನ್ನು ಬಾಯಲ್ಲಿಟ್ಟುಕೊಂಡರೆ ಸಾಕು, ಸಣ್ಣಗಾಗುತ್ತೀರಿ..!

    ವಿಶೇಷ ಎಂದರೆ, ಪುಟ್ಟ ಮಗನನ್ನೂ ಉದ್ಯೋಗಾಕಾಂಕ್ಷಿಯ ಥರ ಡ್ರೆಸ್​ ಮಾಡಿಸಿಕೊಂಡಿದ್ದಲ್ಲದೆ, ಆತನ ಕೈಯಲ್ಲೇ ಅವನ ಕುರಿತ ಒಂದು ಬಯೋಡೇಟಾ ಕೊಟ್ಟುಕೊಂಡು ಕರೆದೊಯ್ದಿದ್ದಾಳೆ. ಕೆಲಸಕ್ಕಾಗಿ ಅಲ್ಲ, ಆದರೆ ಸ್ನ್ಯಾಕ್ಸ್ ಎಲ್ಲ ಖಾಲಿ ಮಾಡಲು.. ಎಂದು ಆರಂಭವಾಗಿರುವ ಈ ರೆಸ್ಯೂಮ್​ನಲ್ಲಿ, ನೀಟಾಗಿರುವ ಸ್ಥಳವನ್ನು 30 ಸೆಕೆಂಡ್​ನಲ್ಲಿ ಕೆಡಿಸಿಬಿಡುತ್ತೇನೆ. ಡಯಾಪರನ್ನೂ ಸ್ವತಃ ತೆಗೆಯುತ್ತೇನೆ, ಬಾಲನ್ನು ಎಸೆಯಬಲ್ಲೆ, ನಾಯಿಯನ್ನು ದೂರದಿಂದಲೇ ಗುರುತಿಸಬಲ್ಲೆ ಎಂಬೆಲ್ಲ ಕೌಶಲ ಇದೆ ಎಂಬುದನ್ನು ಹೇಳಲಾಗಿದೆ. ಅಂದಹಾಗೆ ಈತನಿಗೆ ಅನುಭವವಿಲ್ಲ, ಇನ್ನೂ ಮಾಮ್​ ಆ್ಯಂಡ್​ ಡ್ಯಾಡ್ ಯುನಿವರ್ಸಿಟಿಯಲ್ಲಿ ಕಲಿಯುತ್ತಿದ್ದಾನೆ ಎಂದೂ ಇದರಲ್ಲಿ ಬರೆಯಲಾಗಿದೆ. ಹೀಗೆ ತನ್ನೊಂದಿಗೆ ಮಗನನ್ನೂ ಇಂಟರ್​ವ್ಯೂಗೆ ಕರೆದೊಯ್ಯಲು ಸಜ್ಜುಗೊಳಿಸುತ್ತಿರುವ ವಿಡಿಯೋವೊಂದನ್ನು ಈಕೆ ಹಂಚಿಕೊಂಡಿದ್ದಾಳೆ. ಇದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಗಮನ ಸೆಳೆದಿದ್ದು, ವೈರಲ್ ಆಗಿದೆ. ಜತೆಗೆ ಜಾಬ್​ ಆಫರ್ ಸಿಕ್ಕಿದೆ ಎಂಬುದನ್ನೂ ಕೂಡ ಆಕೆ ಹೇಳಿಕೊಂಡಿದ್ದಾಳೆ. (ಏಜೆನ್ಸೀಸ್​)

    ಅಂಬೆಗಾಲಿಡುವ ಮಗನ ಬಯೋಡೇಟಾ ಹಿಡಿದುಕೊಂಡು ಸಂದರ್ಶನಕ್ಕೆ ಹೋದ ಅಮ್ಮ; ಅಂಥದ್ದೇನಿತ್ತು ಅದರಲ್ಲಿ!?

    ಮನೆಯೊಳಗೇ ಮಕ್ಕಳಿಬ್ಬರ ಅನುಮಾನಾಸ್ಪದ ಸಾವು!: ಹದಿಹರೆಯದ ಪುತ್ರ-ಪುತ್ರಿ ಇನ್ನಿಲ್ಲ..

    ಒಂದೇ ಮಾವಿನ ಮರದಲ್ಲಿ 121 ಬಗೆಯ ಹಣ್ಣುಗಳು!; ಅಚ್ಚರಿ ಮೂಡಿಸುತ್ತಿದೆ 15 ವರ್ಷಗಳ ಈ ಮರ..

    ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts