More

    ಜವಾಬ್ದಾರಿ ನಿರ್ವಹಣೆಯಲ್ಲೂ ಮಹಿಳೆ ಸೈ

    ಎನ್.ಆರ್.ಪುರ: ಮಹಿಳೆಯರು ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಕೌಟುಂಬಿಕ ವ್ಯವಹಾರವನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ ಎಂದು ಲೇಖಕಿ ಭಾಗ್ಯಾ ನಂಜುಂಡಸ್ವಾಮಿ ಹೇಳಿದರು.

    ಶನಿವಾರ ಪಪಂನಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳೆಯಾಗಿ ಹುಟ್ಟಿರುವುದಕ್ಕೆ ನಾವು ಹೆಮ್ಮೆ ಪಡಬೇಕು. ಮಹಿಳೆಯರು ಚಿಂತೆ, ಕ್ರೋಧ, ಭಯ ಬಿಡಬೇಕು. ಆತ್ಮವಿಶ್ವಾಸ ಬೆಳೆಸಿಕೊಂಡು ಮುನ್ನಡೆದರೆ ಸಾಧನೆ ಮಾಡಬಹುದು ಎಂದರು.
    ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ದೇಶ ಪುರುಷ ಪ್ರಧಾನವಾಗಿದ್ದರೂ ಮಹಿಳೆಗೆ ವಿಶೇಷ ಸ್ಥಾನ ನೀಡಲಾಗಿದೆ. ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿ ಮಾಡಿದ ಸಾಧನೆ ಮಹಿಳೆಯರಿಗೆ ಗೌರವ ತಂದಿದೆ. ಸಿದ್ದರಾಮಯ್ಯ ಸರ್ಕಾರ ಮಹಿಳೆಯರಿಗಾಗಿ 5 ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ ಎಂದು ಹೇಳಿದರು.
    ಪಪಂ ವ್ಯಾಪ್ತಿಯಲ್ಲಿ 26 ಮಹಿಳಾ ಸ್ವಸಹಾಯ ಸಂಘಗಳಿದ್ದು, 400 ಸದಸ್ಯರಿದ್ದಾರೆ. ಮುಂದಿನ ವಷರ್ ಅಂತಾರಾಷ್ಟ್ರೀಯ ಮಹಿಳಾ ದಿನ ಇನ್ನಷ್ಟು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
    ಪಪಂ ಸದಸ್ಯೆ ಜುಬೇದಾ ಮಾತನಾಡಿ, ಮಹಿಳೆ ಎಂದರೆ ಶಕ್ತಿ. ಮಹಿಳೆ ತ್ಯಾಗಮಯಿ. ಹೆಣ್ಣಿಗೆ ಹೆಣ್ಣೇ ಶತ್ರವಾಗುವುದು ಬಿಡಬೇಕು ಎಂದರು.
    ಪೌರ ಕಾರ್ಮಿಕರಾದ ಗೀತಾ, ಚಿತ್ರಾ, ನಾಗರತ್ನಾ ಅವರನ್ನು ಗೌರವಿಸಲಾಯಿತು. ಸ್ವಸಹಾಯಸಂಘಗಳ ಒಕ್ಕೂಟದ ಅಧ್ಯಕ್ಷೆ ಭಾನುಮತಿ, ಪಪಂ ಸದಸ್ಯರಾದ ಸುರೈಯಾಭಾನು, ಸೋಜ, ಮುನಾವರ್ ಪಾಷಾ, ಕುಮಾರಸ್ವಾಮಿ, ಸೈಯದ್‌ವಸೀಂ, ಪಪಂ ಸಮುದಾಯ ಸಂಘಟನ ಅಧಿಕಾರಿ ಲಕ್ಷ್ಮಣಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts