More

    ಗಂಡನಿಗೆ ಈದ್​ ಸಂಭ್ರಮ; ಏಳು ವರ್ಷದ ಮಗನೊಂದಿಗೆ ರೈಲಿಗೆ ತಲೆ ಕೊಟ್ಟ ಹೆಂಡತಿ

    ಲಖನೌ: ಗಂಡ ಈದ್​ ಹಬ್ಬದ ಸಂಭ್ರಮಕ್ಕೆಂದು ಸಂಬಂಧಿಕರ ಮನೆಗೆ ತೆರಳಿದ್ದಾಗ ಹೆಂಡತಿ ತನ್ನ ಏಳು ವರ್ಷದ ಮಗನೊಂದಿಗೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ರಿಹಾನಾ (25) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಈಕೆ ಶುಕ್ರವಾರ ಸಂಜೆ ಫತೇಗಂಜ್​ನಲ್ಲಿ ತನ್ನ ಮಗನೊಂದಿಗೆ ರೈಲಿಗೆ ಅಡ್ಡವಾಗಿ ನಿಂತು ಪ್ರಾಣ ಬಿಟ್ಟಿದ್ದಾಳೆ. ದೆಹಲಿಯಿಂದ ಬರುವ ಶ್ರಮಜೀವಿ ಎಕ್ಸ್​ಪ್ರೆಸ್​ ರೈಲಿಗೆ ಮಹಿಳೆ ಬಲಿಯಾಗಿರುವುದಾಗಿ ತಿಳಿಸಲಾಗಿದೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ಸ್ಟೇಷನ್​ ಹೌಸ್ ಆಫೀಸರ್​ ವಿಜಯ್​ ರಾಣಾ ತಿಳಿಸಿದ್ದಾರೆ.

    ರಿಹಾನಾ ಪತಿ ಸಿರ್ಜಾ ಶುಕ್ರವಾರದಂದು ಈದ್​ ಹಬ್ಬದ ಪ್ರಯುಕ್ತ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದನಂತೆ. ಆತ ವಾಪಸು ಬರುವಷ್ಟರಲ್ಲಿ ಹೆಂಡತಿ ಮಗ ಶವವಾಗಿದ್ದಾಗಿ ಆತ ತಿಳಿಸಿದ್ದಾನೆ. ಹೆಂಡತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಅದೇ ಕಾರಣಕ್ಕೆ ಈ ದುರ್ಘಟನೆ ಆಗಿರಬಹುದು ಎಂದು ಆತ ಹೇಳಿದ್ದಾನೆ. (ಏಜೆನ್ಸೀಸ್)

    ಮಮತಾ ಬ್ಯಾನರ್ಜಿ ಕುಟುಂಬವನ್ನೂ ಬಿಡದ ಕರೊನಾ! ದೀದಿ ತಮ್ಮ ಕರೊನಾಗೆ ಬಲಿ

    ಕೊಡಲಿ ಹಿಡಿದು ಮದ್ವೆ ಮಂಟಪಕ್ಕೆ ನುಗ್ಗಿದ ಒನ್​ ಸೈಡ್​ ಲವರ್​: ಮುಂದಾಗಿದ್ದು ಹ್ಯಾಪಿ ಎಂಡಿಂಗ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts