ಬೆಂಗಳೂರು: ಟ್ಯೂಷನ್‌ಗೆ ಹೋಗುತ್ತಿದ್ದ ಮಗನಿಗೆ ನಗುತ್ತಲೇ ಕೈಬೀಸಿ ಬಾಯ್ ಹೇಳಿದ್ದ ಅಮ್ಮ, ಮಗ ವಾಪಸ್ ಬರುವಷ್ಟರಲ್ಲಿ ರಕ್ತದ ಮಡುವಿನಲ್ಲಿ ಮಲಗಿದ್ದಳು. ಈ ದೃಶ್ಯ ಕಂಡ ಮಗ ಚೀರಾಡುತ್ತಾ ಮನೆಯಿಂದ ಹೊರ ಓಡಿ ಬರುತ್ತಿದ್ದಂತೆ ಸ್ಥಳೀಯರು ಬಂದು ನೋಡಿದಾಗ ಆಕೆ ಇನ್ನು ಬದುಕಿಲ್ಲ, ಯಾರೋ ಕೊಲೆ ಮಾಡಿದ್ದಾರೆ ಎಂದ ಸತ್ಯ ಅರಿವಾಗುತ್ತಿದ್ದಂತೆ ಆ ಬಾಲಕನ ಆಕ್ರಂದನ ಮುಗಿಲು ಮುಟ್ಟಿತ್ತು.
ಇಂತಹ ಅಮಾನವೀಯ ಘಟನೆ ಬುಧವಾರ ಸಂಜೆ ಅನ್ನಪೂರ್ಣೇಶ್ವರಿನಗರದಲ್ಲಿ ಸಂಭವಿಸಿದೆ. ರಿಯಲ್ ಎಸ್ಟೇಟ್ ಉದ್ಯಮಿ ಕಾಂತರಾಜ್ ಅವರ ಪತ್ನಿ ರೂಪಾ (34) ಕೊಲೆಯಾದವರು.
ಕಾಂತರಾಜ್-ರೂಪಾ ದಂಪತಿಗೆ ಒಬ್ಬ ಮಗನಿದ್ದಾನೆ. ಪ್ರತಿನಿತ್ಯ ಪತ್ನಿಯ ಶೀಲ ಶಂಕಿಸಿ ಪತ್ನಿ ಜತೆ ಕಾಂತರಾಜ್ ಜಗಳ ಮಾಡುತ್ತಿದ್ದ. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಮನಸ್ತಾಪ ಉಂಟಾಗುತ್ತಿತ್ತು. ಬುಧವಾರ ಸಂಜೆ 4.30ರಲ್ಲಿ ಕಾಂತರಾಜ್ ಪತ್ನಿಯ ಮೊಬೈಲ್ ಪರಿಶೀಲಿಸಿದಾಗ ಆಕೆ ಬೇರೆ ವ್ಯಕ್ತಿಯೊಂದಿಗೆ ಮಾತನಾಡಿರುವುದು ಕಂಡು ಬಂದಿತ್ತು. ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿತ್ತು. ಆಕ್ರೋಶಗೊಂಡ ಕಾಂತರಾಜ್ ಅಡುಗೆ ಮನೆಯಲ್ಲಿದ್ದ ಚೂರಿಯಿಂದ ಪತ್ನಿ ರೂಪಾ ಕತ್ತಿಗೆ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಟ್ಯೂಷನ್‌ಗೆ ಹೋಗಿದ್ದ ಮಗ ಮನೆಗೆ ವಾಪಾಸ್ಸಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನ್ನಪೂಣೇಶ್ವರಿನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆಮರಸಿಕೊಂಡಿರುವ ಕಾಂತರಾಜ್‌ಗೆ ಶೋಧ ಮುಂದುವರಿದಿದೆ.
ಪತ್ನಿ ಕೊಂದು ಧರ್ಮಸ್ಥಳಕ್ಕೆ ಹೋದವ ಇನ್ನಿಬ್ಬರನ್ನ ಕೊಲ್ಲಲು ವಾಪಸ್ ಬಂದ! ಬೆಚ್ಚಿಬೀಳಿಸುತ್ತೆ ಆ ರಹಸ್ಯ
ನನ್ನ ತಂದೆಗೆ ಹಲವು ಕಾಲ್ಗರ್ಲ್ ಜತೆ ಸಂಪರ್ಕ ಇತ್ತು, ಅವನೊಬ್ಬ ಕಾಮುಕ, ಮಹಿಳೆಯರನ್ನ ಟ್ರ್ಯಾಪ್ ಮಾಡ್ತಿದ್ದ…
ಪದೇಪದೆ ಸರ್ಪಗಳು ಬರುತ್ತಿವೆ… ಎಂದು ಮನೆಯಲ್ಲಿ ಬಾವಿ ತೋಡಿದ ದಂಪತಿ! ವಾರದ ಬಳಿಕ ಕಾದಿತ್ತು ಶಾಕ್
ಬೇಲೂರಿನ ಪ್ರೇಮಿಗಳು ಶಿವಮೊಗ್ಗದಲ್ಲಿ ಪತ್ತೆ! ಪ್ರಿಯಕರ ವಾಹನದಿಂದ ಜಿಗಿಯುತ್ತಿದ್ದಂತೆ ಪ್ರೇಯಸಿ ಹೈಡ್ರಾಮ