More

    ನನ್ನ ಗಂಡ ನಿತ್ಯ ಅಶ್ಲೀಲ ವಿಡಿಯೋ ನೋಡ್ತಾನೆ, ವೇಶ್ಯೆಯರ ಜತೆ ಚಾಟಿಂಗ್​ ಮಾಡ್ತಾನೆ… ಪ್ರಶ್ನಿಸಿದ್ರೆ ಹಿಂಸಿಸ್ತಾನೆ…

    ಬೆಂಗಳೂರು: ನನ್ನ ಗಂಡ ಪ್ರತಿದಿನ ಪೋರ್ನ್​ ವಿಡಿಯೋ ನೋಡುತ್ತಾನೆ. ಅಶ್ಲೀಲ ವೆಬ್​ಸೈಟ್​ಗಳಲ್ಲಿ ಕಂಡಕಂಡ ಯುವತಿಯರ ಜತೆ ಲೈವ್​ ವಿಡಿಯೋ ಮಾಡುತ್ತಾನೆ. ವೇಶ್ಯೆಯರ ಜತೆ ಚಾಟಿಂಗ್​ ಮಾಡುತ್ತಾನೆ. ಅಷ್ಟೇ ಅಲ್ಲ ಪತ್ನಿಯಾದ ನಾನು ಜತೆಯಲ್ಲಿ ಇದ್ದರೂ ವಿಚ್ಛೇದಿತ ಎಂದು ಮ್ಯಾಟ್ರಿಮೋನಿಯಲ್​ನಲ್ಲಿ ಪ್ರೊಫೈಲ್ ತೆರೆದಿದ್ದಾನೆ… ಇದನ್ನ ಪ್ರಶ್ನಿಸಿದ್ದಕ್ಕೆ ಕಿರುಕುಳ ಕೊಡ್ತಿದ್ದಾನೆ… ಎಂದು ಮಹಿಳೆಯೊಬ್ಬರು ​ಕಣ್ಣೀರು ಹಾಕುತ್ತಾ ಕೋರ್ಟ್​ ಮೆಟ್ಟಿಲೇರಿದ್ದು, ಬಸವನಗುಡಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನಿತ್ಯ ಮನೆಯಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ, ಪೋರ್ನ್​ ವೆಬ್​ಸೈಟ್​ ಚಾಟಿಂಗ್​ ಮಾಡುವುದನ್ನು ಪ್ರಶ್ನಿಸಿದಕ್ಕೆ ಕಿರುಕುಳ ನೀಡಿ ಹಿಂಸೆ ನೀಡುತ್ತಿರುವುದಾಗಿ ಗಂಡನ ವಿರುದ್ಧ ಮಹಿಳಾ ಪೊಲೀಸ್​ ಠಾಣೆಯಲ್ಲಿ ದೂರು ನೀಡಲು ಪತ್ನಿ ಮುಂದಾದಾಗ ಕೇಸ್​ ದಾಖಲಿಸಲು ನಿರಾಕರಿಸಿದ ಪೊಲೀಸರು, ಕೇವಲ ಚಾಟಿಂಗ್​, ಅಶ್ಲೀಲ ವಿಡಿಯೋ ನೋಡಿದ್ದಕ್ಕೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳಿ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆ 1ನೇ ಎಸಿಎಂಎಂ ನ್ಯಾಯಾಲಯದ ಮೊರೆ ಹೋಗಿದ್ದರು.

    ಪ್ರತಿದಿನ ಪೋರ್ನ್​ ವಿಡಿಯೋ ವೀಕ್ಷಣೆಯಲ್ಲಿ ಪತಿ ನಿರತರಾಗಿದ್ದಾರೆ. ಆನಂತರ ಅಶ್ಲೀಲ ವೆಬ್​ಸೈಟ್​ಗಳಲ್ಲಿ ಯುವತಿಯರ ಜತೆ ಲೈವ್​ ವಿಡಿಯೋ ದುಶ್ಚಟಕ್ಕೆ ಬಿದ್ದಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡುತಿದ್ದನಲ್ಲದೇ, ವಿಚ್ಛೇದಿತ ಎಂದು ಪೋಸ್ಟ್​ ಹಾಕಿಕೊಂಡಿದ್ದಾನೆ ಎಂದು ಪತಿಯ ವಿರುದ್ಧ ಪತ್ನಿ ಆರೋಪಿಸಿದ್ದಾರೆ.

    ಲೋಕ್ಯಾಂಟೋ ಆ್ಯಪ್​, ಟೆಲಿಗ್ರಾಂ ಆ್ಯಪ್​ನಲ್ಲಿ ಖಾತೆ ತೆರೆದು ವೇಶ್ಯೆಯರ ಜತೆ ಚಾಟ್​ ಮಾಡುತ್ತಿದ್ದಾನೆ. ಅಪರಿಚಿತ ವ್ಯಕ್ತಿಗೆ ಖಾಸಗಿ ಪೋಟೋಗಳನ್ನು ಕಳುಹಿಸಿ ಅಶ್ಲೀಲವಾಗಿ ಸಂಭಾಷಣೆ ನಡೆಸುತ್ತಾನೆ. ಬೇರೆ ಹುಡುಗಿರ ಜತೆ ಪೋಟೋ ತೆಗೆಸಿಕೊಂಡು ದಂಪತಿ ಎಂದು ಹೇಳಿಕೊಳ್ಳುತ್ತಿದ್ದಾನೆ. ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ವಿಚ್ಛೇದಿತ ಎಂದು ಪ್ರೊಫೈಲ್ ಹಾಕಿಕೊಂಡು 2ನೇ ಮದುವೆ ಆಗಲು ಯತ್ನಿಸುತ್ತಿದ್ದಾನೆ ಎಂದು ಪತಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

    ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಪತಿ ವಿರುದ್ಧ ಎಫ್​ಐಆರ್​ ದಾಖಲಿಸಿ ತನಿಖೆ ನಡೆಸುವಂತೆ ಬಸವನಗುಡಿ ಮಹಿಳಾ ಠಾಣೆಗೆ ಸೂಚಿಸಿದ್ದಾರೆ. ಈ ಮೇರೆಗೆ ಮಹಿಳೆಯ ಗಂಡನ ವಿರುದ್ಧ ಎಫ್​ಐಆರ್​ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಬೆಳ್ಳಂಬೆಳಗ್ಗೆ ಪೊಲೀಸ್​ ಪೇದೆ ಮಗನ ಭೀಕರ ಕೊಲೆ: ನೂರಾರು ಜನರ ಕಣ್ಣೆದುರೇ ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು

    ನಿನ್ನೆ ರಾತ್ರಿ ತೋಟದ ಮನೆಯಲ್ಲಿ 3 ತಿಂಗಳ ಮಗು, ದಂಪತಿ ದುರಂತ ಸಾವು! ಬೆಚ್ಚಿಬಿದ್ದ ಗ್ರಾಮಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts