More

    ಉಪಸಮರ ಬಹಿರಂಗ ಪ್ರಚಾರಕ್ಕೆ ತೆರೆ: ಮನೆ-ಮನೆಗೆ ತೆರಳಿ ಮತಯಾಚನೆ

    ಬೆಂಗಳೂರು: ರಾಜ್ಯದ ಮುಂಬರುವ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗುತ್ತಿರುವ ಹಾನಗಲ್​ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬಹಿರಂಗ ಪ್ರಚಾರದ ಕೊನೇ ದಿನವಾದ ಬುಧವಾರ ಎರಡೂ ಕ್ಷೇತ್ರಗಳಲ್ಲಿ ಮೂರೂ ಪಕ್ಷಗಳ ನಾಯಕರು ಅಬ್ಬರದ ಪ್ರಚಾರ ನಡೆಸಿದರು. ಮೂರೂ ಪಕ್ಷಗಳ ನಾಯಕರು ಕರೊನಾ ಮೂರನೇ ಅಲೆ ಆತಂಕವನ್ನು ಮರೆಮಾಚಿ ಭರ್ಜರಿ ರೋಡ್​ ಶೋ ನಡೆಸಿ ಮತಯಾಚಿಸಿದರು.

    ಎರಡೂ ಕ್ಷೇತ್ರಗಳಿಗೆ ಅ.30ರಂದು ಮತದಾನ ನಡೆಯಲಿದೆ. ಮಾದರಿ ನೀತಿ ಸಂಹಿತೆ ಪ್ರಕಾರ ಮತದಾನಕ್ಕೆ 72 ತಾಸುಗಳ ಮುಂಚೆ ಬಹಿರಂಗ ಪ್ರಚಾರ ಕೊನೆಗೊಂಡಿದೆ. ಹೀಗಾಗಿ ಕಳೆದ 15 ದಿನಗಳಿಂದ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದ ಹೊರಗಿನವರು ಬುಧವಾರ ಸಂಜೆ ವೇಳೆಗೆ ಗಂಟೆ-ಮೂಟೆ ಕಟ್ಟಿಕೊಂಡು ಜಾಗ ಖಾಲಿ ಮಾಡುತ್ತಿದ್ದಾರೆ.

    ಇನ್ನು ಕೊನೇ ಹಂತದ ಕಸರತ್ತು ಎಂಬಂತೆ ಮನೆಮನೆಗೆ ತೆರಳಿ ಮತಯಾಚನೆ ಮಾಡುವತ್ತ ಎಲ್ಲ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಗಮನ ಹರಿಸಿದ್ದಾರೆ.

    ಮಿಸ್​ ಯೂ ಫ್ರೆಂಡ್ಸ್​, ನಾನು ಸಾಯುವೆ, ನನ್ನ ಬ್ಯಾನರ್​ ಹಾಕಿ… ಎಂದು ಸಂದೇಶ ಕಳಿಸಿ ಪ್ರಾಣಬಿಟ್ಟ ವಿದ್ಯಾರ್ಥಿ

    ಅಣ್ಣನಿಂದಲೇ ಕೊಲೆಯಾದ ನವವಿವಾಹಿತೆ! ಮೊದಲೇ ನೊಂದಿದ್ದ ಆ ಜೀವಕ್ಕೆ ಬದುಕಲು ಬಿಡಲೇ ಇಲ್ಲ…

    ಆ ಒಂದು ಮಾತಿಗೆ ಆಕೆಯ ಉಸಿರನ್ನೇ ನಿಲ್ಲಿಸಿ ತಾನೂ ಸತ್ತ… ಛೇ ಇದೆಂಥಾ ಪ್ರೀತಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts