More

    ಆರೋಪಿ ಬಂಧಿಸಲು ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟು ಎಸ್​ಐಗೆ ಬೆವರಿಳಿಸಿದ್ದ ಎಸ್ಪಿ: ತುಮಕೂರು ಎಸ್ಪಿ ನಡೆಗೆ ಗೃಹ ಸಚಿವ ಮೆಚ್ಚುಗೆ

    ತುಮಕೂರು: ಆರೋಪಿಯನ್ನು ಬಂಧಿಸಲು ಬಾಡಿಗೆ ಕಾರು ತರಲು ದೂರದಾರರಿಗೆ ತಾಕೀತು ಮಾಡಿದ್ದ ಸಬ್​ ಇನ್​ಸ್ಪೆಕ್ಟರ್​ಗೆ ಪಾಠ ಕಲಿಸಲು ತನ್ನ ಕಾರನ್ನೇ ದೂರುದಾರನಿಗೆ ಕೊಟ್ಟು ಕಳುಹಿಸಿದ್ದ ತುಮಕೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಡೆಗೆ ಗೃಹಸಚಿವ ಆರಗ ಜ್ಞಾನೇಂದ್ರ ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದಾರೆ.

    ಪೊಲೀಸರು ಸಾರ್ವಜನಿಕ ಹಿತ ಕಾಪಾಡುವ ಬದ್ಧತೆ ತೋರಬೇಕು. ಪೊಲೀಸ್​ ಸಿಬ್ಬಂದಿ ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದನ್ನು ವಿಭಿನ್ನ ಶೈಲಿಯಲ್ಲಿ ತೋರಿಸಿದ ತುಮಕೂರಿನ ಎಸ್ಪಿ ರಾಹುಲ್​ ಕುಮಾರ್​ ಶಹಾಪೂರವಾಡ್​ ಅವರ ನಡೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪ್ರಕರಣವೇನು?: ತುರುವೇಕೆರೆ ತಾಲೂಕಿನ ಕೋಡಿಹಳ್ಳಿಯಲ್ಲಿ 3 ತಿಂಗಳ ಹಿಂದೆ ಪ್ರಕಾಶ್​ ಎಂಬುವವರ ಪುತ್ರ ಚಂದನ್​ ಹಾಗೂ ನಾಗೇಂದ್ರಪ್ಪ ನಡುವೆ ಜಮೀನು ವಿವಾದಕ್ಕೆ ಜಗಳವಾಗಿತ್ತು. ಈ ವೇಳೆ ನಾಗೇಂದ್ರಪ್ಪ ಮತ್ತು ಇವರ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಪ್ರಕಾಶ್​ ಹಾಗೂ ಚಂದನ್​ ವಿರುದ್ಧ ಐಪಿಸಿ ಸೆಕ್ಷನ್​ 307ರಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪ್ರಕಾಶ್​ ಜಾಮೀನು ಪಡೆದಿದ್ದು ಚಂದನ್​ ತಲೆಮರೆಸಿಕೊಂಡಿದ್ದ. ಆರೋಪಿಯನ್ನು ಬಂಧಿಸುವಂತೆ ದೂರುದಾರ ಪದೇಪದೆ ದಂಡಿನಶಿವರ ಪೊಲೀಸ್​ ಠಾಣೆಗೆ ಅಲೆಯುತ್ತಿದ್ದರೂ ಸ್ಪಂದನೆ ಸರಿಯಾಗಿ ಸಿಕ್ಕಿರಲಿಲ್ಲ. ಜ.13ರಂದು ಮತ್ತೆ ಪೊಲೀಸರಿಗೆ ನಾಗೇಂದ್ರಪ್ಪ ಮನವಿ ಮಾಡಿದಾಗ, ಆರೋಪಿಯನ್ನು ಬಂಧಿಸಲು ಬಾಡಿಗೆ ಕಾರು ತೆಗೆದುಕೊಂಡು ಬಾ ಎಂದು ದಂಡಿನಶಿವರ ಠಾಣೆ ಸಬ್​ಇನ್​ಸ್ಪೆಕ್ಟರ್​ ಶಿವಲಿಂಗಯ್ಯ ಹೇಳಿದ್ದರು. ಇದರಿಂದ ಬೇಸರಗೊಂಡ ನಾಗೇಂದ್ರಪ್ಪ, ಎಸ್​ಐ ವಿರುದ್ಧ ನಾಗೇಂದ್ರಪ್ಪ ಎಸ್​ಪಿಗೆ ದೂರು ನೀಡಿದ್ದರು. ಎಸ್​ಪಿ ಅವರು ತಾವು ಬಳಸುವ ಕಾರನ್ನೇ ಡ್ರೈವರ್​ ಸಮೇತ ಕಳುಹಿಸಿದ್ದರು. ಎಸ್​ಪಿ ಕಾರು ದಂಡಿನಶಿವರ ಠಾಣೆ ಎದುರು ನಿಲ್ಲುತ್ತಿದ್ದಂತೆ ಬೆವೆತು ಹೋದ ಪೊಲೀಸರು ಕಳೆದ 3 ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮರುದಿನವೇ ಬಂಧಿಸಿದ್ದರು.

    ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟ ತುಮಕೂರು ಎಸ್​​ಪಿ! ಠಾಣೆ ಮುಂದೆ ಕಾರು ಬರ್ತಿದ್ದಂತೆ ಪಿಎಸ್​ಐ ಗಢಗಢ

    ಸೋಲದೇವನಹಳ್ಳಿ ಡಾಬಾಗೆ ಬೆಂಕಿ ಹಚ್ಚಲು ಸುಪಾರಿ ಕೊಟ್ಟದ್ದೇ ಮಾಲೀಕನ ಪತ್ನಿ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

    6 ವರ್ಷದ ಮಗನ ಜತೆ ತಡರಾತ್ರಿ ಗಂಡ ಆತ್ಮಹತ್ಯೆ! ಡೆತ್​ನೋಟ್​ನಲ್ಲಿದೆ ಪತ್ನಿ ಮತ್ತು ಎಲ್​ಐಸಿ ಏಜೆಂಟ್​ ಕೊಟ್ಟ ಕಾಟ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts