More

    ಒಕ್ಕಲಿಗರ ಸಂಘದ ಚುನಾವಣೆ: ತುಮಕೂರಲ್ಲಿ ಹನುಮಂತರಾಯಪ್ಪ, ಲೋಕೇಶ್ ನಾಗರಾಜಯ್ಯ ಆಯ್ಕೆ

    ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ ಡಿ.12ರಂದು ನಡೆದ ಚುನಾವಣೆಯ ಮತ ಎಣಿಕೆ ಇಂದು (ಬುಧವಾರ) ನಡೆದಿದ್ದು, ಫಲಿತಾಂಶ ಹೊರಬಿದ್ದಿದೆ.

    ಒಟ್ಟು 35 ನಿರ್ದೇಶಕರ ಸ್ಥಾನಕ್ಕೆ 221 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಈ ಪೈಕಿ ತುಮಕೂರಿಗೆ 2 ಸ್ಥಾನ. ತುಮಕೂರು ಜಿಲ್ಲೆಯಲ್ಲಿ 2 ಸ್ಥಾನಕ್ಕೆ ಒಟ್ಟು 7 ಮಂದಿ ಸ್ಪರ್ಧಿಸಿದ್ದರು. ಇವರಲ್ಲಿ ಹನುಮಂತರಾಯಪ್ಪ ಮತ್ತು ಲೋಕೇಶ್ ನಾಗರಾಜಯ್ಯ ಗೆಲುವಿನ ನಗೆ ಬೀರಿದ್ದಾರೆ.

    14,901 ಮತ ಪಡೆಯುವ ಮೂಲಕ ಮೊದಲ ಪ್ರಾಶಸ್ತ್ಯದಲ್ಲಿ ಹನುಮಂತರಾಯಪ್ಪ ಗೆದ್ದರೆ, 11,027 ಮತ ಪಡೆದು ಎರಡನೇ ಪ್ರಾಶಸ್ತ್ಯದಲ್ಲಿ ಲೋಕೇಶ್​ ನಾಗರಾಜಯ್ಯ ಜಯಗಳಿಸಿದ್ದಾರೆ.

    ತುಮಕೂರು ಜಿಲ್ಲೆ ಸ್ಪರ್ಧಿಸಿದ್ದವರ ಹೆಸರು ಮತ್ತು ಪಡೆದ ಮತಗಳ ವಿವರ ಇಲ್ಲಿದೆ.
    ಒಕ್ಕಲಿಗರ ಸಂಘದ ಚುನಾವಣೆ: ತುಮಕೂರಲ್ಲಿ ಹನುಮಂತರಾಯಪ್ಪ, ಲೋಕೇಶ್ ನಾಗರಾಜಯ್ಯ ಆಯ್ಕೆ

    ಚುನಾವಣೆಯಲ್ಲಿ ಸ್ಪರ್ಧಿಸಿದವರ ಪೈಕಿ ಮೂವರು ಕುಣಿಗಲ್​ ಮೂಲದವರು. ಲೋಕೇಶ್​ ನಾಗರಾಜಯ್ಯ ಅವರು ಜೆಡಿಎಸ್​ನ ಮಾಜಿ ಸಚಿವ ಡಿ.ನಾಗರಾಜಯ್ಯ ಅವರ ಪುತ್ರ, ಉದ್ಯಮಿಯೂ ಆದ ವಕೀಲ ಸಿಕೆಎಂ ಗೌಡ ಕುಣಿಗಲ್​ ಮೂಲದವರು. ಬೆಳ್ಳಿ ಲೋಕೇಶ್​ ಆರಂಭದಲ್ಲಿ ಕುಣಿಗಲ್​ನಲ್ಲಿ ಕೆಲಸ ನಿರ್ವಹಿಸಿ ನಂತರ ತುಮಕೂರಿಗೆ ಸ್ಥಳಾಂತರಗೊಂಡಿದ್ದಾರೆ. ಇನ್ನು ಸುಜಾತಾ ನಂಜೇಗೌಡ ಸಹ ಕುಣಿಗಲ್​ ಮೂಲದವರು. ಒಟ್ಟು 31,181 ಮತದಾರರಿದ್ದು, ಕುಣಿಗಲ್​ ತಾಲೂಕಿನಲ್ಲೇ ಅತಿ ಹೆಚ್ಚು(9,710) ಮತದಾರರು ಇದ್ದಾರೆ. 2ನೇ ಸ್ಥಾನದಲ್ಲಿ ತುಮಕೂರು, 3ನೇ ಸ್ಥಾನದಲ್ಲಿ ತುರುವೇಕೆರೆ ಇದೆ.

    ಅಬ್ಬಬ್ಬಾ, ಅಡುಗೆ ಮನೆಯ ಕಿಟಕಿ ಮುರಿದು ಆಹಾರ ದೋಚಿದ ಆನೆ! ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ

    ಬೇರೆ ಬೇರೆ ಮದ್ವೆ ಆಗಿದ್ರೂ ಮಾಗಡಿಯಲ್ಲಿ ದುರಂತ ಅಂತ್ಯ ಕಂಡ ಜೋಡಿ! ಗರ್ಭಿಣಿ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts