ಅಬ್ಬಬ್ಬಾ, ಅಡುಗೆ ಮನೆಯ ಕಿಟಕಿ ಮುರಿದು ಆಹಾರ ದೋಚಿದ ಆನೆ! ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ

ಬೆಂಗಳೂರು: ಆನೆಯೊಂದು ಅಡುಗೆ ಮನೆಯ ಕಿಟಕಿ ಮುರಿದು ಆಹಾರವನ್ನ ಹೇಗೆ ಲೂಟಿ ಮಾಡ್ತಿದೆ ನೋಡಿ. ಕಿಟಕಿಯೊಳಗೆ ಸೊಂಡಿಲು ಹಾಕಿ ಸಿಕ್ಕಿದ್ದೆಲ್ಲವನ್ನೂ ಹಾನಿ ಮಾಡುತ್ತಾ, ಆಹಾರ ಸಾಮಗ್ರಿಯನ್ನ ಬಾಯೊಳಗೆ ಹಾಕಿಕೊಳ್ಳುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ. ಅಡುಗೆ ಮನೆಯ ಕಿಟಕಿಯನ್ನು ಧ್ವಂಸ ಮಾಡಿ, ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡುತ್ತಿರುವ ಆನೆಯನ್ನ ನೋಡಿ ಆ ಮನೆಯಲ್ಲಿದ್ದವರು ಭಯಗೊಂಡಿದ್ದಾರೆ. ಮನೆಯಿಂದ ಹೊರಗೂ ಬರಲಾಗದೆ, ಒಳಗೂ ಇರಲಾರದೆ ಜೀವಭಯದಲ್ಲೇ ಆನೆಯನ್ನು ಓಡಿಸಲು ಹರಸಾಹಸಪಟ್ಟಿದ್ದಾರೆ. ತಟ್ಟೆಯನ್ನ ಬಡಿದು ಶಬ್ದ ಮಾಡುತ್ತಾ ಆನೆಯನ್ನ … Continue reading ಅಬ್ಬಬ್ಬಾ, ಅಡುಗೆ ಮನೆಯ ಕಿಟಕಿ ಮುರಿದು ಆಹಾರ ದೋಚಿದ ಆನೆ! ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ