More

    ಅಬ್ಬಬ್ಬಾ, ಅಡುಗೆ ಮನೆಯ ಕಿಟಕಿ ಮುರಿದು ಆಹಾರ ದೋಚಿದ ಆನೆ! ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ

    ಬೆಂಗಳೂರು: ಆನೆಯೊಂದು ಅಡುಗೆ ಮನೆಯ ಕಿಟಕಿ ಮುರಿದು ಆಹಾರವನ್ನ ಹೇಗೆ ಲೂಟಿ ಮಾಡ್ತಿದೆ ನೋಡಿ. ಕಿಟಕಿಯೊಳಗೆ ಸೊಂಡಿಲು ಹಾಕಿ ಸಿಕ್ಕಿದ್ದೆಲ್ಲವನ್ನೂ ಹಾನಿ ಮಾಡುತ್ತಾ, ಆಹಾರ ಸಾಮಗ್ರಿಯನ್ನ ಬಾಯೊಳಗೆ ಹಾಕಿಕೊಳ್ಳುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

    ಅಡುಗೆ ಮನೆಯ ಕಿಟಕಿಯನ್ನು ಧ್ವಂಸ ಮಾಡಿ, ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡುತ್ತಿರುವ ಆನೆಯನ್ನ ನೋಡಿ ಆ ಮನೆಯಲ್ಲಿದ್ದವರು ಭಯಗೊಂಡಿದ್ದಾರೆ. ಮನೆಯಿಂದ ಹೊರಗೂ ಬರಲಾಗದೆ, ಒಳಗೂ ಇರಲಾರದೆ ಜೀವಭಯದಲ್ಲೇ ಆನೆಯನ್ನು ಓಡಿಸಲು ಹರಸಾಹಸಪಟ್ಟಿದ್ದಾರೆ. ತಟ್ಟೆಯನ್ನ ಬಡಿದು ಶಬ್ದ ಮಾಡುತ್ತಾ ಆನೆಯನ್ನ ಓಡಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಈ ದೃಶ್ಯವನ್ನ ಮನೆಯಲ್ಲಿದ್ದವರೇ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

    ಅಂದಹಾಗೆ ಇದು ಎಲ್ಲಿ ನಡೆದ ಘಟನೆ ಎಂಬ ಖಚಿತ ಮಾಹಿತಿ ಸಿಕ್ಕಿಲ್ಲ. ಹಾಸನದಲ್ಲಿ ಕೆಲವರು ಈ ವಿಡಿಯೋವನ್ನ ವಾಟ್ಸ್​ಆ್ಯಪ್​ ಸ್ಟೇಟಸ್​ಗೆ ಹಾಕಿಕೊಂಡು ‘ಜಿಲ್ಲೆಯಲ್ಲಿ ಆನೆ ಹಾವಳಿ ಯಾವ ಮಟ್ಟಕ್ಕೆ ಬಂದಿದೆ ನೋಡಿ..’ ಎಂದು ಬರೆದುಕೊಂಡಿದ್ದಾರೆ. ಆದರೆ, ಹಾಸನ ಅರಣ್ಯಾಧಿಕಾರಿಗಳು ನಮ್ಮ ಜಿಲ್ಲೆಯಲ್ಲಿ ಈ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಹೆಲಿಕಾಪ್ಟರ್​ ಪತನ: ಬೆಂಗಳೂರಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಡುತ್ತಿದ್ದ ವರುಣ್​ ಸಿಂಗ್​ ಚಿಕಿತ್ಸೆ ಫಲಿಸದೆ ಸಾವು

    ಸ್ನಾನಕ್ಕೆ ನೀರು ಕಾಯಿಸುತ್ತಿದ್ದಾಗ ಹೀಟರ್ ರೂಪದಲ್ಲಿ ಬಂದ ಜವರಾಯ ಯುವತಿಯ ಪ್ರಾಣ ಹೊತ್ತೊಯ್ದ

    ಬೇರೆ ಬೇರೆ ಮದ್ವೆ ಆಗಿದ್ರೂ ಮಾಗಡಿಯಲ್ಲಿ ದುರಂತ ಅಂತ್ಯ ಕಂಡ ಜೋಡಿ! ಗರ್ಭಿಣಿ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts