ಬೆಟ್ಟದ ಮೇಲಿನ ಆಂಜನೇಯ ದೇವಸ್ಥಾನದಲ್ಲಿ ನಿಧಿಗಾಗಿ ಮಹಿಳೆ ಹತ್ಯೆ: ರಾತ್ರಿಯಿಡೀ ಬೆಟ್ಟದಲ್ಲೇ ಎಸ್​ಪಿ ವಾಸ್ತವ್ಯ

jakkanahalli-gollahalli-village-hill-anjaneyaswamy-tempa
Published on

ತುಮಕೂರು: ತಾಲೂಕಿನ ಜಕ್ಕೆನಹಳ್ಳಿ ಸಮೀಪದ ಮಿಂಚುಕಲ್ಲು ಬೆಟ್ಟದ ಆಂಜನೇಯ ದೇವಾಲಯದಲ್ಲಿ ನಿಧಿಗಳ್ಳರು ಮಹಿಳೆಯನ್ನು ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗೆ ತುಮಕೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ನಿನ್ನೆ ರಾತ್ರಿಯಿಡೀ ಸ್ಥಳದಲ್ಲೇ ವಾಸ್ತವ್ಯ ಹೂಡಿತ್ತು.

ಬೆಟ್ಟದ ಮೇಲಿರುವ ದೇವಾಲಯದ ಆಂಜನೇಯಸ್ವಾಮಿ ವಿಗ್ರಹದ ಮುಂಭಾಗ ನಿಧಿಗಾಗಿ ಅಗೆದು ಪೂಜೆ ಸಲ್ಲಿಸಿರುವ ದೃಶ್ಯ ಮತ್ತು ದೇವಾಲಯ ಆವರಣದಲ್ಲೇ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಇರುವುದು ಜುಲೈ 4ರಂದು ಬೆಳಕಿಗೆ ಬಂದಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್​ಪಿ, ಕೊಲೆಗಾರರ ಪತ್ತೆಗಾಗಿ ಮಹಿಳೆ ಹತ್ಯೆ ನಡೆದಿದ್ದ ಸ್ಥಳದಲ್ಲಿ ಹತ್ತು ಜನರನ್ನೊಳಗೊಂಡ ತನಿಖಾ ತಂಡದೊಂದಿಗೆ ರಾತ್ರಿ ವಾಸ್ತವ್ಯ ನಡೆಸಿದರು.

ಬೆಟ್ಟದ ಮೇಲಿರುವ ಆಂಜನೇಯಸ್ವಾಮಿ ದೇವಾಲಯದ ಬಳಿ ಆಗಿಂದಾಗ್ಗೆ ನಿಧಿಗಾಗಿ ಕಿಡಿಗೇಡಿಗಳು ಅಗೆದು ದೇವಾಲಯ ಆವರಣವನ್ನು ಹಾಳು ಮಾಡುತ್ತಿದ್ದರು ಎನ್ನಲಾಗಿದೆ. ದೇವಾಲಯ ಬೆಟ್ಟದ ಮೇಲಿರುವ ಕಾರಣ ಗ್ರಾಮಸ್ಥರು ಯಾರೂ ಆ ಕಡೆ ಸುಳಿಯುತ್ತಿರಲಿಲ್ಲ. ಹುಣ್ಣಿಮೆ, ಅಮಾವಾಸ್ಯೆಗಳಂದು ಈ ದೇವಾಲಯದಲ್ಲಿ ಪೂಜೆ ನಡೆಯುತ್ತಿತ್ತೆಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net