More

    ಮರ್ಯಾದೆಗೆ ಅಂಜಿ ವಿಜಯಪುರ ಮೂಲದ ಮೂವರು ಗೋವಾದಲ್ಲಿ ಆತ್ಮಹತ್ಯೆ! ಪ್ರಕರಣ ದಿಕ್ಕುತಪ್ಪಿಲು ಪೊಲೀಸರ ಯತ್ನ

    ಪಣಜಿ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರ ಮೂಲದ ಒಂದೇ ಕುಟುಂಬದ ಮೂವರು ಗೋವಾದ ಮನೆಯೊಂದರಲ್ಲಿ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಜುವಾರಿನಗರ ಬಿರ್ಲಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಹುಲಗೆಪ್ಪ ಅಂಬಿಗೇರ (35), ಈತನ ಸಹೋದರ ಗಂಗಪ್ಪ ಅಂಬಿಗೇರ (29) ಹಾಗೂ ಹುಲಗೆಪ್ಪನ ಪತ್ನಿ ದೇವಮ್ಮಾ ಅಂಬಿಗೇರ (28) ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳವಾರ ನಡೆದಿರುವುದು ಬೆಳಕಿಗೆ ಬಂದಿದೆ.

    ಊರಲ್ಲಿ ಕೆಲಸ ಸಿಗದಿದ್ದಾಗ ಹುಲಗೆಪ್ಪ ಅಂಬಿಗೇರ, ಪತ್ನಿ, ಸಹೋದರ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಗೋವಾದ ಜುವಾರಿನಗರ ಬಿರ್ಲಾಕ್ಕೆ ಹೋಗಿ ಕೂಲಿ ಮಾಡಿಕೊಂಡಿದ್ದರು. ಊರಲ್ಲಿ ಚಿರಪರಿಚಿತರಾಗಿ ಅನ್ಯೋನ್ಯದಿಂದ ಜೀವನ ಸಾಗಿಸುತ್ತಿದ್ದರು.

    ಈ ನಡುವೆ, ದೇವಮ್ಮಾ ಅವರ 17 ವರ್ಷದ ಸಹೋದರ ಸಹ ಜುವಾರಿನಗರ ಬಿರ್ಲಾಕ್ಕೆ ಬಂದು ಇವರೊಂದಿಗೆ ವಾಸವಾಗಿದ್ದ. ಈತ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಕೆಲ ದಿನಗಳ ಹಿಂದೆ ಪೊಲೀಸರು ಮನೆಗೆ ಬಂದು ದೇವಮ್ಮಳ ಸಹೋದರನನ್ನು ಕರೆದುಕೊಂಡು ಹೋಗಿದ್ದರು. ಕಾರಣ ಕೇಳಲು ಠಾಣೆಗೆ ಹೋದ ದೇವಮ್ಮಾ ಹಾಗೂ ಅವಳ ಪತಿಯನ್ನು ಪೊಲೀಸರು ಬೆದರಿಸಿ ಕಳುಹಿಸಿದ್ದರು. ಇದಾದ ಕೆಲ ದಿನಗಳ ಬಳಿಕ ದೇವಮ್ಮಾ, ಹುಲಗೆಪ್ಪ ಹಾಗೂ ಗಂಗಪ್ಪ ಅವರನ್ನೂ ವಿಚಾರಣೆಗೆ ಕರೆದುಕೊಂಡು ಹೋಗಿದ್ದರು.

    ಡೆತ್ ನೋಟ್: ‘ಜುವಾರಿನಗರದ ಮನೆಯೊಂದರಲ್ಲಿ 10 ಲಕ್ಷ ರೂ. ಬೆಲೆಬಾಳುವ ಬಂಗಾರದ ಆಭರಣಗಳು ಕಳ್ಳತನವಾಗಿವೆ. ಈ ಕಳ್ಳತನದಲ್ಲಿ ನಿಮ್ಮ ಕುಟುಂಬದ ಕೈವಾಡವಿದೆ ಎಂದು ಪೊಲೀಸರು ಆರೋಪಿಸಿದ್ದರು. ಕಳ್ಳತನ ಮಾಡಿದ್ದು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದರು. ಆದರೆ, ಕಳ್ಳತನ ಮಾಡಿದ್ದನ್ನು ಒಪ್ಪದಿದ್ದಾಗ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದರು. ಎಲ್ಲರನ್ನೂ ಒಟ್ಟಿಗೆ ಹೊಡೆಯುವುದು, ಕೆಲವೊಮ್ಮೆ ಪ್ರತ್ಯೇಕವಾಗಿ ಕೋಣೆಯಲ್ಲಿ ಕೂಡಿ ಹಾಕಿ ಥಳಿಸುತ್ತಿದ್ದರು. ಕಳ್ಳತನ ಮಾಡದೇ ಇದ್ದಾಗ ನಾವೇಕೆ? ಒಪ್ಪಿಕೊಳ್ಳಬೇಕು ಎಂದಾಗ ಪೊಲೀಸರು ಮತ್ತೆ ಮತ್ತೆ ಹೊಡೆಯುತ್ತಿದ್ದರು’ ಎಂದು ಆತ್ಮಹತ್ಯೆಗೂ ಮುನ್ನ ಬರೆದ ಪತ್ರದಲ್ಲಿ ತಾವು ಅನುಭವಿಸಿದ ನರಕಯಾತನೆಯನ್ನು ಉಲ್ಲೇಖಿಸಿದ್ದಾರೆ.

    ಠಾಣೆಯಲ್ಲಿ ಮೂವರನ್ನೂ ಕೂಡಿ ಹಾಕಿ, ಬಳಿಕ ದೇವಮ್ಮಳ ಸಹೋದರನನ್ನು ಪೊಲೀಸರು ಎಲ್ಲೋ ಕರೆದುಕೊಂಡು ಹೋಗಿದ್ದರು. ಕೆಲ ವಸ್ತುವಿನೊಂದಿಗೆ ಠಾಣೆಗೆ ಮರಳಿದರು. ಆ ಬಳಿಕ ದೇವಮ್ಮಾ, ಹುಲಗೆಪ್ಪ, ಗಂಗಪ್ಪ ಅವರನ್ನು ಠಾಣೆಯಿಂದ ಬಿಟ್ಟು ಕಳುಹಿಸಿದರು. ತೀವ್ರ ಹಲ್ಲೆಗೊಳಗಾಗಿದ್ದ ಮೂವರು ಮನೆಗೆ ತೆರಳಿ ನೇಣುಹಾಕಿಕೊಂಡಿದ್ದಾರೆ.

    ಪೊಲೀಸರು ನಡೆಸಿದ ಹಲ್ಲೆಯಿಂದ ಮನನೊಂದಿದ್ದೇವೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿದ್ದಾರೆ. ತನಿಖೆ ನಡೆಯುತ್ತಿದೆ.
    |ಪಂಕಜಕುಮಾರ್ ಪೊಲೀಸ್ ಅಧೀಕ್ಷಕ ಪಣಜಿ

    ಅನುಮಾನ ಮೂಡಿಸಿದೆ ಮರಣೋತ್ತರ ಪರೀಕ್ಷೆ: ಆತ್ಮಹತ್ಯೆ ಮಾಡಿಕೊಂಡವರ ಶವವನ್ನು ಪೊಲೀಸರು ಲಗುಬಗೆಯಿಂದ ಮರಣೋತ್ತರ ಪರೀಕ್ಷೆಗೆ ಒಳಪಡಿಸಿರುವುದು ಸಂಶಯಕ್ಕೆ ಕಾರಣವಾಗಿದೆ. ಹಲ್ಲೆ ಮಾಡಿದ್ದನ್ನು ಮರೆಮಾಚಲು ಪೊಲೀಸರು ಈ ರೀತಿಯಾಗಿ ವರ್ತಿಸಿದ್ದಾರೆಂದು ಹುಲಗೆಪ್ಪನ ಕುಟುಂಬಸ್ಥರು ಹಾಗೂ ಸ್ಥಳೀಯ ಸಂಘಟನೆಗಳು ಆರೋಪಿಸಿದ್ದಾರೆ.

    ಹುಟ್ಟೂರಲ್ಲೇ 14 ವರ್ಷದ ಬಾಲಕಿ ಜತೆ ಪರಪುರುಷರ ಕಾಮದಾಟ​! ಹೆತ್ತವರ ಸಾಥ್​, ಮಧುಗಿರಿ ಗೌರಿಗಾಗಿ ಹುಡುಕಾಟ​​

    ವರದಕ್ಷಿಣೆಗೆ ಮತ್ತೊಂದು ಬಲಿ: ಆರು ತಿಂಗಳ ಹಿಂದಷ್ಟೇ ಮದ್ವೆ ಆಗಿದ್ದ ಯುವತಿ ಗಂಡನ ಮನೆಯಲ್ಲೇ ದುರಂತ ಸಾವು!

    ಅಮ್ಮ ಸತ್ತ ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ ಅಪ್ಪ-ಮಕ್ಕಳು! ಸುಂದರ ಬದುಕಿಗೆ ಕೊಳ್ಳಿ ಇಟ್ಟಿದ್ಯಾರು?

    ಅಮ್ಮನ ಕೈತುತ್ತು ತಿನ್ನುತ್ತಿರುವಾಗಲೇ ತಲೆ ಮೇಲೆ ತೆಂಗಿನಕಾಯಿ ಬಿದ್ದು 11 ತಿಂಗಳ ಮಗು ಸಾವು!

    ತಾವೇ ಕಟ್ಟಿಸಿದ್ದ ಕೃಷಿಹೊಂಡಕ್ಕೆ ಹಾರಿ 4 ಮಕ್ಕಳೊಂದಿಗೆ ಪ್ರಾಣಬಿಟ್ಟ ದಂಪತಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts