More

    ಸ್ನೇಹಿತರನ್ನು ಉಳಿಸಿ ಪ್ರಾಣ ಬಿಟ್ಟಿದ್ದ ಬಾಲಕನಿಗೆ ಮರಣೋತ್ತರ ಹೊಯ್ಸಳ ಶೌರ್ಯ ಪ್ರಶಸ್ತಿ

    ಬೆಂಗಳೂರು: ಕಾವೇರಿ ನದಿಯಲ್ಲಿ ಮುಳುಗುತ್ತಿದ್ದ ಸ್ನೇಹಿತರನ್ನು ಬದುಕಿಸಿ, ಪ್ರಾಣ ಬಿಟ್ಟಿದ್ದ ಬಾಲಕನಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮರಣೋತ್ತರ ಹೊಯ್ಸಳ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಬಾಲಕನ ತಂದೆ ತಾಯಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

    ಕಳೆದ ವರ್ಷ ಮಾರ್ಚ್​ನಲ್ಲಿ ಮಡಿಕೇರಿಯಲ್ಲಿ ಒಂದು ಮನಕಲಕುವ ಘಟನೆ ನಡೆದಿತ್ತು. ಮಡಿಕೇರಿಯ ಗೋಣಿಕೊಪ್ಪಲಿನ ಲಯನ್ಸ್​ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳು, ಸ್ಕೌಟ್ಸ್​ ಗೈಡ್ಸ್​ನ 39 ವಿದ್ಯಾರ್ಥಿಗಳ ತಂಡವಾಗಿ ದುಬಾರೆ ಕ್ಯಾಂಪ್​ಗೆ ಪಿಕ್​ನಿಕ್​ಗೆ ಹೋಗಿದ್ದರು. ಆ ವೇಳೆ ಕೆಲ ಮಕ್ಕಳು ಕಾವೇರಿ ನದಿಯಲ್ಲಿ ಈಜಲು ತೆರಳಿದ್ದಾರೆ. ಅಲ್ಲಿ ನದಿಯ ಸುಳಿಗೆ ಸಿಲುಕಿ ಮುಳುಗಲಾರಂಭಿಸಿದ್ದಾರೆ. ಅಲ್ಲಿ ಸಮಯಪ್ರಜ್ಞೆ ಮೆರೆದಿದ್ದ ಬಾಲಕ ಲೆನಿನ್​ ಬೋಪಣ್ಣ, ನಾಲ್ವರು ಸಹಪಾಠಿಗಳನ್ನು ಸುಳಿಯಿಂದ ಉಳಿಸಿದ್ದ. ಆದರೆ ಅದೇ ಸುಳಿಗೆ ಸಿಕ್ಕು ತಾನು ಪ್ರಾಣ ಬಿಟ್ಟಿದ್ದ.

    ಲೆನಿನ್​ನಗೆ ಇದೀಗ ಮರಣೋತ್ತರವಾಗಿ ಹೊಯ್ಸಳ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ತಂದೆ ಮದೀರಾ ಹರೀಶ್ ಮತ್ತು ತಾಯಿ ಕವಿತಾ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ನನ್ನ ಮಗನ ಧೀರತನಕ್ಕೆ ಈ ಪ್ರಶಸ್ತಿ ಸಿಕ್ಕಿದೆ ಎಂದು ಮದೀರಾ ಹರೀಶ್​ ಹೇಳಿದ್ದಾರೆ. (ಏಜೆನ್ಸೀಸ್​)

    ಶರಾವತಿ ಸೇತುವೆ ಮೇಲೆ ಅಪಘಾತ; ಪೋಸ್ಟ್​ ಮಾಸ್ಟರ್​ ಸ್ಥಳದಲ್ಲೇ ಸಾವು

    ಕೇರಳ ಚುನಾವಣೆಗೆ ಮುನ್ನವೇ ಕೈ ಕೊಟ್ಟ ಕಾಂಗ್ರೆಸ್​ ನಾಯಕ! ಪಕ್ಷದಲ್ಲಿ ಪ್ರಜಾಪ್ರಭುತ್ವ ಸತ್ತಿದೆ ಎಂದು ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts