More

    ಕೆಲಸಕ್ಕೆ ಹಾಜರಾದ ಬಸ್​​ ಚಾಲಕನಿಗೆ ಕಲ್ಲಿನಿಂದ ಹೊಡೆದು ಹತ್ಯೆ: ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ದೂರು

    ಚಾಮರಾಜನಗರ: ಜಮಖಂಡಿ ಸಾರಿಗೆ ಬಸ್​ ಡಿಪೋ ಚಾಲಕ ಎನ್.ಕೆ. ಅವಟಿ ಸಾವು ಪ್ರಕರಣ ಸಂಬಂಧ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಮತ್ತೊಂದು ರೈತ ಸಂಘಟನೆ ದೂರು ದಾಖಲಿಸಿದೆ.

    ಸಾರಿಗೆ ನೌಕರರ ಮುಷ್ಕರದ ನಡುವೆಯೂ ಕೆಲಸಕ್ಕೆ ಹಾಜರಾದ ಕೆಎಸ್​ಆರ್​ಟಿಸಿ ಬಸ್​ ಚಾಲಕ ಎನ್.ಕೆ. ಅವಟಿ (55) ಅವರಿಗೆ ಕಿಡಿಗೇಡಿಗಳು ಮನಸೋಇಚ್ಛೆ ಕಲ್ಲು ಬೀಸಿ ಶುಕ್ರವಾರ ಹತ್ಯೆ ಮಾಡಿದ್ದರು. ಈ ಸಂಬಂಧ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾ ರೈತಸಂಘ (ಒರಿಜಿನಲ್) ಅಧ್ಯಕ್ಷ ಕೆ.ಎಂ.ಮಾದಪ್ಪ ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಕೋಡಿಹಳ್ಳಿ ಚಂದ್ರಶೇಖರ್​ರ ಪ್ರಚೋದನೆಯಿಂದಲೇ ಕಲ್ಲು ತೂರಾಟ ನಡೆದಿದೆ. ಚಾಲಕನ ಸಾವಿಗೆ ಕೋಡಿಹಳ್ಳಿ ಮತ್ತು ಅವರ ಆಪ್ತರೇ ಕಾರಣ. ಕೋಡಿಹಳ್ಳಿಯ ಸಂಚು- ಪಿತೂರಿಗಳಿಂದ ರೈತರು ಮೋಸ ಹೋಗಿದ್ದಾರೆ. ಇದೀಗ ಸಾರಿಗೆ ನೌಕರರೂ ಅವರ ವಿಷಜಾಲಕ್ಕೆ ಸಿಲುಕಿದ್ದಾರೆ. ಸಾರಿಗೆ ನೌಕರರ ಮುಷ್ಕರಕ್ಕೆ ಪ್ರಚೋದನೆ ನೀಡಿ ರೈತರಿಗೆ ತೊಂದರೆ ಕೊಡುವ ಕೆಲಸವನ್ನ ಮಾಡಲಾಗುತ್ತಿದೆ. ಸಣ್ಣ ರೈತರ ಹಣ್ಣು, ಹೂ, ತರಕಾರಿ, ರೇಷ್ಮೆಗೂಡು ಸಾಗಾಟಕ್ಕೆ ತೊಂದರೆಯಾಗಿದೆ ಎಂದು ಕಿಡಿಕಾರಿದರು.

    ಕೆಲಸಕ್ಕೆ ಹಾಜರಾದ ಬಸ್​​ ಚಾಲಕನಿಗೆ ಕಲ್ಲಿನಿಂದ ಹೊಡೆದು ಹತ್ಯೆ: ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ದೂರು
    ಎಂ.ಕೆ.ಮಾದಪ್ಪ

    ಶುಕ್ರವಾರ ವಿಜಯಪುರದಿಂದ ಜಮಖಂಡಿ ನಗರಕ್ಕೆ ಬಸ್ ಚಲಾಯಿಸಿಕೊಂಡು ಜಮಖಂಡಿ ಸಾರಿಗೆ ಘಟಕದ ಬಸ್​ ಚಾಲಕ ಎನ್.ಕೆ. ಅವಟಿ ಬರುತ್ತಿದ್ದರು. ಜಮಖಂಡಿಯ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಬಸ್​ ಅನ್ನು ಅಡ್ಡಗಟ್ಟಿದ ಕಿಡಿಗೇಡಿಗಳು ಬಸ್​ನತ್ತ ಕಲ್ಲು ತೂರಿದ್ದರು. ಬಸ್​ ಮುಂಭಾಗದ ಗಾಜನ್ನು ಒಡೆದುಕೊಂಡು ಒಳ ತೂರಿದ ಕಲ್ಲು ಚಾಲಕನ ಮೇಲೆ ಬಿದ್ದಿದ್ದು, ಕಲ್ಲಿನೇಟಿಗೆ ಚಾಲಕ ಬಲಿಯಾಗಿದ್ದರು.

    ಸಾರಿಗೆ ಬಸ್​ ಚಾಲಕನ ಹತ್ಯೆ ಪಕ್ಕಾ ಪ್ಲಾನ್ಡ್! ಇದೇ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ… ಬೆಚ್ಚಿಬೀಳಿಸುತ್ತೆ ನಿನ್ನೆ ನಡೆದ ಘಟನೆ

    ಯುಗಾದಿ ಹಬ್ಬಕ್ಕೆ ತವರು ಮನೆಗೆ ಬಂದ ಮಗಳು-ಅಳಿಯನ ಬದುಕಲ್ಲಿ ದುರಂತ! ಗರ್ಭಿಣಿ ಮಗಳನ್ನೇ ಗುಂಡಿಕ್ಕಿ ಕೊಂದ ತಂದೆ

    ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ​ ನಿಧನ

    ಕಾಡ್ಗಿಚ್ಚಿನಲ್ಲಿ ಸುಟ್ಟುಕರಕಲಾಗಿದ್ದ ವ್ಯಕ್ತಿ ಪ್ರಕರಣ: ಬ್ಯಾನರ್​ ಕೊಟ್ಟ ಸುಳಿವಿಂದ ಬಯಲಾಯ್ತು ನಿಗೂಢ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts