More

    ಮಾ.28ರಿಂದ ಎಸ್ಸೆಸ್ಸೆಲ್ಸಿ ಎಕ್ಸಾಂ: ಹಿಜಾಬ್​ ಧರಿಸಿ ಬಂದ್ರೆ ಪರೀಕ್ಷೆಗಿಲ್ಲ ಅವಕಾಶ

    ಬೆಂಗಳೂರು: ಮಾ.28 ರಿಂದ ಏ.11ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಎಲ್ಲ ವಿದ್ಯಾರ್ಥಿಗಳೂ ಸಮವಸ್ತ್ರ ಧರಿಸಿಯೇ ಎಕ್ಸಾಂಗೆ ಹಾಜರಾಗಬೇಕು. ಹಿಜಾಬ್​ ಧರಿಸಿ ಬಂದವರಿಗೆ ಪರೀಕ್ಷೆಗೆ ಪ್ರವೇಶ ಇಲ್ಲ ಎಂದು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

    ಹಿಜಾಬ್​ ಕುರಿತು ಹೈಕೋರ್ಟ್​ ನೀಡಿರುವ ತೀರ್ಪನ್ನು ಪಾಲಿಸುತ್ತಿರುವ ಶಿಕ್ಷಣ ಇಲಾಖೆ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಿಜಾಬ್​ ಧರಿಸಿ ಬಂದವರಿಗೆ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಕಲ್ಪಿಸುವುದಿಲ್ಲ ಎಂದಿದೆ. ಹಿಜಾಬ್​ ಧರಿಸಿಯೇ ಬರುತ್ತೇವೆ ಎನ್ನುವರು ಅನಿವಾರ್ಯವಾಗಿ ಪರೀಕ್ಷೆಯಿಂದ ಹೊರಗುಳಿಯಬೇಕಾಗುತ್ತದೆ.

    ಹಿಜಾಬ್​ ವಿಚಾರದಲ್ಲಿ ಹೈಕೋರ್ಟ್​ ನೀಡಿರುವ ತೀರ್ಪು ಪಾಲಿಸಿಸುತ್ತಿದ್ದು, ಹಿಜಾಬ್​ ಧರಿಸಿ ಬದವರಿಗೆ ಪರೀಕ್ಷೆಗೆ ಪ್ರವೇಶ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್​ ಹೇಳಿದ್ದಾರೆ.

    ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 15,387 ಶಾಲೆಗಳಿಂದ 8,73,846 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 4,52,732 ಗಂಡು ಮತ್ತು 4,21,110 ಹೆಣ್ಣು ಮಕ್ಕಳಿದ್ದು, 4 ವಿದ್ಯಾರ್ಥಿಗಳು ತೃತೀಯ ಲಿಂಗಿಗಳಾಗಿದ್ದಾರೆ. 3,444 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈಗಾಗಲೇ ಪ್ರವೇಶಪತ್ರ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ಡೌನ್​ಲೋಡ್​ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕು.

    ಸಹಾಯವಾಣಿ: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು, ಮಾ.27ರವರೆಗೆ ಬೆಳಗ್ಗೆ 9.30ರಿಂದ ಸಂಜೆ 6 ಗಂಟೆವರೆಗೆ ಕಾರ್ಯನಿರ್ವಹಿಸುತ್ತದೆ. ಸಹಾಯವಾಣಿ ಸಂಖ್ಯೆ: 080-23310075, 76 ಅನ್ನು ಸಂಪರ್ಕಿಸಬಹುದು.

    ಮಾಸ್ಕ್​ ಕಡ್ಡಾಯ ಅಲ್ಲ: ಕರೊನಾ ಸೋಂಕಿನ ಪ್ರಕರಣಗಳು ಕಡಿಮೆ ಆಗಿರುವುದರಿಂದ ವಿದ್ಯಾರ್ಥಿಗಳು ಮಾಸ್ಕ್​ ಧರಿಸಿಸದೇ ಇದ್ದರೂ ಪ್ರವೇಶ ಕಲ್ಪಿಸಲು ನಿರ್ಧರಿಸಿದೆ. ಪರೀಕ್ಷೆ ವೇಳೆ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್​ಒಪಿ) ಅನುಸರಿಸಲು ಸೂಚಿಸಲಾಗಿದೆ.

    ಏ.21ರ ನಂತರ 34 ಜಿಲ್ಲೆಗಳಲ್ಲಿ 234 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಮೇ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟಿಸಲು ಕ್ರಮವಹಿಸಲಾಗಿದೆ.

    ಕುಡಿದು ಸಿಟ್ಟಿನಿಂದ ಸಿಎಂಗೆ ಬೈದಿದ್ದೀನಿ… ದಯವಿಟ್ಟು ಕ್ಷಮಿಸಿ: ಶಾಬಾಜ್​ ಉಲ್ಲಾಖಾನ್​

    ವಿದ್ಯಾರ್ಥಿಗಳಿಗೆ ಕೆಜಿಎಫ್​ ಬಾಬು ಕೊಟ್ಟ ಚೆಕ್​ಗಳು ಬೌನ್ಸ್: ಮಕ್ಕಳಿಗೆ ಡಿಡಿ ವಿತರಿಸಿ ಕ್ಷಮೆ ಕೇಳಿದ ಪತ್ನಿಯರು

    ಬೀಗರ ಮನೆಯಲ್ಲಿ ಊಟ ಮುಗಿಸಿ ಮಂಡ್ಯದಿಂದ ಬೆಂಗ್ಳೂರಿಗೆ ಹೊರಟಿದ್ದ ಇಬ್ಬರು ಮಾರ್ಗಮಧ್ಯೆ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts