More

    ಬ್ಯಾಂಕ್​ ಕ್ಯಾಷಿಯರ್​ನಿಂದ ವಂಚನೆ!; ಅಪರಾಧಿಗೆ 7 ವರ್ಷ ಜೈಲು ಶಿಕ್ಷೆ, 2.19 ಕೋಟಿ ರೂ. ದಂಡ

    ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕೊಂದರ ಕ್ಯಾಷಿಯರ್​ಗೆ 7 ವರ್ಷಗಳ ಕಠಿಣ ಶಿಕ್ಷೆ ಹಾಗೂ 2.19 ಕೋಟಿ ರೂ. ದಂಡ ವಿಧಿಸಿ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಬ್ಯಾಂಕ್ ಕ್ಯಾಷಿಯರ್​ ಬಿ. ದಿನೇಶ್ ಶಿಕ್ಷೆಗೊಳಗಾಗಿರುವ ಅಪರಾಧಿ.

    ಮೈಸೂರು ಜಿಲ್ಲೆಯ ಪೆರಿಯಪಟ್ಟಣದಲ್ಲಿರುವ ರಾಷ್ಟ್ರೀಕೃತ ಬ್ಯಾಂಕೊಂದರ ಶಾಖೆಯಲ್ಲಿ ಹೆಡ್ ಕ್ಯಾಷಿಯರ್ ಆಗಿದ್ದ ದಿನೇಶ್​, ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಸರ್ಕಾರದ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದರು.

    ಡಿಮಾನಿಟೈಸೇಷನ್​ ಆಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಅಧಿಸೂಚನೆ ಉಲ್ಲಂಘಿಸಿ, ಅಮಾನ್ಯೀಕರಣಗೊಂಡ 2,18,46,300 ರೂ. ಮೊತ್ತದ ನೋಟುಗಳನ್ನು ಚಾಲ್ತಿಯಲ್ಲಿರುವ ಹಣಕ್ಕೆ ಬದಲಿಸಿಕೊಟ್ಟು ವಂಚನೆ ಎಸಗಿದ ಆರೋಪದ ಮೇಲೆ ದಿನೇಶ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇಂದು ತೀರ್ಪಿತ್ತ ಸಿಬಿಐ ವಿಶೇಷ ನ್ಯಾಯಾಲಯ, ದಿನೇಶ್​ಗೆ 7 ವರ್ಷಗಳ ಕಠಿಣ ಶಿಕ್ಷೆ ಹಾಗೂ 2,19,35,000 ರೂ. ಕಠಿಣ ಶಿಕ್ಷೆ ವಿಧಿಸಿದೆ.

    ಬೇರೆ ಖಾತೆದಾರರು ಜಮಾ ಮಾಡಿದ್ದ ಮೊತ್ತದಲ್ಲಿನ ಡಿನಾಮಿನೇಷನ್​ಗಳನ್ನು ಬದಲಿಸಿ, ಬೇರೊಬ್ಬರಿಗೆ ಹಣ ಪರಿವರ್ತಿಸಿಕೊಳ್ಳಲು ದಿನೇಶ್ ಕಾನೂನುಬಾಹಿರವಾಗಿ ಅನುಕೂಲ ಮಾಡಿಕೊಟ್ಟಿದ್ದ. ಈ ಸಂಬಂಧ 2016ರಲ್ಲಿ ಸಿಬಿಐ ಕೇಸು ದಾಖಲಿಸಿಕೊಂಡಿದ್ದು, 2017ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

    ಬೆಂಗಳೂರು ಬಿಟ್ಟು ಹೈದರಾಬಾದ್​ಗೆ ಬನ್ನಿ ಎಂದ ತೆಲಂಗಾಣ ಸಚಿವ; ದಿಟ್ಟ ಉತ್ತರ ಕೊಟ್ಟ ಡಾ.ಕೆ.ಸುಧಾಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts