More

    ತುಮಕೂರು ಲೋಕಸಭೆ ಚುನಾವಣೆಯಲ್ಲಿ ಎಸ್​ಪಿಎಂಗೆ ಟಿಕೆಟ್​ ಕೈ ತಪ್ಪಿದ್ದರ ರಹಸ್ಯ ಬಯಲು! ಡಿಕೆ ಬ್ರದರ್ಸ್​ ವಿರುದ್ಧ ಆಕ್ರೋಶ

    ಕುಣಿಗಲ್​: ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರ ಭಾರಿ ಸುದ್ದಿಯಲ್ಲಿತ್ತು. ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಸ್ಪರ್ಧಿಸಿದ್ದರು. ಮಾಜಿ ಸಂಸದ ಎಸ್​.ಪಿ.ಮುದ್ದಹನುಮೇಗೌಡರಿಗೆ ಕೊನೇ ಕ್ಷಣದಲ್ಲಿ ಕಾಂಗ್ರೆಸ್​ನಿಂದ ಟಿಕೆಟ್​ ಕೈತಪ್ಪಿತ್ತು. ಅಂತಿಮವಾಗಿ ಸ್ಪರ್ಧೆಯಿಂದ ಕಾಂಗ್ರೆಸ್ ಹಿಂದೆ ಸರಿದಿತ್ತು. ಎಸ್​ಪಿಎಂಗೆ ಟಿಕೆಟ್​ ತಪ್ಪಿದ್ದರ ಹಿಂದಿನ ಕೈ ಯಾರದ್ದು? ಎಂಬ ಕುತೂಹಲಕ್ಕೆ ಇದೀಗ ಸ್ವತಃ ಎಸ್​ಪಿಎಂ ತೆರೆ ಎಳೆದಿದ್ದಾರೆ.

    ಜಿಲ್ಲೆಯ ಜನರು, ಮುಖಂಡರು ನನ್ನ ಸರ್ಧೆ ಬಯಸಿದ್ದರು. ಆದರೆ, ನನ್ನನ್ನು ಎರಡನೇ ಸಲ ಎಂಪಿ ಆಗದಂತೆ ತಡೆದ ಮಹಾನುಭಾವರ ಬಗ್ಗೆ ನನ್ನ ಬಳಿ ಮಾಹಿತಿಯಿದೆ. ದೇಶದಲ್ಲಿ ಎಲ್ಲ ಲೋಕಸಭಾ ಸದಸ್ಯರಿಗೆ ಟಿಕೆಟ್​ ಕೊಟ್ಟು ನನಗೊಬ್ಬನಿಗೆ ಟಿಕೆಟ್​ ಕೊಡದೆ ಸ್ಪಧಿರ್ಸಲು ಅವಕಾಶ ನೀಡಲಿಲ್ಲ, ನನಗೇಕೆ ಟಿಕೆಟ್​ ನೀಡಲಿಲ್ಲ ಎಂದು ಕೇಂದ್ರದ ನಾಯಕರನ್ನು ಪ್ರಶ್ನಿಸಿದೆ, ಯಾರೊಬ್ಬರೂ ಉತ್ತರ ನೀಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್​ ಹೈಕಮಾಂಡ್​ಗೆ ಹತ್ತಿರವಾಗಿದ್ದ ನನ್ನನ್ನು ಎರಡನೇ ಸಲ ಸಂಸತ್​ ಪ್ರವೇಶಿಸದಂತೆ ದೊಡ್ಡ ಷಡ್ಯಂತ್ರ ಮಾಡಿದ ಮಹಾನುಭಾವರ ಮಾಹಿತಿ ನನ್ನ ಬಳಿಯಿದೆ. ಸಮಯ ಬಂದಾಗ ಬಹಿರಂಗಪಡಿಸುತ್ತೇನೆ. ಎಂಪಿ ಟಿಕೆಟ್​ ಕಿತ್ತುಕೊಂಡು ನನ್ನ ರಾಜಕೀಯವಾಗಿ ಮುಗಿಸಲು ನಡೆಸಿರುವ ಕುತಂತ್ರಕ್ಕೆ ಕುಣಿಗಲ್​ ಜನರೇ ಉತ್ತರ ನೀಡುತ್ತಾರೆ ಎಂದು ಪರೋಕ್ಷವಾಗಿ ಡಿಕೆ ಬ್ರದರ್ಸ್​ ವಿರುದ್ಧ ಎಸ್​ಪಿಎಂ ಕಿಡಿಕಾರಿದ್ದಾರೆ.

    ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್​ನಿಂದ ಸ್ಪರ್ಧಿಸಲು ಸಜ್ಜಾಗಿರುವ ಎಸ್​ಪಿಎಂ ಕ್ಷೇತ್ರದ ದೇವಮೂಲೆ ಗಿಡದಪಾಳ್ಯ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಸೋಮವಾರ ಚುನಾವಣಾ ರಣಕಹಳೆ ಮೊಳಗಿಸಿದರು. ಈ ವೇಳೆ ಮಾತನಾಡಿದ ಎಸ್​ಪಿಎಂ, ಕುಣಿಗಲ್​ ಕ್ಷೇತ್ರದ ಜನರನ್ನು ನಂಬಿ ನನ್ನ ಮನೆ ದೇವರಿಗೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ್ದೇನೆ, ಕುಣಿಗಲ್​ ವಿಧಾನಸಭಾ ಕ್ಷೇತ್ರದಲ್ಲಿ ನನಗೆ ಸತತ ಐದು ಬಾರಿ ಟಿಕೆಟ್​ ತಪ್ಪಿಸಿರುವ ಬಗ್ಗೆ ಜನರಿಗೂ ಮಾಹಿತಿಯಿದೆ. ಈ ಬಗ್ಗೆ ಕುಣಿಗಲ್​ ಜನತಾ ನ್ಯಾಯಾಲಯದ ಮುಂದೆ ನನಗಾದ ಅನ್ಯಾಯ ಒಪ್ಪಿಸುತ್ತೇನೆ. ಕುಣಿಗಲ್​ ರಾಜಕಾರಣ ಹಾಗೂ ನಾನು ಎರಡನೇ ಬಾರಿ ಸಂಸತ್​ ಸದಸ್ಯನಾಗಬಾರದು ಎಂಬ ವಿಷಯಗಳ ನಡುವೆ ನೇರವಾದ ಸಂಬಂಧವಿದೆ. ಈ ಬಗ್ಗೆ ಅಗತ್ಯ ಸಂದರ್ಭದಲ್ಲಿ ಜನರ ಮುಂದಿಡುತ್ತೇನೆ ಎಂದರು.

    ತುಮಕೂರು ಲೋಕಸಭೆ ಚುನಾವಣೆಯಲ್ಲಿ ಎಸ್​ಪಿಎಂಗೆ ಟಿಕೆಟ್​ ಕೈ ತಪ್ಪಿದ್ದರ ರಹಸ್ಯ ಬಯಲು! ಡಿಕೆ ಬ್ರದರ್ಸ್​ ವಿರುದ್ಧ ಆಕ್ರೋಶ

    ಕುಣಿಗಲ್​ ಕ್ಷೇತ್ರದಲ್ಲಿ ಸತತ ಎರಡು ಬಾರಿ ಶಾಸಕರಾಗಿದ್ದ ಮುದ್ದಹನುಮೇಗೌಡ ತಾಲೂಕಿನಲ್ಲಿ ಕಾಂಗ್ರೆಸ್​ ಕಟ್ಟಿ ಬೆಳೆಸಿದ್ದಾರೆ. ಹಾಗಾಗಿ, ಈ ರಾಜಕೀಯ ಸಂದಿಗ್ಧ ಪರಿಸ್ಥಿತಿಯಲ್ಲಿ ಬಹುತೇಕ ಕಾಂಗ್ರೆಸ್​ ಮುಖಂಡರು ಎಸ್​ಪಿಎಂ ಜತೆ ಗುರುತಿಸಿಕೊಳ್ಳುವ ಸಾಧ್ಯತೆಯಿದೆ. ಅವರ ಸ್ಪರ್ಧೆ ಖಚಿತವಾದರೆ ಕಾಂಗ್ರೆಸ್​ ಪಾಳಯದಲ್ಲಿ ದೊಡ್ಡ ಬಿರುಗಾಳಿಯೇ ಬರಲಿದೆ. ಹಾಲಿ ಶಾಸಕರೂ ಕೂಡ ಕಾಂಗ್ರೆಸ್​ ಪಕ್ಷದವರೇ ಆದರೂ ಕುಣಿಗಲ್​ ಕಾಂಗ್ರೆಸ್​ನಲ್ಲಿ ಎಸ್​ಪಿಎಂ ಪರವಾದ ವಾತಾವರಣವಿರಲಿದೆ ಎಂಬ ನಂಬಿಕೆ ಅವರ ಬೆಂಬಲಿಗರಲ್ಲಿದೆ.

    ಶಾಲೆಯಲ್ಲೇ ವಿದ್ಯಾರ್ಥಿನಿ ಜತೆ ಮುಖ್ಯಶಿಕ್ಷಕ ರೊಮಾನ್ಸ್​! ತಬ್ಬಿಕೊಂಡು ಮುತ್ತಿಡುತ್ತಿರುವ ವಿಡಿಯೋ ವೈರಲ್​, ಎಚ್​.ಡಿ.ಕೋಟೆಯಲ್ಲಿ ಘಟನೆ

    ಸೇತುವೆ ಮೇಲಿಂದ ಪ್ರಪಾತಕ್ಕೆ ಕಾರು ಪಲ್ಟಿ: ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳು ದಾರುಣ ಸಾವು

    ಒಲ್ಲೆ ಎಂದರೂ ಅಣ್ಣನ ಎದುರೇ ‘ಬಾ.. ಮೊದಲಿನಂತೆ ನನ್ನ ಜತೆಗಿರು ಬಾ..’ ಎಂದು ಸೋದರಿಯನ್ನ ಪೀಡಿಸುತ್ತಿದ್ದ… ನಡೆದೇ ಹೋಯ್ತು ಘೋರ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts