More

    ಮೊಟ್ಟೆ-ಬಟ್ಟೆಯಲ್ಲಿ ರಾಜಕೀಯ ಬೇಡ: ಸೌಹಾರ್ದ ಕರ್ನಾಟಕ ಸಂಘಟನೆ

    ಬೆಂಗಳೂರು: ಸರ್ಕಾರ ಮೊಟ್ಟೆ-ಬಟ್ಟೆಯಲ್ಲಿ ರಾಜಕೀಯ ಮಾಡುವುದು ಬಿಟ್ಟು, ಅಭಿವೃದ್ಧಿಯತ್ತ ಗಮನ ನೀಡಿದರೆ, ನಮ್ಮ ದೇಶ ಬೇಗ ಉದ್ಧಾರವಾಗುತ್ತದೆ ಎಂದು ಸೌಹಾರ್ದ-ಕರ್ನಾಟಕ ಸಂಘಟನೆ ಆಗ್ರಹಿಸಿದೆ.

    ಹಿಜಾಬ್ ವಿಚಾರವಾಗಿ ತುಮಕೂರು ಸಿದ್ಧಗಂಗಾ ಮಠಾಧಿಪತಿಗಳ ದರ್ಶನ ಪಡೆದು ಅಲ್ಲಿಂದ, ಸುತ್ತಮುತ್ತ ಇರುವ ದರ್ಗಾಕ್ಕೆ ಪ್ರತಿಭಟನಾ ರ್ಯಾಲಿ ನಡೆಸಲು ಸಂಘಟನೆ ನಿರ್ಧರಿಸಿದೆ. ಹಿಜಾಬ್ ಕುರಿತು ನಡೆಯುತ್ತಿರುವ ಗಲಭೆ ವಿಚಾರವಾಗಿ ಶನಿವಾರ ಖಾಸಗಿ ಹೊಟೇಲ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೌಹಾರ್ದ- ಕರ್ನಾಟಕ ಸಂಚಾಲಕ ರವಿಕುಮಾರ್ ರಾಯಸಂದ್ರ, ನಮ್ಮದು ಸರ್ವ ಧರ್ಮ ದೇಶವಾಗಿದೆ. ಇಲ್ಲಿ ಎಲ್ಲ ಜಾತಿಯವರಿದ್ದಾರೆ. ಇಷ್ಟು ದಿನ ಇಲ್ಲದ ಸಮಸ್ಯೆ ಇದೀಗ ಬಂದಿದೆ. ಬಿಜೆಪಿ ಅವರೇ ಇದರ ಸೃಷ್ಠಿಕೃತರು. ನಮಗೆ ಸಮವಸ್ತ್ರದ ಬಗ್ಗೆ ಬೇಜಾರಿಲ್ಲ. ಆದರೆ, ಮುಖವನ್ನು ಕವರ್ ಮಾಡುವಂತಹ ಹಿಜಾಬ್ ಧರಿಸುವುದು ಬೇಡ ಎಂದರೆ ಹೇಗೆ? ಬಸವಣ್ಣ ಸರ್ವಧರ್ಮ ಪ್ರಚಾರಕಾಗಿದ್ದರು. ಇಂತಹ ನಾಡಿನಲ್ಲಿ ಜಾತಿ, ಧರ್ಮ ಬೀಜ ಬಿತ್ತುವುದು ಸರಿಯಲ್ಲ ಎಂದರು.

    ಸೌಹಾರ್ದ- ಕರ್ನಾಟಕ ಸಂಘಟನೆ ಸಂಚಾಲಕ ಸೈಯ್ಯದ್ ಅಬ್ಬಾಸ್ ಮಾತನಾಡಿ, ದೇಶದಲ್ಲಿ ಶೇ.93 ಶೂದ್ರರು, ಅಲ್ಪ ಸಂಖ್ಯಾತರಿದ್ದಾರೆ. ಹಿಂದು-ಮುಸ್ಲಿಂ ಇಬ್ಬರೂ ಚೆನ್ನಾಗಿಯೇ ಇದ್ದಾರೆ. ಅನವಶ್ಯಕವಾಗಿ ದೊಡ್ಡದು ಮಾಡುವುದು ಬೇಡ. ಪ್ರತಿಯೊಬ್ಬರಿಗೂ ಹಿಂದು- ಮುಸ್ಲಿಂ ಸ್ನೇಹಿತರು ಇದ್ದೇ ಇರುತ್ತಾರೆ. ಇವರ ಮಧ್ಯೆ ಅನವಶ್ಯಕವಾಗಿ ಬಿರುಕು ಮೂಡಿಸುವುದು ಬೇಡ ಎಂದರು.

    ಮೊಟ್ಟೆ-ಬಟ್ಟೆಯಲ್ಲಿ ರಾಜಕೀಯ ಬೇಡ: ಸೌಹಾರ್ದ ಕರ್ನಾಟಕ ಸಂಘಟನೆ

    ಹಿಜಾಬ್ ವಿಚಾರದಲ್ಲಿ ಮಾಠಾಧೀಶರು ಮಾತನಾಡಬೇಕು. ಸರ್ಕಾರ ಮೊದಲು ಶಾಲಾ-ಕಾಲೇಜುಗಳನ್ನು ತೆರೆಯಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಸೌಹಾರ್ದ- ಕರ್ನಾಟಕ ಸಂಘಟನೆ ಸಂಚಾಲಕ ಟಿ.ವಿ.ಸತೀಶ್ ಆಗ್ರಹಿಸಿದರು.

    ಹಿಜಾಬ್ ವಿವಾದ: ಉಡುಪಿ ಶಾಸಕ ರಘುಪತಿ ಭಟ್​ಗೆ ಬೆದರಿಕೆ ಕರೆ

    ವಧುವಿನ ಅಜ್ಜಿ ಸಾವು, ಇಂದು-ನಾಳೆ ನಡೆಯಬೇಕಿದ್ದ ಮದುವೆ ಮುಂದೂಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts