ವಧುವಿನ ಅಜ್ಜಿ ಸಾವು, ಇಂದು-ನಾಳೆ ನಡೆಯಬೇಕಿದ್ದ ಮದುವೆ ಮುಂದೂಡಿಕೆ

wedding
Published on

ಭದ್ರಾವತಿ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಎರಡೂ ಮನೆಯಲ್ಲಿ ಮದ್ವೆ ಸಂಭ್ರಮ ಕಳೆಗಟ್ಟುತ್ತಿತ್ತು. ಫೆ.13ರಂದು ಆ ಜೋಡಿ ಸಪ್ತಪದಿ ತುಳಿಯುತ್ತಲಿತ್ತು. ಆದರೆ, ಆ ವಿಧಿಯಾಟ ವೇರೆಯೇ ಇತ್ತು. ಭದ್ರವಾತಿ ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಫೆ.12 ಹಾಗೂ 13ರಂದು ನಡೆಯಬೇಕಿದ್ದ ಮದುವೆ, ವಧುವಿನ ಅಜ್ಜಿನ ನಿಧನದಿಂದ ಮುಂದಕ್ಕೆ ಹೋಗಿದೆ.

ಭ್ರದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ವಧುವಿನ ಮದುವೆ ಕುಮಾರಿ ನಾರಾಯಣಪುರ ಗ್ರಾಮದ ವರನೊಂದಿಗೆ ನಡೆಯಬೇಕಿತ್ತು. ಆದರೆ ಗುರುವಾರ(ಫೆ.10) ತಡರಾತ್ರಿ ವಧುವಿನ ಅಜ್ಜಿ (ತಂದೆಯ ತಾಯಿ) ಲಕ್ಷ್ಮಮ್ಮ (82) ನಾಗಮಂಗಲ ತಾಲೂಕು ಕದಬಳ್ಳಿಯಲ್ಲಿ ನಿಧನರಾಗಿದ್ದು ಶನಿವಾರ, ಭಾನುವಾರ ನಡೆಯಬೇಕಿದ್ದ ಮದುವೆ ಮುಂದೂಡಲ್ಪಟ್ಟಿದೆ. ಶನಿವಾರ ಮದುವೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದ ವರನ ಕಡೆಯವರು ಈಗ ಪೇಚಾಡುವಂತಾಗಿದೆ. ಮದುವೆ ನಿಂತಿರುವ ವಿಚಾರವನ್ನ ಎರಡೂ ಕುಟುಂಬಸ್ಥರಿಗೂ ಸಂಬಂಧಿಕರಿಗೆ ತಿಳಿಸುವುದೇ ದೊಡ್ಡ ಸಮಸ್ಯೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net